Breaking News
Home / ರಾಜಕೀಯ / ಜುಲೈ 28ಕ್ಕೆ ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ‘ವಿಕ್ರಾಂತ್‌ ರೋಣ’:

ಜುಲೈ 28ಕ್ಕೆ ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ‘ವಿಕ್ರಾಂತ್‌ ರೋಣ’:

Spread the love

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆ ಹೊಸ್ತಿಲಲ್ಲಿದೆ. ಜುಲೈ 28ಕ್ಕೆ ವಿಶ್ವದಾದ್ಯಂತದ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ಮಾಹಿತಿ ನೀಡಿದ್ದಾರೆ.

 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಸದ್ಯ 390 ಚಿತ್ರಮಂದಿರಗಳು ಬುಕ್‌ ಆಗಿವೆ. ಜುಲೈ 28ರ ವೇಳೆಗೆ 400-425 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ವಿಕ್ರಾಂತ್‌ ರೋಣ ತೆರೆಕಾಣಲಿದ್ದು, ಹಿಂದಿಯಲ್ಲೇ ಇಲ್ಲಿಯವರೆಗೆ 900 ಪರದೆಗಳು ಬ್ಲಾಕ್‌ ಆಗಿವೆ. ಈ ಪೈಕಿ ಶೇ 90ರಷ್ಟು 3ಡಿ ಚಿತ್ರಮಂದಿರಗಳೇ ಇವೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುವ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲೇ ಈ ರಾಜ್ಯಗಳಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ’ ಎಂದರು.

ಊರ್ವಶಿಯಲ್ಲಿ ಸದ್ಯಕ್ಕಿಲ್ಲ 3ಡಿ
‘ಎಲ್ಲೆಲ್ಲಿ 3ಡಿ ಸೌಲಭ್ಯವಿದೆಯೋ ಅಲ್ಲಲ್ಲಿ 3ಡಿಯಲ್ಲೇ ‘ವಿಕ್ರಾಂತ್‌ ರೋಣ’ ಸಿನಿಮಾ ತೆರೆಕಾಣಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸದ್ಯಕ್ಕೆ 3ಡಿ ಸೌಲಭ್ಯವಿಲ್ಲ. ಅವರು ಆಯಕ್ಟಿವ್‌ ಗ್ಲಾಸ್‌ಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಅವುಗಳು ತಲುಪಲು ತಡವಾಗುತ್ತದೆ ಎನ್ನುವ ಮಾಹಿತಿಯಿದ್ದು, ಹೀಗಾಗಿ ಮೊದಲ ಕೆಲವು ದಿನ ಊರ್ವಶಿ ಚಿತ್ರಮಂದಿರಗಳಲ್ಲಿ 3ಡಿ ಇರುವುದಿಲ್ಲ. ಬದಲಾಗಿ 2ಡಿಯಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ’ ಎಂದು ಮಂಜು ಅವರು ಸ್ಪಷ್ಟನೆ ನೀಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ