Breaking News
Home / ರಾಜ್ಯ / ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಅಮೆಜಾನ್​ಗೆ 33 ಲಕ್ಷ ಡಾಲರ್ ದಂಡ

ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಅಮೆಜಾನ್​ಗೆ 33 ಲಕ್ಷ ಡಾಲರ್ ದಂಡ

Spread the love

ಬಾರ್ಸಿಲೋನಾ (ಸ್ಪೇನ್): ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪನಿಯಾಗಿರುವ ಅಮೆಜಾನ್ ವಿರುದ್ಧ ಬಾರ್ಸಿಲೋನಾ ಸ್ಥಳೀಯ ಕಾರ್ಮಿಕ ಇಲಾಖೆ ತನಿಖೆ ಆರಂಭಿಸಿದೆ. ಅಮೆಜಾನ್ ಸ್ಪೇನ್​ನ ಕ್ಯಾಟಲೋನಿಯಾದಲ್ಲಿ ಹಲವಾರು ವರ್ಷಗಳವರೆಗೆ ಉಪಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.

2020ರಲ್ಲಿಯೂ ಇದೇ ರೀತಿಯ ಕಾನೂನು ಬಾಹಿರ ಕೃತ್ಯಕ್ಕಾಗಿ ಕಂಪನಿಯು ಅಂದಾಜು 8 ಲಕ್ಷ 26 ಸಾವಿರ ಡಾಲರ್​ಗೂ ಅಧಿಕ ದಂಡ ಪಾವತಿಸಿತ್ತು. ಈ ಬಾರಿ ಅಮೆಜಾನ್​ಗೆ 33 ಲಕ್ಷ ಡಾಲರ್​ ದಂಡ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಮೇಲಿನ ಎರಡೂ ಪ್ರಕರಣಗಳಲ್ಲಿ ಅಮೆಜಾನ್, ತನ್ನ ಡೆಲಿವರಿ ಸೇವೆಗಳನ್ನು ನೀಡಲು ಮತ್ತು ತಾತ್ಕಾಲಿಕ ನೌಕರರನ್ನು ಒದಗಿಸಲು ಉಪಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಎರಡು ಕಂಪನಿಗಳಿಗೆ ಜನರಲಿಟ್ಯಾಟ್ ದಂಡ ವಿಧಿಸಿದೆ. ಈ ದಂಡದ ಮೊತ್ತ 2.6 ಮಿಲಿಯನ್ ಯುರೊಗಳಿಗೂ ಅಧಿಕವಾಗಿದೆ. ನೌಕರರನ್ನು ಕಾನೂನು ಬಾಹಿರವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದಕ್ಕಾಗಿ ಅಮೆಜಾನ್​ಗೆ ಕ್ಯಾಟಲನ್ ಕಾರ್ಮಿಕ ಪ್ರಾಧಿಕಾರವು ಈಗ 5.8 ಮಿಲಿಯನ್ ಯುರೋ ದಂಡ ವಿಧಿಸಲು ನಿರ್ಧರಿಸಿದೆ ಎಂದು ಸ್ಥಳೀಯಾಡಳಿತದ ವಕ್ತಾರರೊಬ್ಬರು ಹೇಳಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ