Breaking News

ಕಾಂಗ್ರೆಸ್‌ ಪ್ರಮುಖ ಮತ್ತು ಪ್ರಬಲ ಪ್ರತಿ ಪಕ್ಷವಾಗಿ ಬೆಳೆಯಬೇಕು : ನಿತಿನ್‌ ಗಡ್ಕರಿ

Spread the love

ನವ ದೆಹಲಿ : ಕಾಂಗ್ರೆಸ್‌ ಪ್ರಮುಖ ಮತ್ತು ಪ್ರಬಲ ಪ್ರತಿ ಪಕ್ಷವಾಗಿ ಬೆಳೆಯಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಒಂದು ಗಣರಾಜ್ಯ ಯಶಸ್ವಿಯಾಗಬೇಕೆಂದರೆ ಅದರಲ್ಲಿ ಆಡಳಿತ ಪಕ್ಷದ ಜತೆ ಪ್ರತಿಪಕ್ಷವೂ ಮುಖ್ಯ.

ಅವರೆಡೂ ಚಕ್ರವಿದ್ದರೆ ಮಾತ್ರ ಗಣರಾಜ್ಯ ಉತ್ತಮವಾಗಿ ಸಾಗುತ್ತದೆ ಎಂದು ಅವರು ಹೇಳಿದ್ದಾರೆ. ಅದೇ ಕಾರಣಕ್ಕೆ ಮೊದಲ ಪ್ರಧಾನಿ ನೆಹರೂ ಕೂಡ ಅಟಲ್‌ ಜಿಗೆ ಹೆಚ್ಚಿನ ಗೌರವ ಕೊಡುತ್ತಿದ್ದರು ಎಂದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಾನು ಹಲವು ವರ್ಷಗಳ ಕಾಲ ಪ್ರತಿಪಕ್ಷದಲ್ಲಿದ್ದೆ.

ಸದನಗಳಲ್ಲಿ ಎಲ್ಲ ಪಕ್ಷಗಳು ಗೌರವಯುತವಾಗಿ ಭಾಗವಹಿಸಬೇಕು. ಈಗ ಪ್ರತಿಪಕ್ಷ ಸ್ಥಾನದಲ್ಲಿರುವವರು ಮುಂದಿನ ದಿನಗಳಲ್ಲಿ ಆಡಳಿತಕ್ಕೆ ಬರಬಹುದು. ಅಧಿಕಾರ ಬದಲಾಗುತ್ತಿರುತ್ತದೆ. ಎಲ್ಲ ಸಮಯದಲ್ಲೂ ಸದನದ ಪ್ರತಿಷ್ಠೆ ಕಾಪಾಡುವುದು ಮುಖ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ