Breaking News
Home / ರಾಜಕೀಯ / ದಕ್ಷಿಣದ ಕಚೇರಿಗಳು ಬರುವವೇ ಉತ್ತರದತ್ತ? ಅಭಿವೃದ್ಧಿ ಕನಸು ನನಸು ಮಾಡುವರೇ ಸಿಎಂ ಬೊಮ್ಮಾಯಿ?

ದಕ್ಷಿಣದ ಕಚೇರಿಗಳು ಬರುವವೇ ಉತ್ತರದತ್ತ? ಅಭಿವೃದ್ಧಿ ಕನಸು ನನಸು ಮಾಡುವರೇ ಸಿಎಂ ಬೊಮ್ಮಾಯಿ?

Spread the love

ಆಲಮಟ್ಟಿ: ರಾಜ್ಯದ ಸಮಗ್ರ ಅಭಿವೃದ್ಧಿಯ ಪಣ ತೊಟ್ಟು ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ದಕ್ಷಿಣ ಭಾಗದಲ್ಲಿಯೇ ಕೇಂದ್ರೀಕೃತ ಆಗಿರುವ ಕಚೇರಿಗಳನ್ನು ಉತ್ತರದಲ್ಲಿ ಸ್ಥಾಪಿಸಿ ಅಭಿವೃದ್ಧಿ ಕನಸು ನನಸು ಮಾಡುವರೆಂಬ ಆಸೆ ಚಿಗುರೊಡೆದಿದೆ.

ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ದಕ್ಷಿಣ ಭಾಗದಲ್ಲಿಯೇ ಕೇಂದ್ರೀಕೃತವಾಗಿರುವ ಕಚೇರಿಗಳಲ್ಲಿ ಕೆಲವು ಕಚೇರಿಗಳು ಉತ್ತರ ಕರ್ನಾಟಕ ಭಾಗದಲ್ಲಿ 2019ರ ಏ.1ರಿಂದ ಕಾರ್ಯಾರಂಭ ಮಾಡಲು ಅಧಿವೇಶನದಲ್ಲಿ ಘೋಷಿಸಿ 10-1-2019ರಂದು ಆದೇಶಿಸಿದ್ದರು. ಸಿಎಂ ಆಗಿದ್ದ ಕುಮಾರಸ್ವಾಮಿ ಬೆಂಗಳೂರಿನಲ್ಲಿರುವ ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೃಷ್ಣಾಭಾಗ್ಯ ಜಲನಿಗಮದ ಆಡಳಿತ ಕಚೇರಿಯನ್ನು ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ ದಾವಣಗೆರೆಗೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ವಿದ್ಯುತ್‌ ಮಗ್ಗಗಳ ಅಭಿವೃದ್ಧಿ ನಿಗಮ) ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿಗಳನ್ನು ಬೆಳಗಾವಿಗೆ,ನಗರಾಭಿವೃದ್ಧಿ ಇಲಾಖೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವಿಭಜಿಸಿ ಹುಬ್ಬಳ್ಳಿಗೆ, ಮೈಸೂರಿನಲ್ಲಿದ್ದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರಾ ಇಲಾಖೆಯನ್ನು ಹಂಪಿಗೆ, ಕಾನೂನು ಇಲಾಖೆಯ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿ ಧಾರವಾಡಕ್ಕೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಸ್ಪಂದನ)ಇಲಾಖೆಯ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಪೈಕಿ ಎರಡು ಮಾಹಿತಿ ಆಯುಕ್ತರ ಕಚೇರಿಗಳಲ್ಲಿ ಒಂದು ಪೀಠ ಕಲಬುಗಿ ಹಾಗೂ ಒಂದು ಪೀಠ ಬೆಳಗಾವಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ(ಜಾಗೃತ ವಿಭಾಗ) ಇಲಾಖೆಯ ಕರ್ನಾಟಕ ಲೋಕಾಯುಕ್ತದಲ್ಲಿರುವ ಎರಡು ಉಪ ಲೋಕಾಯುಕ್ತ ಕಚೇರಿಗಳ ಪೈಕಿ ಒಂದು ಉಪ ಲೋಕಾಯುಕ್ತ ಕಚೇರಿ ಧಾರವಾಡಕ್ಕೆ ಹೀಗೆ ಒಟ್ಟು 9 ಕಚೇರಿ ಸ್ಥಳಾಂತರಿಸಿ 2019ರ ಏ.1ರಂದು ಜಾರಿಗೆ ಬರುತ್ತದೆಂದು ತಿಳಿಸಿದ್ದರು.

ಆದರೂ ಕಚೇರಿಗಳು ಬಾರದೇ ಇರುವುದರಿಂದ ಮತ್ತೆ ನೂತನವಾಗಿ 23-9-2019ರಂದು ಸರ್ಕಾರದಿಂದ ಮತ್ತೂಮ್ಮೆ ಆದೇಶ ಹೊರಡಿಸಿ ಸ್ಥಳಾಂತರಗೊಳ್ಳದ ಕಚೇರಿಗಳು ಅಕ್ಟೋಬರ್‌ ಅಂತ್ಯದೊಳಗೆ ಸ್ಥಳಾಂತರಗೊಳ್ಳಬೇಕೆಂದು ಮತ್ತೆ ಆದೇಶ ನೀಡಲಾಗಿತ್ತು. ಇವುಗಳಲ್ಲಿ ಕೆಲ ಕಚೇರಿಗಳಿಗೆ ಮರು ಆದೇಶವಾಗಿದ್ದರೆ ಇನ್ನು ಕೆಲವು ಸ್ಥಳಾಂತರಗೊಂಡವು. ಆದರೆ ಕೆಬಿಜೆಎನ್ನೆಲ್‌ ವ್ಯವಸ್ಥಾಪಕರ ಕಚೇರಿ ಸಿಬ್ಬಂದಿ ಮಾತ್ರ ಕಚೇರಿಯನ್ನು ಹೆಸರಿನಲ್ಲಿ ಬದಲಾಯಿಸಿದರು ವಿನಃ ತಾವೇನೂ ಬದಲಾಗಲಿಲ್ಲ. ನೋಂದಾಯಿತ ಕಚೇರಿ ಆಲಮಟ್ಟಿ ಎಂದು ಬರೆದು ಅದರ ಕೆಳಭಾಗದಲ್ಲಿ ಸಂಪರ್ಕ ಕಚೇರಿ ಪಿಡಬ್ಲೂಡಿ ಕಚೇರಿ ಪೂರಕ ಕಟ್ಟಡ 3ನೇ ಮಹಡಿ, ಕೆ.ಆರ್‌. ವೃತ್ತ ಬೆಂಗಳೂರು ಎಂದು ನಮೂದಿಸಿದ್ದಾರೆ.

ಇನ್ನು ಕೃಷ್ಣಾಭಾಗ್ಯ ಜಲನಿಗಮ ನಿಯಮಿತ (ಕೆಬಿಜೆಎನ್ನೆಲ್‌ ) ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ) ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವನ್ನು 1994 ಆ.19ರಂದು ನಿಗಮಗಳ ಕಾಯ್ದೆ 1956ರನ್ವಯ ಆಲಮಟ್ಟಿಯಲ್ಲಿ ಆರಂಭಿಸಲಾಯಿತು. ನಿಗಮಕ್ಕೆ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿ ಕ್ಯಾಪ್ಟನ್‌ ಎಸ್‌. ರಾಜಾರಾವ್‌ 1994 ಸೆ.3ರಂದು ಅಧಿಕಾರ ಸ್ವೀಕರಿಸಿದರು. ನಂತರ 1995 ನ.8ರಂದು ಜೆ.ಎಂ. ರತ್ನಾನಾಯಕ ಇವರಿಬ್ಬರೂ ತಾಂತ್ರಿಕ ಇಲಾಖೆ ಅ ಧಿಕಾರಿಗಳಾಗಿ 3 ವರ್ಷಗಳ ಕಾಲ ಅಧಿ ಕಾರವನ್ನೂ ನಡೆಸಿದರು. ಭೂಸ್ವಾ ಧೀನ, ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ, ಕಾಲುವೆಗಳ ಜಾಲ ನಿರ್ಮಾಣ, ಜಲಾಶಯ ಕಟ್ಟಡ ನಿರ್ಮಾಣ ಹೀಗೆ ಎಲ್ಲ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಆಗಿನ ಸರ್ಕಾರ ತಾಂತ್ರಿಕ ವರ್ಗದಿಂದ ಆಡಳಿತಾತ್ಮಕ ಅಂದರೆ ಐಎಎಸ್‌ ಅಧಿಕಾರಿಯಾಗಿರುವ ಎಂ.ಬಿ.ಪ್ರಕಾಶ ಅವರನ್ನು 1997 ಮೇ 8ರಂದು ನೇಮಕಗೊಳಿಸಿತು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ