Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ: 8 ವರ್ಷಗಳಿಂದ ಡಯಟ್‌ನಲ್ಲಿ ಶೂನ್ಯ ಪ್ರವೇಶಾತಿ

ಬೆಳಗಾವಿ: 8 ವರ್ಷಗಳಿಂದ ಡಯಟ್‌ನಲ್ಲಿ ಶೂನ್ಯ ಪ್ರವೇಶಾತಿ

Spread the love

ಬೆಳಗಾವಿ: ತಾಲ್ಲೂಕಿನ ಮಣ್ಣೂರಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್‌) ಕಳೆದ ಎಂಟು ವರ್ಷಗಳಿಂದ ಡಿ.ಇಡಿ ಕೋರ್ಸ್‌ಗೆ ಒಬ್ಬರೂ ಪ್ರವೇಶ ಪಡೆದಿಲ್ಲ. 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಾರಿಯೂ ‍ಪ್ರಶಿಕ್ಷಣಾರ್ಥಿಗಳು ಪ್ರವೇಶ ಪಡೆಯುವುದು ಅನುಮಾನ.

 

1994-95ರಲ್ಲಿ ಮಣ್ಣೂರಿನಲ್ಲಿ ಡಯಟ್‌ ತಲೆಎತ್ತಿದೆ. ನಿಯಮಿತವಾಗಿ ಪ‍್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದಿದ್ದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿತ್ತು. 2011-12ನೇ ಸಾಲಿನವರೆಗೂ ಇಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿತ್ತು. ವಿವಿಧ ‘ಪ್ರಭಾವ’ ಬಳಸುವುದೂ ಅನಿವಾರ್ಯವಾಗಿತ್ತು. ಪ್ರತಿವರ್ಷ 50 ಮಂದಿಗೆ ಪ್ರವೇಶ ಪಡೆಯುತ್ತಿದ್ದರು. ಆದರೆ, 2014-15ನೇ ಸಾಲಿನಿಂದ ಇಲ್ಲಿ ಶೂನ್ಯ ದಾಖಲಾತಿಯಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ