Breaking News
Home / ರಾಜ್ಯ / ಬಕ್ರೀದ್‌ ಸಮೀಪಿಸುತ್ತಿದ್ದಂತೆ ಕುರಿ, ಮೇಕೆ, ಕೋಳಿಗಳ  ವ್ಯಾಪಾರ ಜೋರಾಗಿದೆ

ಬಕ್ರೀದ್‌ ಸಮೀಪಿಸುತ್ತಿದ್ದಂತೆ ಕುರಿ, ಮೇಕೆ, ಕೋಳಿಗಳ  ವ್ಯಾಪಾರ ಜೋರಾಗಿದೆ

Spread the love

ರಾಯಬಾಗ : ಬಕ್ರೀದ್‌ (ಜುಲೈ 10) ಹಬ್ಬ ಸಮೀಪಿಸುತ್ತಿದ್ದಂತೆಯೇ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಕುರಿ, ಮೇಕೆ, ಕೋಳಿಗಳ ಸಂತೆಯಲ್ಲಿ ಈಗ ಜನಜಂಗುಳಿ ಉಂಟಾಗಿದೆ.

ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ.

ಆದರೆ, ಈಗ ತರಕಾರಿ, ಕಾಳು, ಹಣ್ಣುಗಳ ಮಾರಾಟಕ್ಕಿಂತ ಹೆಚ್ಚು ಸುದ್ದಿಯಲ್ಲಿರುವುದು ಕುರಿ, ಮೇಕೆಗಳು.

ಪಟ್ಟಣ ಹೊರವಲಯದ ಬ್ಯಾಕುಡ ರಸ್ತೆಯಲ್ಲಿ ಈ ಕುರಿ- ಮೇಕೆ ಸಂತೆ ಸೇರು
ತ್ತಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಜನ ಕುರಿ- ಮೇಕೆ ಮಾರಲು ಬರುತ್ತಾರೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಜನ ಇಲ್ಲಿ ಕುರಿ, ಮೇಕೆಗಳನ್ನು ಖರೀದಿ
ಸಲು ಬರುತ್ತಾರೆ. ಸೂಕ್ತ ದರದಲ್ಲಿ ಕಟ್ಟುಮಸ್ತಾದ ದೇಸಿ ತಳಿಗಳು ಇಲ್ಲಿ ಸಿಗುತ್ತವೆ ಎಂಬುದೇ ಇದಕ್ಕೆ ಕಾರಣ.

ಪ್ರತಿ ಭಾನುವಾರ ಕುರಿ ಸಂತೆ ಸೇರುತ್ತದೆ. ಈಗ ಹಬ್ಬದ ಕಾರಣ ಕುರಿ- ಮೇಕೆ ಸಾಕಿದವರು ಮತ್ತು ಗ್ರಾಹಕರ ಜಾತ್ರೆಯೇ ಸೇರುತ್ತಿದೆ. ದಷ್ಟ‍ಪುಷ್ಠ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ.

ಕೆಲವು ಕುರಿ ಮತ್ತು ಮೇಕೆಗಳು ಸುಮಾರು 140ರಿಂದ 160 ಕೆ.ಜಿ ತೂಕ ಹೊಂದಿದ್ದು, ಇಡೀ ಸಂತೆಯಲ್ಲಿ ಆಕರ್ಷಣೆಯ ಕೇಂದ್ರವಾಗಿವೆ. ₹ 1.20 ಲಕ್ಷದಿಂದ ₹ 1.40 ಲಕ್ಷದವರೆಗೂ ಈ ಕುರಿಗಳು ಬಿಕರಿಯಾಗುತ್ತಿವೆ.

ಮಹಿಳೆಯರೂ ಭಾಗಿ: ಗ್ರಾಮೀಣ ಭಾಗದ ಮಹಿಳೆಯರು ಕೂಡ ಪುರುಷರಿ
ಗಿಂತ ಒಂದು ಹೆಜ್ಜೆ ಮುಂದೆ ಬಂದು ಕುರಿ ವ್ಯಾಪಾರ ಮಾಡುತ್ತಿರುವುದು ಸಾಮಾನ್ಯ
ವಾಗಿದೆ. ಅದರಲ್ಲೂ ಗ್ರಾಮೀಣ ಮಹಿಳೆಯರು ನಾಟಿಕೋಳಿಗಳನ್ನು ಮಾರುವಲ್ಲಿ ಸಿದ್ಧಹಸ್ತರಾಗಿದ್ದಾರೆ.

ಮುದ್ರಾಂಕ ಇಲಾಖೆ ಅಧಿಕಾರಿಯೂ ವ್ಯಾಪಾರಿ: ಇಲ್ಲಿನ ಮುದ್ರಾಂಕ ಇಲಾಖೆಯ ಅಧಿಕಾರಿ ಆಗಿದ್ದರೂ ಸದಾಶಿವ ಡಬ್ಬಗೊಳ ಅವರು ಕುರಿ- ಮೇಕೆ ಸಾಕಣೆ ಮುಂದುವರಿಸಿದ್ದಾರೆ. ಇದೇ ಸಂತೆಯಲ್ಲಿ ಅವರು ತಮ್ಮ ಕುರಿಗಳನ್ನೂ ಮಾರಾಟಕ್ಕೆ ತಂದಿದ್ದಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ