Home / ರಾಜಕೀಯ / ಶಿವಸೇನೆಯ 42ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.

ಶಿವಸೇನೆಯ 42ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.

Spread the love

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಯ ಮಹಾ ವಿಕಾಸ್ ಅಘಾಡಿ (Maha Vikas Aghadi – MVA) ಸರ್ಕಾರದ ಪತನ ಬಹುತೇಕ ಸನ್ನಿಹಿತವಾಗಿದೆ.

ಶಿವಸೇನೆಯ 42 ಶಾಸಕರು ಏಕನಾಥ ಶಿಂಧೆ (Eknath Shinde) ನೇತೃತ್ವದ ಬಂಡುಕೋರರ ಬಣಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ (CM Uddhav Thackeray) ಬೆಂಬಲಕ್ಕೆ ನಿಂತ ಶಾಸಕರ ಸಂಖ್ಯೆ ಕೇವಲ‌ 13ಕ್ಕೆ ಇಳಿದಿದೆ. ಶಿವಸೇನೆಯ ಮತ್ತಷ್ಟು ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.

ಉದ್ಧವ್ ಠಾಕ್ರೆ ಅವರು ತಮಗೆ ನಿಷ್ಠರಾಗಿರುವ ಶಾಸಕರ ಸಭೆ ಕರೆದಿದ್ದು, ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ. ಏಕನಾಥ ಶಿಂಧೆ ಬಣದಲ್ಲಿರುವ ಶಾಸಕರ ಸಂಖ್ಯೆ ಪಕ್ಷದ ಒಟ್ಟು ಶಾಸಕರ ಮೂರನೇ ಎರಡರಷ್ಟು ಇರುವುದು ದೃಢಪಟ್ಟರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಾಗುವುದಿಲ್ಲ. ಅವರು ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸಬಹುದು. ತಮ್ಮ ಬಣವನ್ನೇ ಅಧಿಕೃತ ಶಿವಸೇನಾ ಪಕ್ಷ ಎಂದು ಮಾನ್ಯತೆ ನೀಡುವಂತೆ ಸ್ಪೀಕರ್ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಶಿವಸೇನಾ ಪಕ್ಷದ ಚುನಾವಣಾ ಚಿಹ್ನೆಯನ್ನೂ ಕೇಳಬಹುದು.

ಸದ್ಯದ ಪರಿಸ್ಥಿತಿಯಲ್ಲಿ ಏಕನಾಥ ಶಿಂಧೆ ಬಣಕ್ಕೇ ಶಿವಸೇನೆಯ ಚಿಹ್ನೆ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಶಿವಸೇನೆಯ 55 ಶಾಸಕರ ಪೈಕಿ 42 ಮಂದಿ ಪ್ರಸ್ತುತ ಏಕನಾಥ ಶಿಂಧೆ ಬಣದಲ್ಲಿದ್ದಾರೆ. ಅಂಕಿಸಂಖ್ಯೆಗಳ ಲೆಕ್ಕಾಚಾರದಲ್ಲಿ ಏಕನಾಥ ಶಿಂಧೆ ಬಣದ ಕೈ ಮೇಲಾಗಿದೆ. ಮಹಾರಾಷ್ಟ್ರದ ವಿಧಾನಸಭೆಯ 106 ಬಿಜೆಪಿ ಶಾಸಕರ ಜೊತೆಗೆ ಏಕನಾಥ ಶಿಂಧೆ ಬಣದ 42 ಮಂದಿ ಬೆಂಬಲ ಸೇರಿದರೇ 148ಕ್ಕೆ ಸಂಖ್ಯಾಬಲ ಹೆಚ್ಚಾಗುತ್ತದೆ. ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 145 ಸದಸ್ಯ ಬಲ ಸಾಕು. ಹೀಗಾಗಿ ಶಿವಸೇನೆಯ ಬಂಡಾಯದ ಲಾಭ ಪಡೆದುಕೊಂಡ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಕಂಡು ಬರುತ್ತಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ