Breaking News
Home / ರಾಜಕೀಯ / ಹಿಂದಿ ಹೇರಿಕೆ ಸಲ್ಲದು ಎಂದ ನಟ ಧನಂಜಯ್​-ನಿರ್ದೇಶಕ ಸಿಂಪಲ್​ ಸುನಿ..!

ಹಿಂದಿ ಹೇರಿಕೆ ಸಲ್ಲದು ಎಂದ ನಟ ಧನಂಜಯ್​-ನಿರ್ದೇಶಕ ಸಿಂಪಲ್​ ಸುನಿ..!

Spread the love

ರಾಜ್ಯದಲ್ಲಿ ಹಿಂದಿ ಹೇರಿಕೆ (Hindi Imposition) ವಿಚಾರವಾಗಿ ಸಾಕಷ್ಟು ಸಲ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇನ್ನೂ ಸಹ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಈಗ ಮತ್ತೊಮ್ಮೆ ಹಿಂದಿ ಹೇರಿಕೆ ವಿಷಯ ಚರ್ಚೆಗೆ ಬಂದಿದೆ. ಸೆ.14ರಂದು ದೇಶದ ಹಲವೆಡೆ ಹಿಂದಿ ದಿವಸ್​ (Hindi Diwas) ಅನ್ನು ಆಚರಣೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಹಿಂದಿ ದಿವಸ್​ ಆಚರಣೆ ತುಂಬಾ ಜೋರಾಗಿ ನಡೆಯುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಈ ದಿನದ ಆಚರಣೇಗೆ ತೀವ್ರ ವಿರೋಧ ಇದೆ. ಜೊತೆಗೆ ಇದರ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತವೆ. ಪ್ರತಿವರ್ಷದಂತೆ ಈ ಸಲವೂ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಲ್ಲಿ (Sandalwood Celebrities) ಸಾಕಷ್ಟು ಮಂದಿ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿದ್ದಾರೆ.

ಸ್ಯಾಂಡಲ್​ವುಡ್​ ನಟರಾದ ಧನಂಜಯ್​ ಅವರು ಹಿಂದಿ ದಿವಸ್​ ವಿರೋಧಿಸಿ ಸಾಲು ಸಾಲು ಟ್ವೀಟ್​ಗಳನ್ನು ಮಾಡಿದ್ದಾರೆ. ಒಂದು ಟ್ವೀಟ್​ನಲ್ಲಿ ರಾಜ್​ ಕುಮಾರ್​ ಅವರ ಫೋಟೋ ಹಂಚಿಕೊಂಡಿರುವ ಡಾಲಿ ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಬರೆದುಕೊಂಡಿದ್ದಾರೆ. ಮತ್ತೆರಡು ಟ್ವೀಟ್​ಗಳಲ್ಲಿ ಹಿಂದಿಯನ್ನಾಗಲಿ, ಇಂಗ್ಲಿಷ್​ ಭಾಷೆಗಳನ್ನಾಗಲಿ ಎಲ್ಲರೂ ಕಲಿಯಬೇಕು ಎನ್ನುವುದು ಅವಿವೇಕ. ಇದು ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು ಎಂದು ಧನಂಯ್ ಟ್ವೀಟ್​ ಮಾಡಿದ್ದಾರೆ.

 

ಇನ್ನು ನಿರ್ದೇಶಕ ಸಿಂಪಲ್ ಸುನಿ ಸಹ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ್​ ಆಚರಣೆಯನ್ನು ವಿರೋಧಿಸಿದ್ದಾರೆ. ಭಾರತದ ವೈಶಿಷ್ಟ್ಯತೆಯೇ ವಿವಿಧತೆಯಲ್ಲಿ ಏಕತೆ. ಹಲವಾರು ವೇಶ, ಭಾಷೆ, ಭಕ್ಷ್ಯಭೋಜನ, ಆಟ-ನೋಟ, ಸಂಸ್ಕೃತಿ, ಸಂಪ್ರದಾಯ ಇದ್ದರೂ ಒಂದಾಗಿರುವ ಹೆಗ್ಗಳಿಕೆ ನಮ್ಮದು. ಹೀಗಿರುವಾಗ ಒಂದೇ ಭಾಷೆಯನ್ನು ಹೇರುವುದು ತಪ್ಪು ಅಭಿಪ್ರಾಯ. ಅವರವರ ರಾಜ್ಯದಲ್ಲಿ ಆ ಮಣ್ಣಿನ ಮಾತೃಭಾಷೆಗೆ ಪ್ರಥಮಸ್ಥಾನವಿರಬೇಕು ಎಂದು ಟ್ವೀಟ್​ ಮಾಡಿದ್ದಾರೆ.

: ಕಂಗನಾ ರನೌತ್ ಅಭಿನಯದ Thalaivii ಮಾಡಿದ ವಾರಾಂತ್ಯದ ಕಲೆಕ್ಷನ್ ಎಷ್ಟು ಗೊತ್ತಾ..?

ಸಂವಿಧಾನದಲ್ಲಿ (constitution) ಯಾವುದೇ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ (Central Government) ಎಲ್ಲ ರಾಜ್ಯಗಳ ವಿರೋಧವನ್ನೂ ಲೆಕ್ಕಿಸದೆ ಸೆಪ್ಟೆಂಬರ್​ 14 ನ್ನು ಹಿಂದಿ ದಿವಸ್​ (Hindi Diwas) ಎಂದು ಘೋಷಿಸಿತ್ತು. ಅಲ್ಲದೆ, ಎಲ್ಲ ರಾಜ್ಯಗಳಲ್ಲೂ ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ತಾಕೀತು ಮಾಡಿತ್ತು. ಈ ವಿಚಾರ ಸಾಮಾನ್ಯವಾಗಿ ಕರ್ನಾಟಕವನ್ನು, ಕನ್ನಡ ಪರ ಹೋರಾಟಗಾರರನ್ನೂ ಕೆರಳಿಸಿದ್ದು ಸುಳ್ಳಲ್ಲ.

ಹಿಂದಿ ಹೇರಿಕೆ ವಿರೋಧಿಸಿ ಟ್ವಿಟರ್ ಅಭಿಯಾನ

ಕರವೇ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಟ್ವಿಟರ್ ಅಭಿಯಾನವನ್ನು (Twitter Campaign) ಆರಂಭಿಸಿದೆ. ಇಂದು ಬೆಳಗ್ಗೆ 10 ಗಂಟೆಗೆ ಟ್ವಿಟರ್ ಅಭಿಯಾನ ಆರಂಭವಾಗಲಿದ್ದು, ಸತತ 12 ಗಂಟೆಗಳ ಕಾಲ ಈ ಅಭಿಯಾನ ನಡೆಯಲಿದ್ದು, ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬೇಕು ಎಂದು ಕರವೇ ಮನವಿ ಮಾಡಿದೆ.

ಕೇಂದ್ರ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿರುವ ಕನ್ನಡ ಪರ ಹೋರಾಟಗಾರರು, “ಇಂದು (ಸೆಪ್ಟೆಂಬರ್‌ 14) ಒಕ್ಕೂಟ ಸರ್ಕಾರ ಹಿಂದೂ ದಿವಸವನ್ನು ಆಚರಿಸುತ್ತಿದ್ದು, ಭಾರತೀಯರ ಇತರೆ ಭಾಷೆಗಳ ಮೇಲೆ ಹಿಂದಿಯನ್ನು ಹೇರುವುದು ನಿರಂತರವಾಗಿ ನಡೆಯುತ್ತಿದೆ. ಹಿಂದಿ ಭಾಷೆಗೆ ಯಾರೂ ವಿರೋಧಿಸುತ್ತಿಲ್ಲ. ಒಂದು ಭಾಷೆಯಾಗಿ ಎಲ್ಲರೂ ಹಿಂದಿಯನ್ನು ಗೌರವಿಸುತ್ತಾರೆ.

ಆದರೆ, ಇತರ ಭಾಷಿಗರ ಮೇಲೆ ಹಿಂದಿ ಹೇರಿಕೆಯನ್ನು ಸರ್ಕಾರ ನಿರಂತರ ಮುಂದುವರಿಸುತ್ತಿದೆ. ಉದ್ಯೋಗಗಳನ್ನು ಹಿಂದಿ ಭಾಷಿಗರು ಕಿತ್ತುಕೊಳ್ಳುತ್ತಿದ್ದಾರೆ. ಹಿಂದಿಯೇತರ ಭಾಷಿಗರ ಸಾಂಸ್ಕೃತಿಕ ಅಸ್ಮಿತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಧೋರಣೆಯನ್ನು ನಾವು ಖಂಡಿಸುತ್ತೇವೆ ನಿರಂತರ ಹೋರಾಟವನ್ನೂ ನಡೆಸಲಾಗುತ್ತದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ