Home / ರಾಜಕೀಯ / ರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಖರ್ಗೆಗೆ ಅಪಮಾನವಾಗಿಲ್ಲ: ಜೋಶಿ

ರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಖರ್ಗೆಗೆ ಅಪಮಾನವಾಗಿಲ್ಲ: ಜೋಶಿ

Spread the love

ನವದೆಹಲಿ, ಜುಲೈ 25: ”ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಮಾಡಿ, ಅಗೌರವ ತೋರಲಾಗಿದೆ” ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ತಿರುಗೇಟು ನೀಡಿದ್ದಾರೆ.

 

 

 

”ನೂತನ ರಾಷ್ಟ್ರಪತಿ ಮುರ್ಮು ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಇಂದು ನಡೆದ ರಾಷ್ಟ್ರಪತಿ ಪದಗ್ರಹಣದ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸರಿಯಾದ ಆಸನ ವ್ಯವಸ್ಥೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ರಾಜ್ಯಸಭಾ ಸಭಾಪತಿ ಅವರಿಗೆ ಕಾಂಗ್ರೆಸ್ ಸಂಸದರು ಪತ್ರ ಬರೆದಿದ್ದರು.

 

”ಇಂದು ಗೌರವಾನ್ವಿತ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೊಂದಿರುವ ಸ್ಥಾನಕ್ಕೆ ಹೊಂದಿಕೆಯಾಗದ ಆಸನದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಶಿಷ್ಟಾಚಾರವನ್ನು ಉಲ್ಲಂಘಿಸಿ ಅತ್ಯಂತ ಹಿರಿಯ ನಾಯಕನಿಗೆ ತೋರಿದ ಈ ಉದ್ದೇಶಪೂರ್ವಕ ಅಗೌರವದಿಂದ ನಮಗೆ ಆಘಾತವುಂಟಾಗಿದೆ. ಈ ಕುರಿತು ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಾವು ಪತ್ರ ಬರೆಯುತ್ತಿದ್ದೇವೆ” ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ. ಈ ಘಟನೆ ಕುರಿತಂತೆ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಸೇರಿದಂತೆ ಹಲವಾರು ನಾಯಕರು ಪ್ರಶ್ನೆ ಎತ್ತಿದ್ದರು.

ಈ ವಿಚಾರವಾಗಿ ಇಂದು ಸ್ಪಷ್ಟನೆ ನೀಡಿರುವ ಪ್ರಲ್ಹಾದ್ ಜೋಶಿ ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರಿಗೆ ಶಿಷ್ಟಾಚಾರದ ಪ್ರಕಾರ ಅಪಮಾನ ಆಗಿಲ್ಲ ಎಂದಿದ್ದಾರೆ. ಕೇಂದ್ರ ಗೃಹ ಇಲಾಖೆ ನಿಯಮದ ಪ್ರಕಾರ ಕೇಂದ್ರ ಸರ್ಕಾರದ ಎಲ್ಲ ಕ್ಯಾಬಿನೆಟ್ ಸಚಿವರ ಆಸನದ ಬಳಿಕ ವಿರೋಧ ಪಕ್ಷದ ನಾಯಕರಿಗೆ ಆಸನ ಕಲ್ಪಿಸಬೇಕು ಅಂತಿದೆ. ಆ ಪ್ರಕಾರ ಆಸನ ಕಲ್ಪಿಸುವುದಾದರೆ ಖರ್ಗೆ ಅವರಿಗೆ ಮೂರನೇ ಸಾಲಿನಲ್ಲಿ ಆಸನ ದೊರೆಯುತ್ತಿತ್ತು, ಆದರೆ ಖರ್ಗೆ ಅವರ ಹಿರಿತನ ಮತ್ತು ಅವರ ಸ್ಥಾನವನ್ನ ಪರಿಗಣಿಸಿ ಮೊದಲನೇ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.

”ಮೊದಲನೇ ಸಾಲಿನಲ್ಲಿಯೂ ಕಾರ್ನರ್‌ನಲ್ಲಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು, ತಕ್ಷಣ ನಮ್ಮ ಅಧಿಕಾರಿಗಳು ಮೊದಲನೇ ಸಾಲಿನ ಸೆಂಟರ್ ನಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು, ಆದರೆ ಖರ್ಗೆ ಅವರು ಅಧಿಕಾರಿಗಳ ಮನವಿಯನ್ನು ನಿರಾಕರಿಸಿದ್ದರು.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ