Breaking News
Home / ಜಿಲ್ಲೆ / ಬೆಳಗಾವಿ / ಕಾರಜೋಳರು ಬರೆದ ಪತ್ರಕ್ಕೆ ಒಂದು ತಿಂಗಳು ತುಂಬುವ ಮೊದಲೇ ಮಲಪ್ರಭೆಯ ” ವಿಮೋಚನೆ” ಗೆ ಕೈ ಹಾಕಿದ ರಮೇಶ ಜಾರಕಿಹೊಳಿ!

ಕಾರಜೋಳರು ಬರೆದ ಪತ್ರಕ್ಕೆ ಒಂದು ತಿಂಗಳು ತುಂಬುವ ಮೊದಲೇ ಮಲಪ್ರಭೆಯ ” ವಿಮೋಚನೆ” ಗೆ ಕೈ ಹಾಕಿದ ರಮೇಶ ಜಾರಕಿಹೊಳಿ!

Spread the love

ಕಳೆದ ಅಗಷ್ಟ 23 ರಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಪಿಡಬ್ಲುಡಿಖಾತೆಯ ಸಚಿವ ಶ್ರೀ ಗೋವಿಂದಕಾರಜೋಳರು ಮಲಪ್ರಭೆಯ ಅತಿಕ್ರಮಣತೆರವುಗೊಳಿಸುವ ಸಂಬಂಧ ನೀರಾವರಿನೀರಾವರಿಸಚಿವರಿಗೆ ಬರೆದ ಪತ್ರಕ್ಕೆಒಂದು ತಿಂಗಳು ತುಂಬುವ ಮುನ್ನವೇಬೆಳಗಾವಿಯ ಸುವರ್ಣಸೌಧದಲ್ಲಿಸಪ್ಟೆಂಬರ್ 20 ರಂದು ಉನ್ನತ ಮಟ್ಟದ ಸಭೆ ನಡೆದಿರುವದು ಮಲಪ್ರಭೆ ತೀರದ ಜನತೆಯಲ್ಲಿ ಹೊಸ ಆಶಾಭಾವನೆ ಉಂಟು ಮಾಡಿದೆ.


ನೀರಾವರಿ ಸಚಿವ ಶ್ರೀ ರಮೇಶ ಜಾರಕಿಹೊಳಿ ಅವರು ನಿನ್ನೆ ಶನಿವಾರ ನಡೆಸಿದ ಸಭೆಯು ಬೆಳಗಾವಿ,ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಏಳು ತಾಲೂಕುಗಳ ನದಿ ತೀರದ ಜನತೆಯಲ್ಲಿ ಮಲಪ್ರಭೆಯ ವಿಮೋಚನೆಯ ಬಗ್ಗೆ ಹೊಸ ನಿರೀಕ್ಷೆಯನ್ನು ಮೂಡಿಸಿದೆ.
ಕಾರಜೋಳರು ಪತ್ರ ಬರೆದು ಅತಿಕ್ರಮಣ ತೆರವಿಗೆ ಕ್ರಮ ಕೈಕೊಳ್ಳಬೇಕೆಂದು ಜಾರಕಿಹೊಳಿಯವರಿಗೆ ಮನವಿ ಮಾಡಿದ ಬೆನ್ನ ಹಿಂದೆಯೇ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಮಲಪ್ರಭೆಯ ಅತಿಕ್ರಮಣದ ಬಗ್ಗೆ ಅನೇಕ ವರದಿಗಳು ಪ್ರಕಟಗೊಂಡವು,ಪ್ರಸಾರವಾದವು.


ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಕಾರಜೋಳ ಮತ್ತು ಜಾರಕಿಹೊಳಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿತಲ್ಲದೇ ಕಳಸಾ ಬಂಡೂರಿ ತಿರುವು ಯೋಜನೆಯ ಅನುಷ್ಠಾನದ ಮೊದಲೇ ಅತಿಕ್ರಮಣ ತೆರವುಗೊಳಿಸುವ ಅನಿವಾರ್ಯತೆ ಮತ್ತು ಅವಶ್ಯಕತೆಯ ಬಗ್ಗೆ ವಿವರಿಸಿತು.
ಸುವರ್ಣ ಸೌಧದಲ್ಲಿ ನಡೆದ ಮೊದಲ ಸುತ್ತಿನ ಸಭೆಯ ನಂತರ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲು ಸಿದ್ಧರಾಗಿರುವ ಜಾರಕಿಹೊಳಿಯವರು ಮಲಪ್ರಭೆಯ ವಿಮೋಚನೆಗೆ ದೃಢವಾದ ನಿಲುವು ತಳೆದಿದ್ದು ಸ್ಪಷ್ಟವಾಗಿದೆ.

ಕಳೆದ ಏಳೆಂಟು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ನೀರಾವರಿ ಯೋಜನಾ ಪ್ರದೇಶಗಳಿಗೆ ಭೆಟ್ಟಿ ನೀಡುತ್ತಿರುವ ಅವರು ಕಾವೇರಿ,ಕೃಷ್ಣೆ ಮತ್ತು ಮಹಾದಾಯಿ ಯೋಜನೆಗಳ ಬಗ್ಗೆ ಚರ್ಚಿಸಲು ಅನೇಕ ಬಾರಿ ದಿಲ್ಲಿಯ ಪ್ರವಾಸ ಕೈಕೊಂಡಿದ್ದಾರೆ.
ಮಲಪ್ರಭೆಯ ವಿಮೋಚನೆಯ ಸಂಬಂಧ ಹೋರಾಟದ ಹಾದಿ ಹಿಡಿಯಲು ಮೂರು ಜಿಲ್ಲೆಗಳ ಏಳು ತಾಲೂಕುಗಳ ಜನರು ಚಿಂತನೆಯಲ್ಲಿ ತೊಡಗಿರುವಾಗಲೇ ಸುವರ್ಣ ಸೌಧದಲ್ಲಿ ಸಭೆ ನಡೆದಿರುವದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಅಕ್ಟೋಬರ್ ಅಂತ್ಯದವರೆಗೂ ಕಾದು ನೋಡಿ ಮುಂದಿನ ಹೆಜ್ಜೆಯಿಡಲು ತೀರ್ಮಾನಿಸಿರುವ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು
ಮೂರು ಜಿಲ್ಲೆಗಳಲ್ಲಿಯ ನದಿ ತೀರದ ಸಂಘಟನೆಗಳ ಜೊತೆಗೆ ಪ್ರಮುಖ ಮಠಾಧೀಶರ ಜೊತೆಗೆ ಸಂಪರ್ಕದಲ್ಲಿದೆ.
ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ,ಬೆಳಗಾವಿ
ಮೊ:9620114466


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ