Breaking News
Home / ರಾಜಕೀಯ / CM ಕನಸು ಕಾಣ್ತಿರೋ ಡಿ.ಕೆ.ಶಿವಕುಮಾರ್​ ಮತ್ತೆ ಸಂಕಷ್ಟ.. ED ಚಾರ್ಜ್​​ಶೀಟ್​ನಲ್ಲಿ ಏನಿದೆ?

CM ಕನಸು ಕಾಣ್ತಿರೋ ಡಿ.ಕೆ.ಶಿವಕುಮಾರ್​ ಮತ್ತೆ ಸಂಕಷ್ಟ.. ED ಚಾರ್ಜ್​​ಶೀಟ್​ನಲ್ಲಿ ಏನಿದೆ?

Spread the love

ಕೆಪಿಸಿಸಿ ಸಾರಥಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಪ್ರಕರಣ ಮರುಜೀವ ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆ ತಯಾರಿಯಲ್ಲಿರೋ ಡಿಕೆ ಶಿವಕುಮಾರ್​​ಗೆ ಚಾರ್ಜ್​​ಶೀಟ್ ಶಾಕ್ ಎದುರಾಗಿದೆ.

ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ, ಪಕ್ಷ ಸಂಘಟನೆ ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಸರ್ಕಾರ ರಚನೆ ಕಸರತ್ತಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವ್ರಂತೆ ಓಡಾಡ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್​ ಅವರ ಈ ಸ್ಪೀಡ್​ಗೆ ಜಾರಿ ನಿರ್ದೇಶನಾಲಯ ಬ್ರೇಕ್ ಹಾಕಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ಗೆ ಮತ್ತೆ ಸಂಕಷ್ಟ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಮತ್ತೆ ಇ.ಡಿ ಸಂಕಷ್ಟ ಎದುರಾಗಿದೆ. 2019ರಲ್ಲಿ ನಡೆದಿದ್ದ ರೇಡ್ ಸಂಬಂಧ ಜಾರಿ ನಿರ್ದೇಶನಾಲಯ ದೆಹಲಿಯ ಇ.ಡಿ ವಿಶೇಷ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ಅಕ್ರಮ ಹಣ ವರ್ಗಾವಾಣೆ ಕೇಸ್​​ನ ಉರುಳು ಡಿಕೆ ಶಿವಕುಮಾರ್​ ಕುತ್ತಿಗೆಗೆ ಮತ್ತಷ್ಟು ಬಿಗಿದಿದೆ.

ಚಾರ್ಜ್​ಶೀಟ್​​ನಲ್ಲೇನಿದೆ?

ಡಿಕೆ ಶಿವಕುಮಾರ್ ವಿರುದ್ಧ ಒಟ್ಟು 50ರಿಂದ 55 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಲಾಗಿದ್ದು, ಚಾರ್ಜ್​ಶೀಟ್ ಜೊತೆಗೆ ಒಂದು ಸಣ್ಣ ಟ್ರಂಕ್​​ನಲ್ಲಿ ಕೇಸ್​ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲಾಗಿದೆ. ಚಾರ್ಜ್​ಶೀಟ್​ನಲ್ಲಿ PMLA ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 120b ಅಡಿ ಕ್ರಿಮಿನಲ್ ಪಿತೂರಿ ಅಂತಾನೂ ಆರೋಪ ಮಾಡಲಾಗಿದೆ. ಈ ಸೆಕ್ಷನ್​​ಗಳ ಬಗ್ಗೆ ಶನಿವಾರ ಬೆಳಗ್ಗೆ ಇಡಿ ವಕೀಲರಿಂದ ವಾದ ಮಂಡನೆಯಾಗಲಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಾರ್ಜ್​ಶೀಟ್​​ನಲ್ಲಿ ಆರೋಪಿ ನಂಬರ್ 1 ಅಂತಾ ಉಲ್ಲೇಖಿಸಲಾಗಿದೆ. ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮಾ ಆರೋಪಿ ನಂಬರ್ 2, ಡಿಕೆ ಶಿವಕುಮಾರ್​ ದೂರ ಸಂಬಂಧಿ ಸಚಿನ್ ನಾರಾಯಣ್ ಆರೋಪಿ ನಂಬರ್ 3, ಹಾಗೂ ದೆಹಲಿಯ ಕರ್ನಾಟಕ ಭವನ ಸಿಬ್ಬಂದಿ ಆಂಜನೇಯ ಹನುಮಂತು ಪ್ರಕರಣದಲ್ಲಿ 4ನೇ ಆರೋಪಿ ಅಂತಾ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ನಾಲ್ವರ ಜೊತೆಗೆ ಇತರ ಹಲವು ಆರೋಪಿಗಳ ಹೆಸ್ರನ್ನೂ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಚಾರ್ಜ್​​ಶೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಬ್ರದರ್ಸ್, ಚಾರ್ಜ್​ಶೀಟ್ ಸಲ್ಲಿಕೆಗೆ ನಾವು ಹೆದರುವುದಿಲ್ಲ ಅಂತಾ ಸವಾಲು ಹಾಕಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ