Home / ನವದೆಹಲಿ / Paytm ಆ್ಯಪ್​ವನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆಯಲಾಗಿದೆ.

Paytm ಆ್ಯಪ್​ವನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆಯಲಾಗಿದೆ.

Spread the love

ದೆಹಲಿ: ತಾನು ವಿಧಿಸಿದ್ದ ನಿಯಮಗಳನ್ನು ಪದೇ ಪದೆ ಉಲ್ಲಂಘಿಸುತ್ತಿದ್ದ ಹಿನ್ನೆಲೆಯಲ್ಲಿ Paytm ಆ್ಯಪ್​ವನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆಯಲಾಗಿದೆ. ಆದರೆ, ಉಳಿದ ಌಪ್​ಗಳಾದ Paytm ಫಾರ್​ ಬ್ಯುಸಿನೆಸ್​, Paytm ಮಾಲ್​ ಹಾಗೂ Paytm ಮನಿಗಳನ್ನು ಪ್ಲೇ ಸ್ಟೋರ್​ನಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ.

Paytmನ ಪ್ಲೇ ಸ್ಟೋರ್​ನಿಂದ ತೆಗೆಯಲು ಗೂಗಲ್​ ಸಂಸ್ಥೆಯು ಯಾವುದೇ ಅಧಿಕೃತ ಕಾರಣ ಅಥವಾ ಮಾಹಿತಿ ನೀಡಿಲ್ಲ. ಆದರೆ, ಕೆಲ ಮೂಲಗಳ ಪ್ರಕಾರ ಗೂಗಲ್​ ಸಂಸ್ಥೆಯ ಜೂಜು ವಿರೋಧಿ ನಿಯಮಾವಳಿಗಳನ್ನು Paytm ಉಲ್ಲಂಘಿಸಿರುವುದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಈ ಕುರಿತು Paytm ಌಪ್​ ಸಂಸ್ಥೆಯು ಪ್ರತಿಕ್ರಿಯಿಸಿದ್ದು ಈ ವಿಚಾರವನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಅದರ ಬಳಕೆದಾರರಿಗೆ ಆಶ್ವಾಸನೆ ನೀಡಿದೆ.ಆದರೆ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಫೊರ್ ಬ್ಯುಸಿನೆಸ್, ಪೇಟಿಎಂ ಫೊರ್ ಮನಿ ಹಾಗು ಪೇಟಿಎಂಗೆ ಸಂಬಂಧಿಸಿದ ಇತರ ಆ್ಯಪ್ ಗಳು ಈಗಲೂ ಲಭ್ಯವಿದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ