Breaking News
Home / ರಾಜಕೀಯ / ವಾಯುವ್ಯ ಶಿಕ್ಷಕರ ‌ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಹೆಚ್ಚವರಿ 5 ಮತ ಪತ್ತೆ! ಇದು ಹೇಗೆ ಬಂತು? ಪಕ್ಷೇತರ ಅಭ್ಯರ್ಥಿ ಆಕ್ಷೇಪ

ವಾಯುವ್ಯ ಶಿಕ್ಷಕರ ‌ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಹೆಚ್ಚವರಿ 5 ಮತ ಪತ್ತೆ! ಇದು ಹೇಗೆ ಬಂತು? ಪಕ್ಷೇತರ ಅಭ್ಯರ್ಥಿ ಆಕ್ಷೇಪ

Spread the love

ಬೆಳಗಾವಿ: ವಿಧಾನ ಪರಿಷತ್​ನ ವಾಯುವ್ಯ ಶಿಕ್ಷಕರ ‌ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯ ಮತ ಎಣಿಕೆಯಲ್ಲೂ ಗೊಂದಲ ಸೃಷ್ಟಿಯಾಗಿದೆ. ಮತ ಕ್ಷೇತ್ರದ ಮತ ಪೆಟ್ಟಿಗೆಯಲ್ಲಿ 5 ಮತಗಳು ಹೆಚ್ಚಾಗಿ ಕಂಡುಬಂದಿದ್ದು, 71 ಮತಗಳು ಇರಬೇಕಿದ್ದ ಪೆಟ್ಟಿಗೆಯಲ್ಲಿ 76 ಮತಗಳು ಹೇಗೆ ಬಂತು?

ಎಂದು ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ ಆಕ್ಷೇಪಿಸಿದ್ದಾರೆ.

ಬಾಗಲಕೋಟೆಯ ಇಳಕಲ್ ಮತ ಪೆಟ್ಟಿಗೆಯಲ್ಲಿ 5 ಮತಗಳು ಹೆಚ್ಚಿಗೆ ಬಂದಿವೆ. ಬಿಜೆಪಿ ಅಭ್ಯರ್ಥಿ ಅರುಣ ಶಾಹಾಪುರ ಪರ 5 ಮತಗಳು ಹೆಚ್ಚಿಗೆ ಬಂದಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಎನ್.ಬಿ.ಬನ್ನೂರ, ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲ, ಮತಗಟ್ಟೆ ಸಂಖ್ಯೆ 3ರ ವಾಯುವ್ಯ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಮೂರು ಪದವೀಧರ ಮತಗಳು ಕಂಡು ಬಂದಿವೆ.

ಮತ ಎಣಿಕೆ ಆರಂಭಕ್ಕೂ ಮುನ್ನವೇ ಕೇಂದ್ರದಲ್ಲಿ ಬೆಳಗ್ಗೆ ಕೆಲಕಾಲ ಗೊಂದಲ ಉಂಟಾಗಿತ್ತು. ಮತಗಟ್ಟೆ ನಂಬರ್​ 4ರ ಮತಪೆಟ್ಟಿಗೆಯ ಮೇಲೆ ಕಟ್ಟಿದ ಬಟ್ಟೆ ಬದಲಾವಣೆಯಾಗಿತ್ತು. ಪೆಟ್ಟಿಗೆ ಮೇಲೆ ಸೀಲ್ ಹಾಕದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಲೋನಿ ಪರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು. ಜೋರಾಗಿ ಗದ್ದಲ ಶರುವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್, ಸದಲಗಾ- ಚಿಕ್ಕೋಡಿ ಭಾಗದ ಎರಡು ಮತಪೆಟ್ಟಿಗೆ ಮೇಲೆ ಈ ರೀತಿ ಆಗಿದೆ. ಮತದಾನ ಮುಗಿದ ಬಳಿಕ ಇದೇ ಬಟ್ಟೆಯನ್ನೇ ಸುತ್ತಲಾಗಿತ್ತು. ಇದರಲ್ಲಿ ಅನುಮಾನ ಬೇಡ ಎಂದು ಮನವೊಲಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ