Home / ರಾಜಕೀಯ / ಕಾಂಗ್ರೆಸ್​ ಪಾಳಯದಲ್ಲಿ ಸಿದ್ದು-ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ಆಂತರಿಕ ಸಮರ

ಕಾಂಗ್ರೆಸ್​ ಪಾಳಯದಲ್ಲಿ ಸಿದ್ದು-ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ಆಂತರಿಕ ಸಮರ

Spread the love

ಬೆಂಗಳೂರು: ಕಾಂಗ್ರೆಸ್​ನ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷ ಅಬ್ದುಲ್​ ಜಬ್ಬಾರ್​ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಬಣ ರಾಜಕೀಯ ಬಯಲಾಗಿದ್ದು, ಕೈ ನಾಯಕರಿಗೆ ಭಾರಿ ಮುಜುಗರ ತಂದೊಡಿದೆ.

ಅರಮನೆ ಮೈದಾನದಲ್ಲಿ ಮಂಗಳವಾರ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಕೆಲವರು ಡಿಕೆಶಿ.. ಡಿಕೆಶಿ.. ಜಮೀರ್ ಜಮೀರ್​ ಎಂದು ಘೋಷಣೆ ಕೂಗುತ್ತಿದ್ದರು. ಇನ್ನು ಮುಂದು ವರೆದು ಜಮೀರ್​ ಫೋಟೋ ಹಿಡಿದು ಜಮೀರ್​ ಜಮೀರ್​ ಎಂದು ಜೋರಾಗಿ ಕೂಗುತ್ತಿದ್ದರು. ಸಿಟ್ಟಾದ ಸಿದ್ದರಾಮಯ್ಯ, ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದ ಘಟನೆ ಮಂಗಳವಾರ ನಡೆದಿದೆ. ‘ಏಯ್​ ಸುಮ್ನಿರ್ರೀ, ಫೋಟೋನಾ ಇಳಿಸ್ರೀ ಕೆಳಗೆ’ ಎಂದು ಸಿದ್ದರಾಮಯ್ಯ ಗದರಿದರೂ ‘ಡಿಕೆ ಡಿಕೆ’ ಎಂದು ಕೆಲವರು ಮತ್ತೆ ಕೂಗಿದ್ದಾರೆ. ಭಾಷಣ ನಿಲ್ಲಿಸಿ ವೇದಿಕೆಯಿಂದ ಸಿದ್ದರಾಮಯ್ಯ ಕೆಳಗಿಳಿಯುತ್ತಿದ್ದಂತೆ ವೇದಿಕೆ ಮೇಲೆ ಬಂದ ಡಿ.ಕೆ. ಶಿವಕುಮಾರ್​, ‘ಸುಮ್ಮನಿರ್ರಿ, ಇಲ್ಲಾಂದ್ರೆ ಎಲ್ಲರನ್ನೂ ಆಚೆ ಹಾಕಿ ಬಿಡ್ತೀನಿ ಹುಷಾರ್’​ ಎಂದು ವಾರ್ನಿಂಗ್​ ಕೊಟ್ಟರೂ ಗದ್ದಲ ಮಾತ್ರ ನಿಲ್ಲಲಿಲ್ಲ.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗಾದಿಯಲ್ಲಿ ತಮ್ಮ ಬೆಂಬಲಿಗರನ್ನ ಕೂರಿಸಲು ಜಮೀರ್ ಮತ್ತು ಹ್ಯಾರಿಸ್ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಅಬ್ದುಲ್ ಜಬ್ಬಾರ್ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರಿಂದ ಜಮೀರ್​ ಕೋಪಗೊಂಡು ಕಾರ್ಯಕ್ರಮಕ್ಕೆ ಗೈರಾಗಿದ್ದರು ಎನ್ನಲಾಗಿದೆ. ಆದರೆ, ಜಮೀರ್ ಬರಲೇಬೇಕು ಎಂದು ಕಾರ್ಯಕ್ರಮದಲ್ಲಿ ಕೈ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಸಿದ್ದರಾಮಯ್ಯರ ಸೂಚನೆ ನಡುವೆಯೂ ಜಮೀರ್ ಪರ ಘೋಷಣೆಯನ್ನ ಹಲವರು ಕೂಗುತ್ತಲೇ ಇದ್ದರು. ಜಮೀರ್ ಪರ ಘೋಷಣೆ ಕೂಗುತ್ತಿದ್ದವರನ್ನ ಗದರಿಸಿದ ಡಿಕೆಶಿ, ‘ಪಕ್ಷವನ್ನು ಪೂಜೆ ಮಾಡಿ.. ವ್ಯಕ್ತಿ ಪೂಜೆ ನಡೆಯಲ್ಲ’ ಎಂದು ಖಡಕ್ ವಾರ್ನಿಂಗ್ ಮಾಡಿದರೂ ಗದ್ದಲ ಮಾತ್ರ ನಿಲ್ಲಲಿಲ್ಲ.

ಕಾಂಗ್ರೆಸ್​ ಪಾಳಯದಲ್ಲಿ ಸಿದ್ದು-ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ಆಂತರಿಕ ಸಮರ ನಡೆಯುತ್ತಿದೆ. ಘಟನೆ ಹಿಂದೆ ನಲ್ಪಾಡ್ ಹ್ಯಾರಿಸ್ ಗ್ಯಾಂಗ್ ಇದ್ಯಾ? ಕಾರ್ಯಕರ್ತರು ಜಮೀರ್ ಪರ ಘೋಷಣೆ ಕೂಗುತ್ತಿದ್ದವರು ನಲ್ಪಾಡ್ ಹ್ಯಾರಿಸ್ ಗ್ಯಾಂಗ್​ನವರಾ? ಜಮೀರ್ ಬೆಂಬಲಿಗರಾಗಿದ್ದರೆ ಸಿದ್ದರಾಮಯ್ಯರ ಭಾಷಣಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಜಮೀರ್ ವಿರುದ್ಧ ಹೈಕಮಾಂಡ್​ಗೆ ಸಂದೇಶ ಮುಟ್ಟಿಸಲು ಡಿಕೆಶಿ ಬಣದ ನಲ್ಪಾಡ್ ಹ್ಯಾರೀಸ್ ಗ್ಯಾಂಗ್​ನವರೇ ಇದನ್ನ ಮಾಡಿಸಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ