Breaking News
Home / ಜಿಲ್ಲೆ / ತುಮಕೂರು / ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ 40 ಶವಗಳು ಅನಾಥವಾಗಿವೆ.

ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ 40 ಶವಗಳು ಅನಾಥವಾಗಿವೆ.

Spread the love

ತುಮಕೂರು: ಮಹಾಮಾರಿ ಕೊರೊನಾ ಮನುಷ್ಯತ್ವದ ಪರೀಕ್ಷೆ ಮಾಡ್ತಿದೆ. ಕೊರೊನಾದಿಂದ ತಮ್ಮವರೇ ತಮ್ಮ ಜೊತೆಗಿದ್ದವರೇ ತಮಗೆ ಬೇಕಾದವರೇ ಮೃತಪಟ್ಟರೂ ಅವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ. ಇಂಥದ್ದೊಂದು ವಿಚಿತ್ರ ಸನ್ನಿವೇಶಕ್ಕೆ ತುಮಕೂರು ಸಾಕ್ಷಿ ಆಗಿದೆ.ಸಂಬಂಧಿಕರು ಬರದೇ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ 40 ಶವಗಳು ಅನಾಥವಾಗಿವೆ. ಇದುವರೆಗೂ ಜಿಲ್ಲೆಯಲ್ಲಿ 3,470 ಜನರಿಗೆ ಸೋಂಕು ದೃಢವಾಗಿದೆ. ಇವರಲ್ಲಿ 108 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವುಗಳಲ್ಲಿ 40 ಶವಗಳನ್ನು ಸಂಬಂಧಿಕರು ಸ್ವೀಕರಿಸಿಯೇ ಇಲ್ಲ.

ಹೀಗಾಗಿ ಸ್ವಯಂಸೇವಕರ ಸಹಕಾರದೊಂದಿಗೆ ಮೃತದೇಹಗಳ ಅಂತ್ಯಕ್ರಿಯೆಯನ್ನ ಜಿಲ್ಲಾಡಳಿತವೇ ನಡೆಸುತ್ತಿದೆ.

ಕೊರೊನಾದಿಂದ ಮೃತಪಟ್ಟರೇ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆಗಾಗಿ ಶವವನ್ನು ಸಂಬಂಧಿಕರಿಗೆ ನೀಡಬಹುದು ಎಂದು ಸರ್ಕಾರ ನಿಯಮ ಬದಲಾವಣೆ ಮಾಡಿದೆ. ಆದರೆ ತಮ್ಮವರ ಮೃತದೇಹಗಳನ್ನ ಸ್ವೀಕರಿಸಲು ಸಂಬಂಧಿಕರು ಮಾತ್ರ ಸಿದ್ಧರಿಲ್ಲ.


Spread the love

About Laxminews 24x7

Check Also

ಬೆಳ್ಳಂಬೆಳಗ್ಗೆ ತುಮಕೂರು ಬಳಿ ಭೀಕರ ಅಪಘಾತ

Spread the love ತುಮಕೂರು: ಬೆಳ್ಳಂಬೆಳಗ್ಗೆ ಕೆಎಸ್‌ಆರ್​ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ತುಮಕೂರು ಜಿಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ