Home / ಜಿಲ್ಲೆ / ಧಾರವಾಡ / ಹೋರಿ ಎಲ್ಲಿ ಎಷ್ಟು ಮೇಯ್ದರೇನು, ನಮ್ಮ ಮನೆಗೆ ಬರಬೇಕು:ಕಿಡಿಕಾರಿದ ಹೊರಟ್ಟಿ

ಹೋರಿ ಎಲ್ಲಿ ಎಷ್ಟು ಮೇಯ್ದರೇನು, ನಮ್ಮ ಮನೆಗೆ ಬರಬೇಕು:ಕಿಡಿಕಾರಿದ ಹೊರಟ್ಟಿ

Spread the love

ಧಾರವಾಡ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೋರಿಗೆ ಹೋಲಿಸಿ ಮಾತನಾಡಿದ್ದಾರೆ.

ಧಾರವಾಡದಲ್ಲಿ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ಹಾಗೂ ಹಲವು ವಿಷಯಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ತಾಳ ಇಲ್ಲ, ತಂತಿಯೂ ಇಲ್ಲ. ವಲಸಿಗರು ಮತ್ತು ಮೂಲರ ಮಧ್ಯೆ ಇದ್ದಾರೆ ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಬಿಜೆಪಿ-ಜೆಡಿಎಸ್ ಸರ್ಕಾರವೂ ರಚನೆ ಆಗಿತ್ತು. ಆದರೆ ಈಗ ಇರುವುದು ಮೂರು ಪಕ್ಷದ ಸರ್ಕಾರ ಎಂದು ಲೇವಡಿ ಮಾಡಿದ ಹೊರಟ್ಟಿ, ನಮ್ಮ ಜೆಡಿಎಸ್‍ನವರು ಎಲ್ಲರೂ ಅಲ್ಲೇ ಇದ್ದಾರೆ. ಬಿ.ಸಿ. ಪಾಟೀಲ್ ನಮ್ಮೂರಿನ ಹೋರಿ ಎಂದ ಅವರು, ಸರ್ಕಾರದಲ್ಲಿ ಎಷ್ಟು ಬೇಕು ಅಷ್ಟು ಮೇಯ್ಲಿ ಎಂದು ನಾ ಮೊನ್ನೆ ಮಾತನಾಡಿದಾಗ ಹೇಳಿದ್ದೀನಿ. ನಮ್ಮೂರ ಹೋರಿ ಎಲ್ಲಿ ಎಷ್ಟು ಮೇಯ್ದರೇನು, ಮತ್ತೇ ನಮ್ಮ ಮನೆಗೆ ಬರಬೇಕು ಎಂದರು.


Spread the love

About Laxminews 24x7

Check Also

ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ.

Spread the loveಧಾರವಾಡ, ಆಗಸ್ಟ್‌, 12: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಧಾರವಾಡ ರಂಗಾಯಣ ಮತ್ತೆ ಕಾರ್ಯಪ್ರವೃತ್ತವಾಗಿದೆ. 18ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ