Breaking News
Home / ರಾಜಕೀಯ / ಇನ್ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್​​ಗಳ 16 ನಂಬರ್​​ಗಳನ್ನೂ ನೀವು ನೆನಪಿಡಬೇಕು.. ಯಾಕೆ ಗೊತ್ತಾ..?

ಇನ್ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್​​ಗಳ 16 ನಂಬರ್​​ಗಳನ್ನೂ ನೀವು ನೆನಪಿಡಬೇಕು.. ಯಾಕೆ ಗೊತ್ತಾ..?

Spread the love

ನವದೆಹಲಿ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​​ಗಳ 16 ಡಿಜಿಟ್ ನಂಬರ್​ಗಳನ್ನು ಅಮೆಜಾನ್, ಫ್ಲಿಪ್​ಕಾರ್ಟ್ ಮತ್ತು ನೆಟ್​ಫ್ಲಿಕ್ಸ್​ನಂಥ ಮರ್ಚಂಟ್​ಗಳು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆದ್ರೆ ಇನ್ನುಮುಂದೆ ಹೀಗಾಗದಿರಲೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದೊಂದು ಮಾರ್ಗಸೂಚಿ ಜಾರಿಗೆ ತರಲು ಮುಂದಾಗಿದೆ.

ಈ ಮಾರ್ಗಸೂಚಿಯ ಪ್ರಕಾರ ಗ್ರಾಹಕರು ಡೆಬಿಟ್, ಕ್ರೆಡಿಟ್ ಕಾರ್ಡ್​ಗಳ ಮೂಲಕ ಆನ್​ಲೈನ್ ಶಾಪಿಂಗ್ ಮಾಡುವುದಿದ್ರೆ ಅವರು ಕಾರ್ಡ್​ನ 16 ಡಿಜಿಟ್ ನಂಬರ್, ಎಕ್ಸ್​​ಪೈರಿ ಡೇಟ್ ಹಾಗೂ ಸಿವಿವಿ ನಂಬರ್​ಗಳನ್ನೂ ನೆನಪಿನಲ್ಲಿಟ್ಟುಕೊಂಡೇ ವ್ಯವಹರಿಸಬೇಕಾಗುತ್ತದೆ.

ಜನವರಿ 2022 ರಿಂದ ಈ ಹೊಸನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ. ಈ ಹಿಂದೆ ಆನ್​ಲೈನ್​ ಮೂಲಕ ವ್ಯವಹಾರ ಮಾಡಿದಾಗ ಒಮ್ಮೆ ನಂಬರ್ ಫೀಡ್ ಮಾಡಿದರೆ ಆಯಾ ಸಂಸ್ಥೆಗಳು ಆ ನಂಬರ್​ನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದವು. ಈ ಮೂಲಕ ಗ್ರಾಹಕರು ವ್ಯವಹಾರ ನಡೆಸಲು ಸುಲಭವಾಗುತ್ತಿತ್ತು. ಆದ್ರೆ ಈ ಮಾರ್ಗಸೂಚಿ ಜಾರಿಗೆ ಬಂದಮೇಲೆ ಗ್ರಾಹಕರು ಕಾರ್ಡ್ ನಂಬರ್​ನ್ನು ನೆನಪಿನಲ್ಲಿಟ್ಟುಕೊಂಡಿದ್ದು ಫೀಡ್ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಯುಪಿಐ ಮೂಲಕ ವ್ಯವಹರಿಸುವವರಿಗೆ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ಆರ್​ಬಿಐ ಹೇಳಿದೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ