Breaking News
Home / new delhi / ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಪ್ರದೀಪ ರಜಪೂತಗೆ ಎಸ್ ಡಿ ಎಮ್ ಸಿ ವತಿಯಿಂದ ಸತ್ಕಾರ 

ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಪ್ರದೀಪ ರಜಪೂತಗೆ ಎಸ್ ಡಿ ಎಮ್ ಸಿ ವತಿಯಿಂದ ಸತ್ಕಾರ 

Spread the love

 

ಕೊಟಬಾಗಿ:ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ದಾಸರಟ್ಟಿ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಪ್ರತಿಭೆ ಯನ್ನು ಗುರುತಿಸಿ 2022-23 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕ ಪ್ರದೀಪ ರಜಪೂತ ರವರಿಗೆ ಶಾಲೆಯ ಎಸ್ ಡಿ ಎಮ್ ಸಿ ಸಿಬ್ಬಂದಿ ವರ್ಗದವರು,ಶಿಕ್ಷಕ ಬಳಗ, ಹಾಗೂ ಊರಿನ ಗ್ರಾಮಸ್ಥರು ಸತ್ಕಾರ ಸಮಾರಂಭ ಕಾರ್ಯಕ್ರಮ ಶಾಲೆಯಲ್ಲಿ ಆಯೋಜಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಶಿಕ್ಷಕರ ಸಂಘದ ಪದಾಧಿಕಾರಿ ಎಸ್ ಎಸ್ ಚಿಕ್ಕಮಠ ರವರು ಮಾತನಾಡಿ ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿರುತ್ತದೆ.ಒಂದು ಕಲ್ಲು ಸುಂದರವಾದ ಮೂರ್ತಿಯಾಗಿ ಮಾರ್ಪಾಡು ಮಾಡಲು ಅದರ ಹಿಂದೆ ಒಬ್ಬ ಅತ್ಯುತ್ತಮ ಶಿಲ್ಪಿ ಇದ್ದೆ ಇರುತ್ತಾರೆ ಅದರಂತೆಯೇ ಒಬ್ಬ ವಿದ್ಯಾರ್ಥಿನಿಯ ಸಾಧನೆಯ ಬೆನ್ನು ಹಿಂದೆ ಶಿಕ್ಷಕರು ಅಥವಾ ಗುರು ಎಂಬ ಶಿಲ್ಪಿ ಇದ್ದೆ ಇರುತ್ತಾರೆ. ವಿದ್ಯಾರ್ಥಿಗಳನ್ನು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವ ಶಿಲ್ಪಿ ಎಂದರೆ ತಪ್ಪಾಗಲಾರದು.ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರವು ಮಹತ್ವ ಪೂರ್ಣವಾದದ್ದು ಎಂದು ತಿಳಿ ಹೇಳಿದರು,ಅದಲ್ಲದೇ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರಾಗಿ ಆಯ್ಕೆ ಯಾಗಿ ತಾಲೂಕು ಶಿಕ್ಷಕರ ಸಂಘಕ್ಕೆ ಹಾಗೂ ಈ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂತೋಷ ವ್ಯಕ್ತ ಪಡಿಸಿದರು.

ಮಾತನಾಡಿದ ದೇವರಮನಿ ಗುರುಗಳು ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಉತ್ತಮ ಸಾಧಕರಾಗಿ ರೂಪಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುತ್ತಾರೆ ವಿದ್ಯಾರ್ಥಿಗಳನ್ನು ದೇಶದ ಒಳ್ಳೆಯ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದು ಹೇಳಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಆಯ್ಕೆಯಾದ ಶಿಕ್ಷಕನಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಉದ್ದಪ್ಪ ಕುಬುಸಗಾರ, ಗಟಿಗೆಪ್ಪಣ್ಣ ಪೋಕಳಿ,ರಾಜು ಕಬ್ಬಣ,ಎಸ್ ಡಿ ಎಮ್ ಸಿ ಸರ್ವ ಸದಸ್ಯರು, ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು,ಮಕ್ಕಳ ಪಾಲಕರು, ಊರಿನ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ!

Spread the loveನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ