Breaking News
Home / Uncategorized / ಅತಿಯಾಗಿ ಮೊಬೈಲ್​ ಬಳಸುತ್ತೀರಾ? ಎಚ್ಚರ ಇರಲಿ

ಅತಿಯಾಗಿ ಮೊಬೈಲ್​ ಬಳಸುತ್ತೀರಾ? ಎಚ್ಚರ ಇರಲಿ

Spread the love

ಆಧುನಿಕ ಜಗತ್ತಿನಲ್ಲಿ ಮೊದಲಿಗಿಂತ ಉತ್ತಮವಾದ ಸಂವಹನ ಪ್ರಾರಂಭವಾಗಿದೆ. ಇಂದಿನ ಕಾಲದಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ (Mobile) ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಭಾವನೆ ಹೆಚ್ಚಾಗಿದೆ. ಅದರಲ್ಲೂ ಜನರು ಮೊಬೈಲ್ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದು ಅನೇಕ ರೀತಿಯ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮುಖ್ಯವಾಗಿ ಮೊಬೈಲ್ ಬಳಕೆ ಚರ್ಮದ (Skin) ಮೇಲೂ ಪರಿಣಾಮ ಬೀರುತ್ತದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ನೀಲಿ ಬೆಳಕು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ರೆಟಿನಾದ ಸಮಸ್ಯೆಗಳನ್ನು ಒಳಗೊಂಡಂತೆ ಅನೇಕ ರೋಗವನ್ನು ಉಂಟುಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಮೊಬೈಲ್ ಬಳಕೆಯು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಚರ್ಮದ ಸಮಸ್ಯೆಗಳು
ಮೊಬೈಲ್ ಫೋನ್‌ಗಳ ಮೂಲಕವೂ ಚರ್ಮವು ಹೆಚ್ಚಿನ ವಿಕಿರಣವನ್ನು ಪಡೆಯುತ್ತದೆ. ಆದಾಗ್ಯೂ, ಜನರಿಗೆ ತಿಳಿದಿಲ್ಲದ ಸಂಗತಿಯೆಂದರೆ, ಮೊಬೈಲ್ ಫೋನ್‌ಗಳ ಹೆಚ್ಚಿದ ಬಳಕೆ ಮತ್ತು ದೀರ್ಘಕಾಲ ಮೊಬೈಲ್​ನಲ್ಲಿ ಮಾತನಾಡುವುದು ಚರ್ಮದ ಸಮಸ್ಯೆಗಳು ಮತ್ತು ಇತರ ಅಪಾಯವನ್ನು ಹೆಚ್ಚಿಸಬಹುದು. ಮೊಬೈಲ್‌ನ ಅತಿಯಾದ ಬಳಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ.

ಕಣ್ಣಿನ ಸಮಸ್ಯೆ
ನೀವು ಹೆಚ್ಚು ಮೊಬೈಲ್ ಬಳಸುತ್ತಿದ್ದರೆ ಕಣ್ಣು ಮತ್ತು ತ್ವಚೆಯ ಕಾಳಜಿ ಮಾಡಿ. ಏಕೆಂದರೆ ಕಣ್ಣಿನ ಸಮಸ್ಯೆ ಎದುರಾಗುತ್ತದೆ ಮತ್ತು ಕಣ್ಣಿನ ಕೆಳಗೆ ಕಪ್ಪಾಗುತ್ತದೆ. ಇದಕ್ಕಾಗಿ ನೀವು ಕಣ್ಣಿನ ಕ್ರೀಮ್ ಅನ್ನು ಬಳಸುವುದು ಅವಶ್ಯಕ. ವಿಕಿರಣ ಮತ್ತು ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಮೇಲೆ ಹೈಪರ್ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳು ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಚರ್ಮದ ಆರೈಕೆಗಾಗಿ ಹೆಡ್ ಫೋನ್ ಬಳಸಿ.

ಮೊಡವೆಗೆ ಕಾರಣ
ಅತಿಯಾದ ಮೊಬೈಲ್ ಬಳಕೆ ಮೊಡವೆಗಳನ್ನು ಉಂಟುಮಾಡುತ್ತವೆ ಅಥವಾ ಮೊಡವೆಗಳ ಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ. ವಾಸ್ತವವಾಗಿ, ಮೊಬೈಲ್​ ಅನೇಕ ಬ್ಯಾಕ್ಟೀರಿಯಾಗಳನ್ನು ಹೊಂದಿದೆ. ಹೀಗಾಗಿ ನಿಮ್ಮ ತ್ವಚೆಯ ಮೇಲೆ ಕಪ್ಪು ಕಲೆಗಳಿದ್ದರೆ ಅದಕ್ಕಾಗಿ ಸ್ಕಿನ್ ಸೀರಮ್​ನಿಂದ ತ್ವಚೆಯನ್ನು ರಕ್ಷಿಸಿ. ಸೀರಮ್​ನ ಕೆಲವು ಹನಿಗಳನ್ನು ತೆಗೆದುಕೊಂಡು ತ್ವಚೆಯ ಮೇಲೆ ಹಚ್ಚಿ. ಇದು ನಿಮ್ಮ ಮುಖದ ಚರ್ಮವನ್ನು ಬಿಗಿಯಾಗಿ ಮತ್ತು ಸುಕ್ಕುಗಳಿಂದ ದೂರವಿಡುತ್ತದೆ. ಅಲ್ಲದೇ ಮೊಡವೆ ದೂರ ಮಾಡುತ್ತದೆ.

ಮುಖದ ಮೇಲೆ ಹೆಚ್ಚಿದ ಕೂದಲು
ಮೊಬೈಲ್ ಬಳಕೆ ನಿಮ್ಮ ಕೂದಲಿನ ಮೇಲೂ ಪರಿಣಾಮ ಬೀಳುತ್ತದೆ. ಕೂದಲಿನ ಮೇದೋಗ್ರಂಥಿಯು ಮುಖದ ಮೇಲೆ ಎಣ್ಣೆ ಅಂಶವನ್ನು ಹೆಚ್ಚಿಸಬಹುದು. ಇದು ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆಗಳಿಗೆ ಮತ್ತು ಮುಖದ ಮೇಲೆ ಹೆಚ್ಚು ಕೂದಲು ಬೆಳೆಯಲು ಕಾರಣವಾಗಬಹುದು. ಇದರೊಂದಿಗೆ, ನೀಲಿ ಬೆಳಕು ಚರ್ಮವನ್ನು ಹಾನಿಗೊಳಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ, ನೀವು ಫೋನ್‌ನಲ್ಲಿ ಸುದೀರ್ಘ ಸಂಭಾಷಣೆಯನ್ನು ಹೊಂದಿದ್ದರೆ,  ಹ್ಯಾಂಡ್ಸ್-ಫ್ರೀ ಸಾಧನವನ್ನು ಬಳಸಿ. ಇದು ಫೋನ್ ಮತ್ತು ಮುಖದ ನಡುವೆ ಹೆಚ್ಚಿನ ಅಂತರವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.


Spread the love

About Laxminews 24x7

Check Also

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Spread the love ಚಿಕ್ಕಬಳ್ಳಾಪುರ: ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ತಾಲೂಕು ಪಂಚಾಯತ್ ಇಒ ಒಬ್ಬರು ಲಂಚ ಪಡೆಯುತ್ತಿದ್ದ ವೇಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ