Home / ಮೂಡಲಗಿ / ಗೋಮೂತ್ರ ಮತ್ತು ಸಗಣಿ ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ: ಸಿಎಂ ಶಿವರಾಜ್​ಸಿಂಗ್​ ಚೌಹಾಣ್​ 4hr0 views37 shares

ಗೋಮೂತ್ರ ಮತ್ತು ಸಗಣಿ ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ: ಸಿಎಂ ಶಿವರಾಜ್​ಸಿಂಗ್​ ಚೌಹಾಣ್​ 4hr0 views37 shares

Spread the love

ಭೋಪಾಲ್​: ಗೋವು ಮತ್ತು ಗೋಮೂತ್ರ ಹಾಗೂ ಸಗಣಿಯು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುವುದರೊಂದಿಗೆ ಇಡೀ ದೇಶವನ್ನು ಆರ್ಥಿಕತೆಯನ್ನು ಸಮರ್ಥವಾಗಿಸುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ​ಸಿಂಗ್​ ಚೌಹಾಣ್​ ಶನಿವಾರ ಹೇಳಿದರು.

 

ಭಾರತೀಯ ಪಶುವೈದ್ಯಕೀಯ ಸಂಘದಿಂದ ಆಯೋಜಿಸಲಾದ ಮಹಿಳಾ ಪಶುವೈದ್ಯರ ‘ಶಕ್ತಿ 2021’ ಸಮಾವೇಶದಲ್ಲಿ ಮಾತನಾಡಿದ ಸಿಎಂ ಚೌಹಾಣ್​, ನಮ್ಮ ಸರ್ಕಾರವು ಗೋವುಗಳ ಅಭಯಾರಣ್ಯಗಳು ಮತ್ತು ಗೋಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ, ಇದನ್ನು ಏಕಾಂಗಿಯಾಗಿ ನಡೆಸಲು ಸಾಧ್ಯವಿಲ್ಲ. ಸಮುದಾಯ ಭಾಗವಹಿಸುವಿಕೆ ಅವಶ್ಯಕವಾಗಿದೆ ಎಂದು ಹೇಳಿದರು.

ನಾವು ಬಯಸಿದರೆ, ನಮ್ಮ ದೇಶದ ಆರ್ಥಿಕತೆಯನ್ನು ಬಲ ಪಡಿಸಬಹುದು ಮತ್ತು ಗೋವು, ಗೋಮೂತ್ರ ಹಾಗೂ ಸಗಣಿಯ ಮೂಲಕ ದೇಶದ ಆರ್ಥಿಕತೆಯನ್ನು ಸಮರ್ಥವಾಗಿಸಬಹುದು. ಮರಗಳ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಗೌಕಸ್ತ್​ (ಸಗಣಿಯಿಂದ ತಯಾರಿಸಲಾದ ದಿಮ್ಮಿ ) ಬಳಸಲಾಗುತ್ತಿದೆ ಎಂದರು.

ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಹುದು ಎಂಬುದರ ಕುರಿತು ಪಶುವೈದ್ಯರು ಮತ್ತು ತಜ್ಞರು ಫಲಿತಾಂಶ ಆಧಾರಿತ ಕೆಲಸದಲ್ಲಿ ತೊಡಗಬೇಕು ಎಂದು ಸಿಎಂ ಚೌಹಾಣ್​ ಸಲಹೆ ನೀಡಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ, ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಸು ಸಾಕಣೆ ಮಾಡುತ್ತಿದ್ದು, ಡೈರಿ ವ್ಯವಹಾರದ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ