Breaking News
Home / ರಾಜ್ಯ / ಎಲ್ಲಾ ಕಡೆ ಬಿಜೆಪಿ ಇದೆ, ನಮಗೆ ರಕ್ಷಣೆ ಯಾವಾಗ?: ಹರ್ಷ ಸಹೋದರಿ ಪ್ರಶ್ನೆ

ಎಲ್ಲಾ ಕಡೆ ಬಿಜೆಪಿ ಇದೆ, ನಮಗೆ ರಕ್ಷಣೆ ಯಾವಾಗ?: ಹರ್ಷ ಸಹೋದರಿ ಪ್ರಶ್ನೆ

Spread the love

ಶಿವಮೊಗ್ಗ: ಹರ್ಷನ ಕಳಕೊಂಡು 8 ತಿಂಗಳು ಆಗಿದೆ, ಈಗಲೂ ಪ್ರೇಮಸಿಂಗ್ ಚೂರಿ ಇರಿತ ಸೇರಿದಂತೆ ಪ್ರಕರಣ ನಡೆಯುತ್ತಲೇ ಇದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಇದೆ, ಮೇಲಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಇದೆ.ನಮಗೆ ರಕ್ಷಣೆ ಯಾವಾಗ ಸಿಗುತ್ತದೆ ಎಂದು ಹರ್ಷ ಸಹೋದರಿ ಅಶ್ವಿನಿ ಮಂಗಳವಾರ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

 

ಸುದಿಗಾರರೊಂದಿಗೆ ಮಾತನಾಡಿ,ಹಿಂದುತ್ವದ ಕೆಲಸ ಮಾಡುತ್ತಿದ್ದ ಎಂದು ಹರ್ಷನ ಟಾರ್ಗೆಟ್ ಮಾಡಿ ಹೊಡೆದರು. ಅಂಥವನನ್ನೇ ಕೊಲ್ಲುತ್ತಾ ರೆಂದರೆ, ನಮಗೆ ಯಾವ ರಕ್ಷಣೆ ಕೊಡುತ್ತೀರಿ ಎಂದು ಬಿಜೆಪಿ ಸರಕಾರವನ್ನು ಪ್ರಶ್ನಿಸಿದ್ದಾರೆ.

ನಮ್ಮ ಮನೆ ಪರಿಸ್ಥಿತಿ ಕೇಳುವುದಕ್ಕೆ ಯಾರೂ ಇಲ್ಲ. ಹರ್ಷ ಸತ್ತಾಗ ಪ್ರತಿಯೊಬ್ಬರೂ ಬಂದು ನಾವಿದ್ದೇವೆ ಎಂದರು. ನಾಳೆ ನಾವು ಸತ್ತಾಗಲೂ ಇದನ್ನೇ ಹೇಳುತ್ತಾರೆ. ಮಕ್ಕಳನ್ನು ಸಾಯಿಸಿದಾಗ ನಮ್ಮ ಅಪ್ಪ-ಅಮ್ಮನ ಗತಿ ಏನಾಗಬೇಕು? ನಾವು ಯಾರ ಹತ್ತಿರ ಹೋಗಿ ಕೇಳೋಣ? ಯಾರಿಗೆ ನೀವು ಮೊದಲು ರಕ್ಷಣೆ ಕೊಡುವುದು ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಕೇಂದ್ರ ಸರ್ಕಾರದ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ : ವಿನಯ ಜವಳಿ

Spread the loveಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡನೆ ಮಾಡಿರುವ ಕೇಂದ್ರ ಬಜೆಟ್ ನಿಜಕ್ಕೂ ದೂರದೃಷ್ಟಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ