Breaking News
Home / Uncategorized / ಸಿದ್ದುಗೆ ಸಿಎಂ ಕುರ್ಚಿ ಬಿಟ್ಟು ಬೇರೆ ಕಡೆ ಕೂತರೆ ಮುಳ್ಳು ಚುಚ್ಚಿದಂಗೆ : ಸಚಿವ ಈಶ್ವರಪ್ಪ ವ್ಯಂಗ್ಯ

ಸಿದ್ದುಗೆ ಸಿಎಂ ಕುರ್ಚಿ ಬಿಟ್ಟು ಬೇರೆ ಕಡೆ ಕೂತರೆ ಮುಳ್ಳು ಚುಚ್ಚಿದಂಗೆ : ಸಚಿವ ಈಶ್ವರಪ್ಪ ವ್ಯಂಗ್ಯ

Spread the love

ಬಾಗಲಕೋಟೆ : ಸಿದ್ದರಾಮಯ್ಯಗೆ ಸಿಎಂ ಖುರ್ಚಿ ಕಳೆದುಕೊಂಡ ಬಳಿಕ ಯಾವುದೇ ಖುರ್ಚಿ ಮೇಲೆ ಕುಳಿತರೂ ಮುಳ್ಳು ಚುಚ್ಚಿದ ಹಾಗೇ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನನೇ ಬೇಕು ಅಂತಾರೆ. ಅದೊಂದೇ ಅವರಿಗೆ ಮೆತ್ತಗೆ ಇರೋ ಖುರ್ಚಿ ಅನಿಸುತ್ತದೆ. ಆದಷ್ಟು ಬೇಗ ಮತ್ತೆ ಮುಖ್ಯಮಂತ್ರಿ ಆಗಬೇಕು ಅನ್ನೋ ಭ್ರಮೆಯಲ್ಲಿದ್ದಾರೆ.

ನಾನೇ ಸಿಎಂ ಅಂತಾ ಹೇಳಿಕೊಳ್ಳುತ್ತಾರೆ. ನೀವು ಹೇಳ ಕೂಡದು ಅಂದಿದ್ದಕ್ಕೆ ತಮ್ಮ ಶಿಷ್ಯಂದಿರ ಮೂಲಕ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿಸಿಕೊಂಡಿದ್ದಾರೆ. ಪಾಪ ಇದಕ್ಕೆ ಡಿಕೆಶಿ ಸುಮ್ಮನೆ ಇರ್ತಾರಾ, ಅವರ ಬೆಂಬಲಿಗರು ಡಿಕೆ… ಡಿಕೆ.. ಎಂದು ಕೂಗಿದರು. ಹೀಗೆ ಸಿಎಂ ಆಗಬೇಕೆನ್ನುವ ಕನಸನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ ಕಾಣುತ್ತಿದ್ದಾರೆ. ಆದರೆ, ಜನ ಇವರನ್ನು ಗೆಲ್ಲಿಸೋದಿಲ್ಲ. ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಇಲ್ಲವಾಗಿದೆ ಎಂದರು.

ಪರಿಷತ್​​ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ವಿಧಾನಪರಿಷತ್ ಚುನಾವಣೆ ಗೆಲುವಿನ ಲೆಕ್ಕಾಚಾರದ ವಿಚಾರವಾಗಿ ಮಾತನಾಡಿ, ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸದಸ್ಯರು ಹೆಚ್ಚಿದ್ದಾರೆ. ಹೀಗಾಗಿ, ಬಿಜೆಪಿ ಕನಿಷ್ಠ 15 ರಿಂದ16 ಜನ ಪರಿಷತ್ತಿನಿಂದ ಆಯ್ಕೆ ಆಗುತ್ತಾರೆ. ಕಾಂಗ್ರೆಸ್​ನಲ್ಲಿ ಪರಿಚಯ ಇಲ್ಲದೆ ಇರುವ ವ್ಯಕ್ತಿಗಳಿಗೆ ಹಾಗೂ ಶ್ರೀಮಂತರನ್ನು ನೋಡಿ ಟಿಕೆಟ್ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದು ಭವಿಷ್ಯ ನುಡಿದರು.

ಭೂತು ಕನ್ನಡಿ ಹಿಡಿದು ಕಾಂಗ್ರೆಸ್​​ ಅನ್ನು ಹುಡುಕಬೇಕು : ಚುನಾವಣೆಗಳಲ್ಲಿ ಪಕ್ಷಾಂತರ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕಾರಣ ಇರುವ ತನಕ ಈ ಪಕ್ಷಾಂತರ ವ್ಯವಸ್ಥೆ ಇರುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ, ಯಾವ ಪಕ್ಷದ ನಾಯಕರು ಒಳ್ಳೆಯವರಿರುತ್ತಾರೋ ಆ ಪಕ್ಷ ಆಯಸ್ಕಾಂತದಂತೆ ಬೇರೆ ಬೇರೆ ರೂಪದಲ್ಲಿಆಕರ್ಷಣೆ ಮಾಡುತ್ತದೆ.

ಆ ದಿಕ್ಕಿನಲ್ಲಿ ವರ್ತೂರು ಪ್ರಕಾಶ್ ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಸುಧಾಕರ್​​​, ಮುನಿರತ್ನ ಅವರೆಲ್ಲ ಭೇಟಿ ಮಾಡಿದ್ದಾರೆ. ಅವರ ಅನುಯಾಯಿಗಳೆಲ್ಲ ಬಿಜೆಪಿಗೆ ಬೆಂಬಲಿಸ್ತಾರೆ ಎಂಬ ವಿಶ್ವಾಸವಿದೆ. ವರ್ತೂರು ಅಷ್ಟೇ ಅಲ್ಲ, ಬರುವ ದಿನಗಳಲ್ಲಿ ದೇಶ, ರಾಜ್ಯದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಎಲ್ಲಿದೆ ಎಂದು ಭೂತಕನ್ನಡಿ ಹಿಡಿದು ನೋಡಬೇಕು. ಎಲ್ಲಾ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿದೆ ಎಂದರು.

ಸೋಲು ಅಂದ್ರೆ ಇವತ್ತು ಕಾಂಗ್ರೆಸ್ : ಮೂರು ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದರು. ಮೂರು ಕಡೆ ಕಾಂಗ್ರೆಸ್ ನೆಗೆದು ಬಿದ್ದು ಹೋಯ್ತು. ಅದಕ್ಕಿಂತ ಮುಂಚೆ ಎಲ್ಲಾ ಉಪಚುನಾವಣೆ ಗೆಲ್ಲುತ್ತೇವೆ ಎಂದಿದ್ದರು. ಎಲ್ಲಾ ಕಡೆ ಸೋತರು. ಹಾಗಾಗಿ, ಸೋಲು ಅಂದ್ರೆ ಇವತ್ತು ಕಾಂಗ್ರೆಸ್. ಹೀಗಿರಬೇಕಾದರೂ ಅವರಿಗೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆ ಇದೆ.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ