Home / ಜಿಲ್ಲೆ / ಬೆಳಗಾವಿ / ಜಿಲ್ಲೆಯ ಎರಡು ಕಡೆಗಳಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆಯವರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ಕಿ ಅಕ್ರಮ ಬಯಲು

ಜಿಲ್ಲೆಯ ಎರಡು ಕಡೆಗಳಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆಯವರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ಕಿ ಅಕ್ರಮ ಬಯಲು

Spread the love

ಬೆಳಗಾವಿ: ಜಿಲ್ಲೆಯ ಎರಡು ಕಡೆಗಳಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆಯವರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ಕಿ ಅಕ್ರಮ ಬಯಲು ಮಾಡಿದ್ದಾರೆ.

ಹಾರೂಗೇರಿ ಪೊಲೀಸರು ಹಿಡಕಲ್ ಬಳಿ ದಾಳಿ ನಡೆಸಿ ಕ್ಯಾಂಟರ್ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ 11.520 ಟನ್ ಅಕ್ರಮ ಅಕ್ಕಿ ವಶಪಡಿಸಿಕೊಂಡಿದ್ದಾರೆ. 384 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ ಈ ಅಕ್ಕಿ ಮೌಲ್ಯ 2,53, 440 ರೂ. ಆಗಿದೆ.

ಈ ಸಂಬಂಧ ಲಾರಿ ಮಾಲೀಕ ಹಾಗೂ ಚಾಲಕ, ಮೂಡಲಗಿಯ ಸಂಗನಕೇರಿ ನಿವಾಸಿ ಯಮನಪ್ಪ ಭೀಮಪ್ಪ ಮಾಳ್ಯಾಗೋಳ (47) ನನ್ನು ಬಂಧಿಸಲಾಗಿದೆ. ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕಾಗವಾಡ ತಾಲೂಕಿನ ಲೋಕೂರ ಗ್ರಾಮದ ಬನಶಂಕರಿ ಆಗ್ರೋ ಪ್ರೊಸೆಸ್ ಪ್ರೈ. ಲಿಮಿಟೆಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ತಲಾ 40 ಕೆಜಿಯಂತೆ 2200 ಕೆಜಿಯ 55 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 48,400 ರೂ. ಆಗಿದೆ.

ಅಥಣಿ ತಾಲೂಕು ಆಹಾರ ನಿರೀಕ್ಷಕ ಮುಜಾವರ, ಲೋಕೂರ ಗ್ರಾಮಲೆಕ್ಕಿಗ ಕೆ.ಪಿ. ಬಡಿಗೇರ, ಸಿಪಿಸಿ ಎಂ.ಬಿ. ಪಾಟೀಲ ಹಾಗೂ ಕಾಗವಾಡ ಪಿಎಸ್ ಐ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ