Breaking News
Home / ರಾಜಕೀಯ / ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಪಸ್ವರ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಪಸ್ವರ

Spread the love

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿ ನ ಕೋಡಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಈ ಹಿಂದೆ ಸ್ಥಳ ವೀಕ್ಷಣೆ ಮಾಡಿ ಬಳಿಕ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ.

ಮಂಡ್ಯ: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಸೈಂಟಿಫಿಕ್ ಆಗಿ ಹೆದ್ದಾರಿ ಕಾಮಗಾರಿ ಆಗ್ತಿಲ್ಲ. ಇದನ್ನು ಈ ಹಿಂದೆ ಸ್ಥಳ ವೀಕ್ಷಣೆ ಮಾಡಿದ ಬಳಿಕ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿ ನ ಕೋಡಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಈ ಹಿಂದೆ ಸ್ಥಳ ವೀಕ್ಷಣೆ ಮಾಡಿ ಬಳಿಕ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ.

ಆಕ್ಸಿಸ್ ರೋಡ್ ಇಲ್ಲಾ, ಎಕ್ಸಿಟ್ ರೀಡ್ ಕೊಟ್ಟಿಲ್ಲ, ಸರ್ವಿಸ್ ರೋಡ್ ಕೊಟ್ಟಿಲ್ಲ‌. ಇದರ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಭರವಸೆ ಕೊಟ್ಟುಕೊಂಡು ಬರುತ್ತಲೆ ಇದ್ದಾರೆ. ನಾನು ಇದರ ಬಗ್ಗೆ ಹೋರಾಟ ಮಾಡೋ ಭರವಸೆ ನೀಡಿದ್ದೀನಿ. ಇದರ ಬಗ್ಗೆ ಮಾತನಾಡಿದ್ರೆ ಅದನ್ನ ಬೇರೆ ರೀತಿ ಬಿಂಬಿಸಲಾಗತ್ತೆ. ಹೆದ್ದಾರಿ ಕಾಮಗಾರಿಗೆ ಸುಮಲತಾ ತಡೆ ಮಾಡ್ತಾರೆ ಅಂತ ಬಿಂಬಿಸಲಾಗತ್ತೆ ಎಂದು ಸುಮಲತಾ ತಮ್ಮಅಳಲು ತೋಡಿಕೊಂಡರು.

ಅಧಿಕಾರಿಗಳು ನಿರ್ಲಕ್ಷ್ಯ: ಶಾಲಾ ಕಟ್ಟಡ ನಿರ್ಮಿಸಿಕೊಡಿ -ಅಗರಲಿಂಗನದೊಡ್ಡಿ ಗ್ರಾಮಸ್ಥರ ಮನವಿ
ಇದಕ್ಕೂ ಮುನ್ನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ ಗ್ರಾಮಕ್ಕೆ ಸಂಸದೆ ಸುಮಲತಾ ಭೇಟಿ ಕೊಟ್ಟಿದ್ದರು. ಶಾಲಾ ಕಟ್ಟಡ ಕಟ್ಟಿಸಿಕೊಡುವಂತೆ ಗ್ರಾಮಸ್ಥರು ಈ ವೇಳೆ ಮನವಿ ಮಾಡಿದರು.

ಹೆದ್ದಾರಿ ನಿರ್ಮಾಣ ಹಿನ್ನೆಲೆ ಶಾಲಾ ಕಟ್ಟಡ ತೆರವು ಮಾಡಿದ್ದರು. ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಹಣ ಬಿಡುಗಡೆಯಾಗಿದೆ. ಶಾಲಾ ಕಟ್ಟಡ ನಿರ್ಮಾಣ ಮಾಡದೆ ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಶಾಲಾ ಕಟ್ಟಡ ಕಟ್ಟಿಸಿಕೊಡುವಂತೆ ಸಂಸದೆಗೆ ಗ್ರಾಮಸ್ಥರು ಮನವಿ ಮಾಡಿದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ