Breaking News
Home / ರಾಜಕೀಯ / ಕೃಷಿ ಕಾಯ್ದೆ ವಿರುದ್ಧ ಯುವ ರೈತನ ಒಂಟಿ ಹೋರಾಟ, ಸೈಕಲ್ ಮೇಲೆ ಊರೂರು ತಿರುಗಾಟ

ಕೃಷಿ ಕಾಯ್ದೆ ವಿರುದ್ಧ ಯುವ ರೈತನ ಒಂಟಿ ಹೋರಾಟ, ಸೈಕಲ್ ಮೇಲೆ ಊರೂರು ತಿರುಗಾಟ

Spread the love

ಕಳೆದ ಒಂದು ವರ್ಷದಿಂದ ನಿರಂತರವಾಗಿ ರೈತರ ಪ್ರತಿಭಟನೆಗಳು(Farmers Protest) ಮುಂದುವರಿದಿದೆ. ವಿರೋಧದ ನಡುವೆಯೂ ಕೆಲವರು ರೈತರೊಂದಿಗೆ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಅವರಿಗೆ ಬೆಂಬಲ ನೀಡಿದರೆ, ಇನ್ನೂ ಕೆಲವರು ಅವರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಇಲ್ಲೊಬ್ಬ ಯುವ ರೈತ ಅನ್ನದಾತರಿಗೆ ಬೆಂಬಲ ಸೂಚಿಸಲು ಕಾಶ್ಮೀರದಿಂದ(Kashmir) ಕನ್ಯಾಕುಮಾರಿಯವರೆಗೆ(Kanya Kumari) ಯಾತ್ರೆ ಹೊರಟಿದ್ದು, ಶನಿವಾರ ಕಾರವಾರಕ್ಕೆ ಭೇಟಿ ನೀಡಿದರು.

ಯಾರಿವ ಈ ಯುವ ರೈತ?

ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತರು ದೆಹಲಿಯ ಗಡಿಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆ ಆರೆಂಟು ತಿಂಗಳು ಕಳೆದಿದೆ. ಆದರೆ ಇನ್ನೂ ರೈತರ ಪ್ರತಿಭಟನೆ, ಹೋರಾಟ ನಿಂತಿಲ್ಲ. ಸರ್ಕಾರ ಮೂರು ನೂತನ ತಿದ್ದುಪಡಿಗಳನ್ನು ಹಿಂಪಡೆಯುವವರೆಗೆ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ.

ಈ ನಡುವೆ ಅನೇಕರು ರೈತರ ಹೋರಾಟದ ಸ್ಥಳಗಳಿಗೆ ತೆರಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದರೆ, ಇನ್ನು ಕೆಲವರು ತಾವಿದ್ದಲ್ಲಿಯೇ ಪ್ರತಿಭಟನೆಗಳನ್ನು ನಡೆಸಿ, ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ರೈತರಿಗೆ ಬೆಂಬಲ ಸೂಚಿಸಲು ಹಾಗೂ ಪರಿಸರದ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹರಿಯಾಣ ಮೂಲದ ಕರಮ್ ವೀರ್ ಎಂಬ ಯುವ ಕೃಷಿಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಯಾತ್ರೆ ಹೊರಟಿದ್ದಾರೆ.

: ಕೊಲೆ ಮಾಡಿ ಮೃತದೇಹದ ಸಮೇತ ಪೊಲೀಸ್ ಸ್ಟೇಷನ್​​ಗೆ ಬಂದ ಆರೋಪಿಗಳು

ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕರಮ್ ವೀರ್, ಊರಿನಲ್ಲಿರುವ ಎಂಟು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ಇತ್ತೀಚಿನ ರೈತರ ಹೋರಾಟಗಳನ್ನು ಗಮನಿಸಿ ರೈತರಿಗೆ ಬೆಂಬಲ ನೀಡಲು ಇಚ್ಛಿಸಿ ಕರಮ್ ವೀರ್ ಸೈಕಲ್ ಯಾತ್ರೆ ಹೊರಟಿದ್ದಾರೆ. ಕಾಶ್ಮೀರದ ಕಾರ್ಗಿಲ್ ನಿಂದ ಹೊರಟಿರುವ ಕರಮ್ ವೀರ್ ಲುಧಿಯಾನ, ಹರಿಯಾಣ, ಜೈಪುರ, ಅಜ್ಮೇರ್, ಗುಜರಾತ್, ಮಹಾರಾಷ್ಟ್ರ, ಗೋವಾ ಮೂಲಕ ಶನಿವಾರ ಕಾರವಾರ ತಲುಪಿದರು.

ಆಗಸ್ಟ್ 30ರಂದು ಕಾಶ್ಮೀರದಿಂದ ಹೊರಟಿದ್ದ ಕರಮ್ ವೀರ್, ದಿನಕ್ಕೆ ನೂರು‌ ಕಿಲೋ ಮೀಟರ್ ನಷ್ಟು ಪೆಡಲ್ ತುಳಿಯುತ್ತಾರೆ. ಈ ಪ್ರಯಾಣವನ್ನು 50 ದಿನಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ. ಶನಿವಾರ ಕಾರವಾರ ಮೂಲಕ ಉಡುಪಿಯತ್ತ ತೆರಳಿರುವ ಇವರು, ದಕ್ಷಿಣ ಕನ್ನಡದ ಮೂಲಕ ಕೇರಳಕ್ಕೆ ತೆರಳಿ ಕನ್ಯಾಕುಮಾರಿಯಲ್ಲಿ ತಮ್ಮ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಯುವ ರೈತನಿಗೆ ಹೋದಲೆಲ್ಲ ಸ್ವಾಗತ

: ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ನಿರೀಕ್ಷೆ-16 ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೈಕಲ್ ಯಾತ್ರೆ ಕೈಗೊಂಡಿರುವ ಕರಮ್ ವೀರ್ ಗೆ ಹೋದ ಕಡೆ ಉತ್ತಮ‌ಬೆಂಬಲ ಸಿಗುತ್ತಿದೆ ಅಂತೆ.ಗೋವಾ ಮಹಾರಾಷ್ಟ್ರ ಕಡೆ ರೈತರಿಂದ ಉತ್ತಮ ಬೆಂಬಲ ಸಿಕ್ಕಿದ್ದು ಯುವ ರೈತರ ಸ್ಪೂರ್ತಿ ಸಿಕ್ಕಿದೆ ಅಂತೆ.ರೈತರ ಸಮಸ್ಯೆ ಮುಂದಿಟ್ಟುಕೊಂಡು ಕೈ ಗೊಂಡಿರುವ ಸೈಕಲ್ ಯಾತ್ರೆಯನ್ನ ವಿವಿಧ ರಾಜ್ಯದ ರೈತರು ಬೆಂಬಲಿಸಿದ್ದಾರೆ ಎಂದು ಕರಮ್ ವೀರ್ ಕಾರವಾರದ ಮದ್ಯಾಮದವರ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇವತ್ತು ಗೋವಾ ಮಾರ್ಗವಾಗಿ ಕಾರವಾರ ತಲುಪಿ ಮುಂದೆ ಉಡುಪಿ ಹೋಗಲಿದ್ದಾನೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ