Breaking News
Home / ರಾಜಕೀಯ / ಬೊಮ್ಮಾಯಿ V/s ಶೆಟ್ಟರ್: ಸಿಕ್ಕಾಪಟ್ಟೆ ಸಸ್ಪೆನ್ಸ್! ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’

ಬೊಮ್ಮಾಯಿ V/s ಶೆಟ್ಟರ್: ಸಿಕ್ಕಾಪಟ್ಟೆ ಸಸ್ಪೆನ್ಸ್! ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’

Spread the love

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಎಂದು ಘೋಷಿಸಿದ ನಂತರ ನೀಡಿದ ಸಂದರ್ಶನದಲ್ಲಿ, ‘ನನಗಿಂತ ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದರು.

ತಮ್ಮನ್ನು ಡ್ರಾಪ್ ಮಾಡಬಹುದೆಂಬ ವಿಷಯ ಮೊದಲೇ ಗೊತ್ತಿತ್ತೋ ಅಥವಾ ಹುಬ್ಬಳ್ಳಿ ರಾಜಕೀಯದಲ್ಲಿ ಒಂದು ಲೆಕ್ಕದಲ್ಲಿ ಬೊಮ್ಮಾಯಿ ಅಗೋಚರ ಪರ್ಯಾಯ ಲಿಂಗಾಯತ ನಾಯಕರಾಗುವ ಆತಂಕವೋ ಗೊತ್ತಿಲ್ಲ. ಒಟ್ಟಿನಲ್ಲಿ ಶೆಟ್ಟರ್ ಮೊದಲೇ ಸಂಪುಟ ಸೇರಲಾರೆ ಎಂದರು.

ಈ ಹಿಂದೆ ಒಮ್ಮೆ ಸ್ಪೀಕರ್ ಸ್ಥಾನದಲ್ಲಿ, 4 ತಿಂಗಳು ಮುಖ್ಯಮಂತ್ರಿ ಸ್ಥಾನದಲ್ಲಿ ಪವಡಿಸಿದ್ದ ಶೆಟ್ಟರ್ ಯಡಿಯೂರಪ್ಪ ಸಂಪುಟದಲ್ಲಿ ಕೇವಲ ಸಚಿವರಾಗಿ (ಡಿಸಿಎಂ ಹುದ್ದೆಗೂ ಪರಿಗಣನೆ ಆಗಿರಲಿಲ್ಲ) ಕೆಲಸ ಮಾಡಿದ್ದು ಸೋಜಿಗದ ವಿಷಯ. ಅದಕ್ಕೆ ಅವರು, ‘ಯಡಿಯೂರಪ್ಪ ನಮ್ಮ ಸೀನಿಯರ್ ನಾಯಕ. ಹೀಗಾಗಿ ಅವರ ಅಡಿ ಕೆಲಸ ಮಾಡಲು ತೊಂದರೆ ಇರಲಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ.

ಈ ಬಸು ಬೊಮ್ಮಾಯಿ ಮತ್ತು ಶೆಟ್ಟರ್ ನಡುವೆ ಒಂದು ಅಲಿಖಿತ ಒಪ್ಪಂದವಾಗಿತ್ತು. ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ನಿಧನದ ನಂತರ ಬಸವರಾಜ ಬೊಮ್ಮಾಯಿ ಜೆಡಿಯು ಜೊತೆ ಗುರುತಿಸಿಕೊಂಡರು. ಅವರು ಮೊದಲ ಬಾರಿ ಚುನಾವಣಾ ರಾಜಕೀಯ ಎದುರಿಸಿದ್ದು ಹುಬ್ಬಳ್ಳಿಯ ಗ್ರಾಮೀಣ ಕ್ಷೇತ್ರದಲ್ಲಿ. ಆಗ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಅವರು ಶೆಟ್ಟರ್ ಎದುರು ಸೋತಿದ್ದರು. ನಂತರವಷ್ಟೇ ಜೆಡಿಯು ಸೇರಿದರು. ಮುಂದೆ 2007ರ ಚುನಾವಣೆ ಸಂದರ್ಭದಲ್ಲಿ ಬೊಮ್ಮಾಯಿ ಬಿಜೆಪಿ ಸೇರುವಾಗ ಶೆಟ್ಟರ್ ಮತ್ತು ಬೊಮ್ಮಾಯಿ ನಡುವೆ ಒಂದು ಅಲಿಖಿತ ಒಪ್ಪಂದವಾಗಿತ್ತು. ಬೊಮ್ಮಾಯಿ ಹುಬ್ಬಳ್ಳಿ ಧಾರವಾಡದ ವಿಷಯದಲ್ಲಿ ತಲೆ ತೂರಿಸಕೂಡದು ಎಂಬ ಲಕ್ಷ್ಮಣ ರೇಖೆ ಹಾಕಲಾಗಿತ್ತು. ಶಿಗ್ಗಾವಿ-ಸವಣೂರು ಎಂಬ ಅಪರಿಚಿತ ಕ್ಷೇತ್ರವನ್ನು ಬೊಮ್ಮಾಯಿ ಆಯ್ದುಕೊಂಡರು. ಅಲ್ಲಿ ಸೀನಿಯರ್ ಬೊಮ್ಮಾಯಿ ಮಾಡಿದ್ದ ಕೆಲಸಗಳು ಮತ್ತು ಸಂಘ ಪರಿವಾರ ಗುಟ್ಟಾಗಿ ಮಾಡಿದ್ದ ಸಾಮಾಜಿಕ ತಂತ್ರಗಾರಿಕೆ ಅವರಿಗೆ ನೆರವಾದವು. 2007ರಿಂದ ಗೆಲ್ಲುತ್ತಲೇ ಇದ್ದಾರೆ. ಆ ನಂತರ ಬೊಮ್ಮಾಯಿ ಮತ್ತು ಶೆಟ್ಟರ್ ತಮ್ಮ ವ್ಯಾಪ್ತಿ ದಾಟದೇ ವಿಶ್ವಾಸ ಉಳಿಸಿಕೊಂಡಿದ್ದರು. ಆದರೆ ಯಡಿಯೂರಪ್ಪ ಶೆಟ್ಟರ್ಗೆ ಪರ್ಯಾಯವಾಗಿ ಬೊಮ್ಮಾಯಿ ಅವರನ್ನು ಬೆಳೆಸಲು ಬೊಮ್ಮಾಯಿಗೆ ಗೃಹ ಖಾತೆ ನೀಡಿದರು.

ಗೃಹ ಸಚಿವರಾದ ನಂತರವೂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಕೂಡ ತುಂಬ ವಿರಳ. ಈಗ ಹೈಕಮಾಂಡ್ ಅಥವಾ ಸಂಘದ ನಿರ್ಧಾರದ ಕಾರಣಕ್ಕೆ ಸಿಎಂ ಆಗಿರುವ ಬೊಮ್ಮಾಯಿ ಗೆರೆ ದಾಟಿದ್ದಾರೆ. ಇದು ಶೆಟ್ಟರ್ ಅವರಿಗೆ ಹಿನ್ನಡೆಯೂ ಕೂಡ ಆಗಿದೆ.

ಲಿಂಗಾಯತರಲ್ಲಿ ಜಾತಿಪ್ರಜ್ಞೆ ಪ್ರಬಲವಾಗಿರುವಂತೆ ಉಪಜಾತಿಗಳ ನಡುವೆ ತಿಕ್ಕಾಟಡವೂ ಇದೆ. ಸಾದರ ಲಿಂಗಾಯತ ಬಣಕ್ಕೆ ಸೇರಿದ ಬೊಮ್ಮಾಯಿ, ಬಣಜಿಗ ಲಿಂಗಾಯತಕ್ಕೆ ಸೇರಿದ ಶೆಟ್ಟರ್ ಅವರ ಕಣ್ಣಿಗ ಕೆಳಜಾತಿಯವರು!

ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು, ಹೈಕಮಾಂಡಿಗೆ ಸೆಡ್ಡು ಹೊಡೆಯಲು ಆರಂಭಿಸಿದ್ದ ಲಿಂಗಾಯತ ಯಡಿಯೂರಪ್ಪನವರನ್ನು ತೆಗೆಯಲು ಮೊದಲೇ ಪ್ರಿಪ್ಲಾಮ್ ರೆಡಿಯಾಗಿತ್ತು. ಇದಕ್ಕಾಗಿ ಪಂಚಮಸಾಲಿ ಲಿಂಗಾಯತ ಶಾಕ ಬಸನಗೌಡ ಪಾಟೀಲ್ ಯತ್ನಾಳ್, ಬಣಜಿಗ ಲಿಂಗಾಯತ ಶಾಸಕ ಅರವಿಂದ ಬೆಲ್ಲದ ಮತ್ತು ಒಕ್ಕಲಿಗ ಶಾಸಕ ಯೋಗೇಶ್ವರ್ ಮೂಲಕ ಸಿಎಂ ವಿರುದ್ಧ ನಿರಂತರ ದಾಳಿ ನಡೆಸಲಾಗಿತು. ಅಂತಿಮದಲ್ಲಿ ಈ ಮೂವರನ್ನೂ ಟಿಶ್ಯೂ ಪೇಪರ್ ತರಹ ಬಿಸಾಕಲಾಯ್ತು.

ಶೆಟ್ಟರ್ ಮುಂದಿನ ನಡೆ?

ಜಗದೀಶ ಶೆಟ್ಟರ್ ಬಂಡಾಯ ಏಳುತ್ತಾರಾ? ಸಾಧ್ಯವೇ ಇಲ್ಲ. ಅವರ ಹಿಂದೆ ಒಬ್ಬ ಶಾಸಕರೂ ಇಲ್ಲ! ಻ವರೆಂದೂ ಮಾಸ್ ಲೀಡರ್ ಆಗಲೇ ಇಲ್ಲ. ಅವರು ಸಚಿವ ಸಂಒಉಟ ಸೇರಲಾರರು. ಆದರೆ ಸಿಎಂ ಜೊತೆ ರಾಜಿಯಾಗುವುದು ಖಚಿತ. ತಮ್ಮ ಸಹೋದರ ಎಂಎಲ್ಸಿ ಪ್ರದೀಪ್ ಶೆಟ್ಟರ್ಗೆ ಉನ್ನತ ಸ್ಥಾನ ಕೊಡಿಸಬಹುದು. ಈ ರಾಜಿ ಪ್ರೆಕ್ರಿಯೆಯಲ್ಲಿ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಮನೆಗೆ ಮೊಮ್ಮಗಳನ್ನು ಕೊಟ್ಟಿರುವ ಶಾಮನೂರು, ಇನ್ನೊಂದು ಕಡೆಯಿಂದ ಬೊಮ್ಮಾಯಿ ತಾಯಿಯ ಸಂಬಂಧಿಯೂ ಹೌದು. ಹೀಗಾಗಿ ಈಗಾಗಲೇ ರಾಜಿ ಪ್ರಕ್ರಿಯೆ ಶುರುವಾಗಿದೆ ಎನ್ನಲಾಗಿದೆ.

ಈ ಎಲ್ಲ ಗದ್ದಲದಲ್ಲಿ ಸಾಮಾಜಿಕ ನ್ಯಾಯ ಪರಿಪಾಲಿಸದೇ ಸಂಪುಟ ರಚನೆಯಾಗಿದೆ. ಬೊಮ್ಮಾಯಿ ಕೇಶವಕೃಪಾಕ್ಕೆ ಭೇಟಿ ನೀಡುವ ಮೂಲಕ ಸೂಚ್ಯವಾಗಿ ತಾನು ಸಂಘದ ಸೇವಕ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರು ಹೋಂ ಮಿನಿಸ್ಟರ್ ಆಗಿದ್ದಾಗ ಮಂಗಳೂರು ಗಲಭೆ ಸೇರಿದಂತೆ ಹಲವು ವಿವಾದಗಳ ಸಂದರ್ಭದಲ್ಲಿ ಗೃಹ ಇಲಾಖೆಯನ್ನೇ ಸಂಘಕ್ಕೆ ಒತ್ತೆ ಇಟ್ಟು ‘ಓಂ’ ಮಿನಿಸ್ಟರ್ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ಶೆಟ್ಟರ್ ಮತ್ತು ಬೊಮ್ಮಾಯಿ ಒಳಗೊಳಗೇ ರಾಜಿ ಆಗುತ್ತಾರೆ. ಇಲ್ಲಿ ಮುಂದೆ ಇನ್ನೊಬ್ಬ ಸಿಎಂ ತರಲಾಗುತ್ತದೆ. ಒಟ್ಟಿನಲ್ಲಿ ಒಬ್ಬನೂ ಮಾಸ್ ಲೀಡರ್ ಇಲ್ಲದಂತೆ ಮಾಡಲಾಗುತ್ತದೆ. ಬೊಮ್ಮಾಯಿ ಅವರಿಂದ ಉತ್ತಮ ಆಡಳಿತ ನಿರಿಕ್ಷಿಸುವ ಕಾಲ ಮುಗಿದಾಗಿದೆ. ಯಡಿಯೂರಪ್ಪರ ಪ್ರಭಾವದಿಂದಲೂ ಬೊಮ್ಮಾಯಿ ಅವರನ್ನು ಹೊರ ತರಲಾಗಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ