Breaking News
Home / ರಾಜಕೀಯ / 28 ಮನೆ, ₹18 ಕೋಟಿ ಒಡೆಯ ವಾಸು’ದೇವ’: ಬಿವಿ ಗಿರಿ ಬಳಿ ₹6.24 ಕೋಟಿ ಮೌಲ್ಯದ ಆಸ್ತಿ

28 ಮನೆ, ₹18 ಕೋಟಿ ಒಡೆಯ ವಾಸು’ದೇವ’: ಬಿವಿ ಗಿರಿ ಬಳಿ ₹6.24 ಕೋಟಿ ಮೌಲ್ಯದ ಆಸ್ತಿ

Spread the love

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ ಅವರು 28 ಮನೆ ಸೇರಿ ₹18.20 ಕೋಟಿ ಮೌಲ್ಯದ ಆಸ್ತಿಗೆ ಒಡೆಯನಾಗಿದ್ದರೆ, ಬಿಬಿಎಂಪಿ ಶಾಲೆಯ ಡಿ ಗ್ರೂಪ್‌ ನೌಕರ ಬಿ.ವಿ. ಗಿರಿ ₹6.24 ಕೋಟಿ ಮೌಲ್ಯದ ಆಸ್ತಿಗೆ ಮಾಲೀಕ..!

ಆದಾಯ ಮೀರಿ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯದ 15 ಅಧಿಕಾರಿಗಳು, ಸಿಬ್ಬಂದಿ ಮನೆ ಮೇಲೆ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು, ದಾಳಿ ಪೂರ್ಣಗೊಳಿಸಿ ಗುರುವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

 

ವಾಸುದೇವ್ ಅವರು ಕೆಂಗೇರಿ, ಮಲ್ಲೇಶ್ವರ, ಯಲಹಂಕದಲ್ಲಿ ಪತ್ನಿ ಮಕ್ಕಳ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ರೀತಿಯ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ನೆಲಮಂಗಲ ತಾಲ್ಲೂಕಿನ ಸೋಂಪುರದಲ್ಲಿ 4 ಮನೆ ಸೇರಿ ಒಟ್ಟು 28 ಮನೆಗಳು ವಾಸುದೇವ್ ಸುಪರ್ದಿಯಲ್ಲಿವೆ ಎಂಬುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 1 ಬೆಂಜ್ ಮತ್ತು 1 ವೊಲ್ವೊ ಕಾರು ಅವರ ಬಳಿ ಇದೆ. ಬೆಂಗಳೂರಿನಲ್ಲಿ 8 ನಿವೇಶನ, ನೆಲಮಂಗಲ ಮತ್ತು ಮಾಗಡಿ ತಾಲ್ಲೂಕಿನಲ್ಲಿ 10 ಎಕರೆ 20 ಗುಂಟೆ ಕೃಷಿ ಜಮೀನು, 850 ಗ್ರಾಂ ಚಿನ್ನ, 9.5 ಕೆ.ಜಿ ಬೆಳ್ಳಿ ಆಭರಣ ಹೊಂದಿದ್ದಾರೆ. ದಾಳಿ ವೇಳೆ ₹15 ಲಕ್ಷ ನಗದು ದೊರೆತಿದೆ. ಆದಾಯಕ್ಕೂ ಮೀರಿ ಶೇ 879.53ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಎಸಿಬಿ ವಿವರಿಸಿದೆ.

ಯಶವಂತಪುರ ಮಾರಪ್ಪನಪಾಳ್ಯದ ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ ಡಿ ಗ್ರೂಪ್ ನೌಕರನಾಗಿರುವ ಬಿ.ವಿ. ಗಿರಿ, ಬೆಂಗಳೂರು ನಗರದಲ್ಲಿ 6 ಮನೆ, ವಿವಿಧ ಕಂಪನಿಯ 4 ಕಾರು, 4 ದ್ವಿಚಕ್ರ ವಾಹನ, 8 ಕೆ.ಜಿ ಬೆಳ್ಳಿ ಆಭರಣ ಹೊಂದಿದ್ದಾರೆ. ₹1.18 ಲಕ್ಷ ನಗದು ಮತ್ತು ₹15 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಆದಾಯಕ್ಕೂ ಮೀರಿ ಶೇ 533.85ರಷ್ಟು ಆಸ್ತಿ ಹೊಂದಿದ್ದಾರೆ ಎಂದು ತಿಳಿಸಿದೆ.‌

ಕೃಷಿ ಇಲಾಖೆಯ ಗದಗ ಜಿಲ್ಲೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮತ್ತು ಲೋಕೋಪಯೋಗಿ ಇಲಾಖೆ ಜೇವರ್ಗಿಯ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ್ ಅವರನ್ನು ಎಸಿಬಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಕೋಟಿ ವೀರರ ಧನಕನಕ

* ಶಾಂತಗೌಡ ಬಿರಾದಾರ್, ಪಿಡಬ್ಲ್ಯೂಡಿ ಕಿರಿಯ ಎಂಜಿನಿಯರ್, ಜೇವರ್ಗಿ; ಒಟ್ಟು ಆಸ್ತಿ ಮೌಲ್ಯ ₹4.15 ಕೋಟಿ, ಆದಾಯ ಮೀರಿ ಶೇ 406.17ರಷ್ಟು ಆಸ್ತಿ ಸಂಪಾದನೆ, ಕಲಬುರ್ಗಿಯಲ್ಲಿ 2 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 36 ಎಕರೆ ಕೃಷಿ ಜಮೀನು, 3 ಕಾರು, 1 ಸ್ಕೂಲ್ ಬಸ್, 2 ಟ್ರ್ಯಾಕ್ಟರ್, ₹54.50 ಲಕ್ಷ ನಗದು, 100 ಗ್ರಾಂ ಚಿನ್ನ, ₹15 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು.

* ಟಿ.ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಗದಗ; ಒಟ್ಟು ಆಸ್ತಿ ಮೌಲ್ಯ ₹6.65 ಕೋಟಿ, ಆದಾಯ ಮೀರಿ ಶೇ 400ರಷ್ಟು ಆಸ್ತಿ ಸಂಪಾದನೆ, ಶಿವಮೊಗ್ಗದಲ್ಲಿ 2 ಮನೆ, ವಿವಿಧೆಡೆ 4 ನಿವೇಶನ, 9 ಕೆ.ಜಿ. 400 ಗ್ರಾಂ ಚಿನ್ನದ ಗಟ್ಟಿ, 3 ಕೆ.ಜಿ. ಬೆಳ್ಳಿ, 2 ಕಾರು, 3 ದ್ವಿಚಕ್ರ ವಾಹನ, 8 ಎಕರೆ ಕೃಷಿ ಜಮೀನು, ₹15.94 ಲಕ್ಷ ನಗದು, ₹20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.

* ಕೆ. ಶ್ರೀನಿವಾಸ್, ಕಾರ್ಯಪಾಲಕ ಎಂಜಿನಿಯರ್, ಎಚ್‌ಎಲ್‌ಬಿಸಿ-3 ಕೆ.ಆರ್‌.ಪೇಟೆ; ಒಟ್ಟು ಆಸ್ತಿ ಮೌಲ್ಯ ₹3.10 ಕೋಟಿ, ಆದಾಯ ಮೀರಿ ಶೇ 179.37ರಷ್ಟು ಆಸ್ತಿ ಸಂಪಾದನೆ. ಮೈಸೂರಿನಲ್ಲಿ 1 ಮನೆ, 1 ಫ್ಲ್ಯಾಟ್, 2 ನಿವೇಶನ, ವಿವಿಧಡೆ 4 ಎಕರೆ 34 ಗುಂಟೆ ಕೃಷಿ ಭೂಮಿ, ನಂಜನಗೂಡಿನಲ್ಲಿ ಫಾರ್ಮ್ ಹೌಸ್, 2 ಕಾರು, 1 ಕೆ.ಜಿ. ಚಿನ್ನ, 8.84 ಕೆ.ಜಿ ಬೆಳ್ಳಿ, ₹9.85 ಲಕ್ಷ ನಗದು, ₹22 ಲಕ್ಷದ ಠೇವಣಿ, 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ಕೆ.ಎಸ್. ಲಿಂಗೇಗೌಡ, ಕಾರ್ಯಪಾಲಕ ಎಂಜಿನಿಯರ್ ಸ್ಮಾರ್ಟ್‌ಸಿಟಿ ಮಂಗಳೂರು ಮಹಾನಗರ ಪಾಲಿಕೆ; ಒಟ್ಟು ಆಸ್ತಿ ಮೌಲ್ಯ ₹2.03 ಕೋಟಿ, ಆದಾಯ ಮೀರಿ ಶೇ 146.33 ರಷ್ಟು ಆಸ್ತಿ ಸಂಪಾದನೆ. ಮಂಗಳೂರಿನಲ್ಲಿ 1 ಮನೆ, ಚಾಮರಾಜನಗರ, ಮಂಗಳೂರಿನಲ್ಲಿ 3 ನಿವೇಶನ, 2 ಕಾರು, 1 ಕೆ.ಜಿ ಬೆಳ್ಳಿ, ₹10 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ಎಲ್.ಸಿ. ನಾಗರಾಜ್, ಸಕಾಲ ಆಡಳಿತಾಧಿಕಾರಿ; ಒಟ್ಟು ಆಸ್ತಿ ಮೌಲ್ಯ ₹10.82 ಕೋಟಿ, ಶೇ 198 ರಷ್ಟು ಆಸ್ತಿ ಸಂಪಾದನೆ. ಬೆಂಗಳೂರಿನಲ್ಲಿ 1 ಮನೆ ಹಾಗೂ ನಿವೇಶನ, ನೆಲಮಂಗಲದಲ್ಲಿ 1 ಮನೆ, 11 ಎಕರೆ 26 ಗುಂಟೆ ಜಮೀನು, ಕೈಗಾರಿಕಾ ಉದ್ದೇಶದ ಕಟ್ಟಡ, 3 ಕಾರು, 1.76 ಕೆ.ಜಿ ಚಿನ್ನ, 7.28 ಕೆ.ಜಿ ಬೆಳ್ಳಿ, ₹43 ಲಕ್ಷ ನಗದು, ₹14 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ಎಸ್.ಎಸ್. ರಾಜಶೇಖರ್, ಪಿಸಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ; ಒಟ್ಟು ಆಸ್ತಿ ಮೌಲ್ಯ ₹1.40 ಕೋಟಿ, ಅದಾಯ ಮೀರಿ ಶೇ 77 ಆಸ್ತಿ ಸಂಪಾದನೆ. ಮಾರಸಂದ್ರದಲ್ಲಿ 1 ಫ್ಲ್ಯಾಟ್, ಯಲಹಂಕದ ಶಿವನಹಳ್ಳಿಯಲ್ಲಿ 2 ಅಂತಸ್ತಿ ಫ್ಲ್ಯಾಟ್, ಮೈಲನಹಳ್ಳಿಯಲ್ಲಿ 1 ನಿವೇಶನ, 1 ಕಾರು, ₹4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ಮಾಯಣ್ಣ, ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ; ಒಟ್ಟು ಆಸ್ತಿ ಮೌಲ್ಯ ₹4.92 ಕೋಟಿ, ಆದಾಯ ಮೀರಿ ಶೇ 138ರಷ್ಟು ಆಸ್ತಿ ಸಂಪಾದನೆ. ಬೆಂಗಳೂರಿನಲ್ಲಿ 4 ಮನೆ, ವಿವಿಧೆಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 1 ಕಾರು, ₹59 ಸಾವಿರ ನಗದು, ₹10 ಲಕ್ಷ ಠೇವಣಿ, ಉಳಿತಾಯ ಖಾತೆಯಲ್ಲಿ ₹1.50 ಲಕ್ಷ, 600 ಗ್ರಾಂ ಚಿನ್ನ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, ₹12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.

* ಕೆ.ಎಸ್. ಶಿವಾನಂದ, ನಿವೃತ್ತ ಉಪನೋಂದಣಾಧಿಕಾರಿ, ಬಳ್ಳಾರಿ; ಒಟ್ಟು ಆಸ್ತಿ ₹1.37 ಕೋಟಿ, ಆದಾಯ ಮೀರಿ ಶೇ 198ರಷ್ಟು ಆಸ್ತಿ ಸಂಪಾದನೆ. ಮಂಡ್ಯದಲ್ಲಿ 1 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 1 ಕಾರು, ಶಕ್ರಪುರ ಗ್ರಾಮದಲ್ಲಿ ವಾಣಿಜ್ಯ ಸಂಕೀರ್ಣ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ 7 ಎಕರೆ ಕೃಷಿ ಜಮೀನು, ₹ 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ಸದಾಶಿವರಾಯಪ್ಪ ಮರಲಿಂಗಣ್ಣನವರ, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ; ಒಟ್ಟು ಆಸ್ತಿ ಮೌಲ್ಯ ₹3.05 ಕೋಟಿ, ಆದಾಯ ಮೀರಿ ಶೇ 190.81ರಷ್ಟು ಆಸ್ತಿ ಸಂಪಾದನೆ. ಬೆಳಗಾವಿಯಲ್ಲಿ 1 ಮನೆ, 22 ಎಕರೆ ಕೃಷಿ ಜಮೀನು, 1.35 ಕೆ.ಜಿ ಚಿನ್ನ, ₹8.22 ಲಕ್ಷ ನಗದು, ₹5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ, ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ, ಬೆಳಗಾವಿ ಜಿಲ್ಲೆ ರಾಯಭಾಗ; ಒಟ್ಟು ಆಸ್ತಿ ಮೌಲ್ಯ ₹1.74 ಕೋಟಿ, ಆದಾಯ ಮೀರಿ ಶೇ 191.91ರಷ್ಟು ಆಸ್ತಿ ಸಂಪಾದನೆ. ಬೈಲಹೊಂಗಲದಲ್ಲಿ 2 ಮನೆ, 4 ನಿವೇಶನ, 4 ಕಾರು, 6 ದ್ವಿಚಕ್ರ ವಾಹನ, 263 ಗ್ರಾಂ ಚಿನ್ನ, 945 ಗ್ರಾಂ ಬೆಳ್ಳಿ, ₹1.50 ಲಕ್ಷ ಮೌಲ್ಯದ ಠೇವಣಿ, ₹1.10 ಲಕ್ಷ ನಗದು, ₹5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

* ನಾಥಾಜಿ ಪೀರಾಜಿ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್-2 ಹೆಸ್ಕಾಂ, ಬೆಳಗಾವಿ; ಒಟ್ಟು ಆಸ್ತಿ ಮೌಲ್ಯ ₹2.20 ಕೋಟಿ, ಆದಾಯ ಮೀರಿ ಶೇ 141.30ರಷ್ಟು ಆಸ್ತಿ ಸಂಪಾದನೆ. ಬೆಳಗಾವಿಯಲ್ಲಿ 1 ಮನೆ, 2 ನಿವೇಶನ, 1 ಕಾರು, 239 ಗ್ರಾಂ ಚಿನ್ನ, 1.80 ಕೆ.ಜಿ ಬೆಳ್ಳಿ, ₹38 ಸಾವಿರ ನಗದು, ₹20 ಲಕ್ಷ ಬೆಲೆಬಾವಳುವ ಗೃಹೋಪಯೋಗಿ ವಸ್ತುಗಳು.

* ಲಕ್ಷ್ಮೀನರಸಿಂಹಯ್ಯ, ಕಂದಾಯ ನಿರೀಕ್ಷಕ, ದೊಡ್ಡಬಳ್ಳಾಪುರ; ಒಟ್ಟು ಆಸ್ತಿ ಮೌಲ್ಯ ₹1.83 ಕೋಟಿ, ಆದಾಯ ಮೀರಿ ಶೇ 141.30 ರಷ್ಟು ಆಸ್ತಿ ಸಂಪಾದನೆ. 5 ಮನೆ, 6 ನಿವೇಶನ, 25 ಗುಂಟೆ ಜಮೀನು, 765 ಗ್ರಾಂ ಚಿನ್ನ, 15 ಕೆ.ಜಿ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನ, ₹1.13 ಲಕ್ಷ ನಗದು.

* ಬಿ. ಕೃಷ್ಣಾರೆಡ್ಡಿ, ನಂದಿನ ಹಾಲಿನ ಡೇರಿಯ ಪ್ರಧಾನ ವ್ಯವಸ್ಥಾಪಕ; ಒಟ್ಟು ಆಸ್ತಿ ಮೌಲ್ಯ ₹4.82 ಕೋಟಿ, ಆದಾಯ ಮೀರಿ ಶೇ 305ರಷ್ಟು ಆಸ್ತಿ ಸಂಪಾದನೆ. 3 ಮನೆ, 9 ನಿವೇಶನ, 5 ಎಕರೆ 30 ಗುಂಟೆ ಕೃಷಿ ಜಮೀನು, ಹೊಸಕೋಟೆ ತಾಲ್ಲೂಕಿನಲ್ಲಿ ಪೆಟ್ರೋಲ್ ಬಂಕ್, 383 ಗ್ರಾಂ ಚಿನ್ನ, 3.30 ಕೆಜಿ ಬೆಳ್ಳಿ, ₹3 ಲಕ್ಷ ನಗದು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ