Breaking News
Home / ರಾಜಕೀಯ / ರಾಜ್ಯವೇ ಬೆಚ್ಚಿ ಬಿಳಿಸಿದ್ದ ಬೆಳಗಾವಿ ನಗರದ ತ್ರಿವಳಿ ಕೊಲೆಆರೋಪಿ ನಿರ್ದೋಷಿ: ಧಾರವಾಡ ಹೈಕೋರ್ಟ್

ರಾಜ್ಯವೇ ಬೆಚ್ಚಿ ಬಿಳಿಸಿದ್ದ ಬೆಳಗಾವಿ ನಗರದ ತ್ರಿವಳಿ ಕೊಲೆಆರೋಪಿ ನಿರ್ದೋಷಿ: ಧಾರವಾಡ ಹೈಕೋರ್ಟ್

Spread the love

ಬೆಳಗಾವಿ: ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದ್ದ ಕುವೆಂಪು ನಗರದ ತ್ರಿವಳಿ ಕೊಲೆ)ಆರೋಪಿ ಪ್ರವೀಣ್ ಭಟ್​ಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಅಂತಾ ತೀರ್ಪು ನೀಡಿದೆ.

ತ್ರಿವಳಿ ಕೊಲೆ ಪ್ರಕರಣವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ‌. ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿ ತಾಯಿ ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ ಯುವಕ. ಈ ‌ಪ್ರಕರಣದ ಆರೋಪಿ ‌ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ. ಇದಕ್ಕಿಂತ ಪೂರ್ವದಲ್ಲಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶ ತಿರಸ್ಕರಿಸಿರುವ ಹೈಕೋರ್ಟ್ ಜೂನ್ 21 ರಂದು ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಕೆ.ಎಸ್. ಮುದಗಲ್, ಎಂಜಿಎಸ್ ಕಮಲ್ ಈ ಆದೇಶ ನೀಡಿದ್ದಾರೆ. ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು‌. ಇದಾದ ಬಳಿಕ ಕೋರ್ಟ್‌ಗೆ ಎಪಿಎಂಸಿ ಠಾಣೆ ಪೊಲೀಸರು ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು‌‌. ನಂತರ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿ 16 ಎಪ್ರಿಲ್ 2018ರಂದು ಪ್ರವೀಣ್ ಭಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಘಟನೆ ಹಿನ್ನೆಲೆ:

ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ನಸುಕಿನ ಜಾವ ತಾಯಿ ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ಇಲ್ಲಿ ತಾಯಿ ರೀನಾ ಮಾಲಗತ್ತಿ ಮಗ ಆದಿತ್ಯ ಮಾಲಗತ್ತಿ, ಮಗಳು ಸಾಹಿತ್ಯ ಮಾಲಗತ್ತಿಯನ್ನು ಕೊಲೆಗೈಯ್ಯಲಾಗಿತ್ತು. 24 ಗಂಟೆಯಲ್ಲೇ ಎಪಿಎಂಸಿ ಪೊಲೀಸರು ಆರೋಪಿ ಪ್ರವೀಣ್ ಭಟ್ ಬಂಧಿಸಿದ್ದರು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿತ್ತು. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್ ಒಬ್ಬನೇ ತಾಯಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸಂಗತಿ ತನಿಖೆ ವೇಳೆ ಬಹಿರಂಗಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ ಮೂಲದ ಪ್ರವೀಣ್ ತನ್ನ ಪಾಲಕರೊಂದಿಗೆ ಕಳೆದ ಹಲವು ವರ್ಷಗಳಿಂದ ಬೆಳಗಾವಿಯ ಕುವೆಂಪು ನಗರದಲ್ಲಿ ವಾಸವಾಗಿದ್ದನು. ಕೊಲೆ‌ ಮಾಡುವ ಮುಂಚಿತವಾಗಿ ಒಂದು ವರ್ಷದ ಹಿಂದೆ ರೀನಾ ಹಾಗೂ ಪ್ರವೀಣ್ ನಡುವೆ ಸ್ನೇಹ ಅಂಕುರಿಸಿತ್ತು. ಜವಳಿ ವ್ಯಾಪಾರಿಯಾಗಿದ್ದ ರಿತೇಶ್ ಮಾಲಗತ್ತಿ, ಉದ್ಯಮದ ಸಂಬಂಧ ಕೆಲವೊಮ್ಮೆ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ.

ಈ ವೇಳೆ ರೀನಾ ಮಾಲಗತ್ತಿ ಪ್ರವೀಣ್‌ನನ್ನು ಮನೆಗೆ ಆಹ್ವಾನಿಸಿ, ಅನೈತಿಕ ಚುಟುವಟಿಕೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದಳು. ರಿತೇಶ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಸಲ ರೀನಾ ಭೇಟಿಗೆ ಮನೆಗೆ ಹೋಗುತ್ತಿದ್ದ ಪ್ರವೀಣ್ ಒಮ್ಮೆಯೂ ಮುಂಬಾಗಿಲಿನಿಂದ ಹೋಗಿಲ್ಲ. ಮನೆಯ ಹಿಂಬದಿಯಲ್ಲಿದ್ದ ಹಗ್ಗ ಏರಿ ಹೋಗಿಯೇ ರೀನಾನನ್ನು ಭೇಟಿ ಆಗುತ್ತಿದ್ದನು. ಇನ್ನೂ ಘಟನೆ ನಡೆದ ದಿನ ರಾತ್ರಿ ಎರಡು ಸಲ ಪ್ರವೀಣ್ ರೀನಾ ಮನೆಗೆ ಹೋಗಿದ್ದನು, ಅನೈತಿಕ ಸಂಬಂಧ ಮುಂದುವರೆಸುವಂತೆ ರೀನಾ ಒತ್ತಾಯ ಮಾಡಿದ್ದಳಂತೆ. ಒಂದು ವೇಳೆ ಅನೈತಿಕ ಸಂಬಂಧಕ್ಕೆ ಮುಂದುವರೆಸದಿದ್ರೇ ವಿಚಾರ ಬಹಿರಂಗ ಪಡಿಸುವುದಾಗಿ ರೀನಾ ಪ್ರವೀಣ್‌ಗೆ ಹೆದರಿಸಿದ್ದಳಂತೆ. ಇದರಿಂದ ಸಾಕಾಗಿದ್ದ ಪ್ರವೀಣ್ ರೀನಾ ಕೊಲೆ ಮಾಡಬೇಕು ಅನ್ನೋ ಉದ್ದೇಶವಿಟ್ಟುಕೊಂಡು ಮನೆಗೆ ಹೋಗಿ ಚಾಕುವಿನಿಂದ ಇರಿದು ರೀನಾಗೆ ಹತ್ಯೆ ಮಾಡಿದ್ದ‌.

ಈ ವೇಳೆ ಇಬ್ಬರು ಮಕ್ಕಳು ಎಚ್ಚರವಾಗುತ್ತೆ ಮಕ್ಕಳಿಂದ ವಿಚಾರ ಹೊರ ಬರುತ್ತೆ ಅಂದುಕೊಂಡು ಒಂದು ಮಗುವನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ರೇ ಇನ್ನೊಂದು ಮಗುವನ್ನ ಬಕೆಟ್​ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದ. ಕೊಲೆ ಬಳಿಕ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಪ್ರವೀಣ್ ಮಾಹಿತಿ ಕೊಟ್ಟು ತಾನೇನೂ ಮಾಡೇ ಇಲ್ಲಾ ಅಂತಾ ಡ್ರಾಮಾ ಮಾಡಿದ್ದ‌. ಈ ಎಲ್ಲ ಮಾಹಿತಿ ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು. 2015 ಆ.16ರಂದು ಬೆಳಗಿನ ಜಾವ ನಡೆದ ತ್ರಿವಳಿ ಕೊಲೆ ಪ್ರಕರಣದ ಸಂಬಂಧ ಪ್ರವೀಣ್ ಭಟ್‌ನನ್ನು ಬಂಧಿಸಿ, ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ