Breaking News
Home / new delhi / ಹಬ್ಬದ ಸಂಭ್ರಮದ ಮಧ್ಯೆ ಊರಿನ ಹೊರಭಾಗದಲ್ಲಿ ಪತ್ತೆಯಾದ ಬ್ಯಾಗ್​ ತೆರೆದ ಗ್ರಾಮಸ್ಥರಿಗೆ ಶಾಕ್​!​

ಹಬ್ಬದ ಸಂಭ್ರಮದ ಮಧ್ಯೆ ಊರಿನ ಹೊರಭಾಗದಲ್ಲಿ ಪತ್ತೆಯಾದ ಬ್ಯಾಗ್​ ತೆರೆದ ಗ್ರಾಮಸ್ಥರಿಗೆ ಶಾಕ್​!​

Spread the love

ಕಲಬುರಗಿ: ಮಹಾಮಾರಿ ಕರೊನಾ ವೈರಸ್​ ಭೀತಿಯ ನಡುವೆಯೂ ರಾಜ್ಯದೆಲ್ಲಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿರುವ ಸಮಯದಲ್ಲೇ ಕಲಬುರಗಿಯಲ್ಲಿ ನಡೆದಿರುವ ಅಮಾನವೀಯ ಘಟನೆಯೊಂದು ಕೋವಿಡ್​ಗಿಂತಲೂ ಕ್ರೂರಿ ಎಂಬುದನ್ನು ನಿರೂಪಿಸಿದೆ.

ಬಹುತೇಕರು ನಮಗೆ ಮಕ್ಕಳಾಗಿಲ್ಲವಲ್ಲ ಎಂದು ದಿನನಿತ್ಯ ಕೊರಗುತ್ತಿರುತ್ತಾರೆ. ಗಂಡಾಗಲಿ ಅಥವಾ ಹೆಣ್ಣಾಗಲಿ ನಮಗೊಂದು ಮಗು ಕರುಣಿಸಪ್ಪಾ ಎಂದು ದೇವರಲ್ಲಿ ಪ್ರಾರ್ಥಿಕೊಳ್ಳುವವರಿಗೇನು ಕಡಿಮೆಯಿಲ್ಲ. ಆದರೆ, ಇವೆಲ್ಲದರ ನಡುವೆ ಮಗು ಜನಿಸಿದರು ಅದು ಬೇಡವೆಂದು ರಸ್ತೆಯಲ್ಲಿ ಅನಾಥವಾಗಿ ಎಸೆದು ಹೋಗುವವರನ್ನು ಎಷ್ಟು ಬೈದರು ಕಡಿಮೆಯೇ.

ಮನೆಮಾಲೀಕನಿಲ್ಲದ ವೇಳೆ ಅವರ ಪತ್ನಿ ಮೇಲೆ ಅತ್ಯಾಚಾರವೆಸಗಿದ!

ಹೌದು, ಇಂಥದ್ದೇ ಘಟನೆ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ.

ಹಬ್ಬದ ಸಡಗರದಲ್ಲಿದ್ದ ಜನರಿಗೆ ನವಜಾತ ಹೆಣ್ಣು ಶಿಶುವೊಂದು ಅನಾಥವಾಗಿ ಸಿಕ್ಕಿದೆ. ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಬಳಿ ಬ್ಯಾಗ್​ ಒಂದರಲ್ಲಿ ಯಾರೋ ಕೆಟ್ಟ ಮನಸ್ಸಿನ ವ್ಯಕ್ತಿಗಳು ಕಂದಮ್ಮನನ್ನು ಎಸೆದು ಹೋಗಿದ್ದರು.

ಇತ್ತ ಬ್ಯಾಗ್​ನಿಂದ ಅಳುವ ಶಬ್ದ ಕೇಳಿದ ರಟಕಲ್ ಗ್ರಾಮದ ನಿವಾಸಿಗಳು ಬ್ಯಾಗ್​ ತೆಗೆದುಕೊಂಡು ಬಂದು ತೆರೆದು ನೋಡಿದಾಗ ಒಮ್ಮೆ ಶಾಕ್​ ಆಗಿದ್ದಾರೆ. ತಕ್ಷಣ ಮಗುವನ್ನು ರಟಕಲ್ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಶಿಶುವನ್ನು ದಾಖಲಿಸಿದ್ದಾರೆ. ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಗು ಬಿಟ್ಟು ಹೋಗಿರುವವರಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.


Spread the love

About Laxminews 24x7

Check Also

ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಲ್ಲ ಎಂದ ಸಿಎಂ

Spread the loveಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಸರ್ಕಾರ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ