Breaking News
Home / ರಾಜಕೀಯ / ಒಂದು ಲಡ್ಡುವಿನ ಬೆಲೆ 24.60 ಲಕ್ಷ ರೂ! ಹರಾಜಿನಲ್ಲಿ ದಾಖಲೆ ಬರೆದ ಬಾಲಾಪುರದ ಗಣಪ

ಒಂದು ಲಡ್ಡುವಿನ ಬೆಲೆ 24.60 ಲಕ್ಷ ರೂ! ಹರಾಜಿನಲ್ಲಿ ದಾಖಲೆ ಬರೆದ ಬಾಲಾಪುರದ ಗಣಪ

Spread the love

ಹೈದರಾಬಾದ್: ಗಣೇಶನ ಹಬ್ಬದ ಲಡ್ಡು ಎಂದಾಕ್ಷಣ ನೆನಪಾಗುವುದು ಹೈದರಾಬಾದ್​ನ ಬಾಲಾಪುರ. ಏಕೆಂದರೆ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಒಂಬತ್ತು ದಿನಗಳವರೆಗೆ ಬಾಲಾಪುರದ ಗಣೇಶೋತ್ಸವ ನಡೆಯುತ್ತದೆ.

9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ.

ಕಳೆದ ವರ್ಷ 18 ಲಕ್ಷ 90 ಸಾವಿರ ರೂಪಾಯಿಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.

ಬಾಲಾಪುರ ಗಣೇಶ ಉತ್ಸವ ಕಮೀಟಿ ಸದಸ್ಯ ವಂಗೇಟಿ ಲಕ್ಷ್ಮಾರೆಡ್ಡಿ ಎನ್ನುವವರು ಈ ದಾಖಲೆ ಬರೆದಿದ್ದಾರೆ. ಅವರು 24 ಲಕ್ಷ 60 ಸಾವಿರ ರೂಪಾಯಿಗೆ ಲಡ್ಡು ಖರೀದಿ ಮಾಡಿದ್ದಾರೆ. ಇದರ ಅರ್ಥ ಕಳೆದ ವರ್ಷಕ್ಕಿಂತ 5.70 ಲಕ್ಷ ರೂಪಾಯಿ ಹೆಚ್ಚಿನ ಬೆಲೆಗೆ ಲಡ್ಡು ಮಾರಾಟವಾಗಿದೆ.

ಅಂದಹಾಗೆ ಈ ವರ್ಷದ ಲಡ್ಡು 21 ಕೆಜಿ ತೂಕದ್ದು. ಇದನ್ನು ಖರೀದಿ ಮಾಡಿದವರ ಜೀವನದಲ್ಲಿ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿಯೇ ಇದನ್ನು ಬಂಗಾರು ಲಡ್ಡು (ಚಿನ್ನದ ಲಡ್ಡು) ಎಂದೇ ಕರೆಯಲಾಗುತ್ತದೆ. ಈ ಲಡ್ಡು ಖರೀದಿಗೆ ಅಕ್ಕಪಕ್ಕದ ರಾಜ್ಯಗಳಿಂದಲೂ ಜನ ಬರುತ್ತಾರೆ. ಅತಿಹೆಚ್ಚಿನ ಮೊತ್ತದ ಬಿಡ್​ ಕೂಗಿದವರಿಗೆ ಲಡ್ಡು ನೀಡಲಾಗುತ್ತದೆ. ಹರಾಜಿನಿಂದ ಬಂದ ಮೊತ್ತವನ್ನು ಬಾಲಾಪುರದ ದೇವಸ್ಥಾನ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ