Breaking News
Home / Uncategorized / ಕಲಘಟಗಿ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರಲ್ಲಿ ಮರಗಳಿಗೆ ಕೊಡಲಿ ಪೆಟ್ಟು :ಪರಿಸರ ಪ್ರೇಮಿಗಳ ವಿರೋಧ 

ಕಲಘಟಗಿ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರಲ್ಲಿ ಮರಗಳಿಗೆ ಕೊಡಲಿ ಪೆಟ್ಟು :ಪರಿಸರ ಪ್ರೇಮಿಗಳ ವಿರೋಧ 

Spread the love

 

 

ಕಲಘಟಗಿ:ತಾಲೂಕ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರನಲ್ಲಿ ಅನೇಕ ಮರಗಳ ಮಾರಣಹೋಮ ನಡೆದಿದೆ ವಿಷಯ ತಿಳಿದ ಪರಿಸರ ಪ್ರೇಮಿಗಳು ಮತ್ತು ಪಟ್ಟಣದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಿದ್ದಾರೆ

ಪಟ್ಟಣದ ಸರ್ಕಾರಿ ನೌಕರ ಭವನದ ಆವರಣದಲ್ಲಿರುವ 30 ರಿಂದ 50 ವರ್ಷದಿಂದ ಹೆಮ್ಮರವಾಗಿ ಬೆಳೆದು ಉತ್ತಮ ಗಾಳಿ, ಪರಿಸರ ನೀಡುವ ಮರಗಳಿಗೆ ಕೊಡಲಿ ಪೆಟ್ಟು ಹಾಕಿ ಕಡಿಯಲು ಹೊರಟಿರುವದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ

ತಾಲ್ಲೂಕ ನೌಕರರ ಸಾಂಸ್ಕೃತಿಕ ಭವನ ಕಟ್ಟಡ ಅವಶ್ಯಕತೆ ಇದ್ದು ನಿರ್ಮಾಣ ಮಾಡಲು ಮರಗಳು ಅಡಚಣೆ ಆಗಿವೆ ಆದ್ದರಿಂದ ಮರಗಳನ್ನು ಕಡಿಯಲು ಹೇಳಿದ್ದೇವೆ ಎಂದು ತಾಲ್ಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್ ಎಮ್ ಹೋಲ್ತಿಕೋಟಿ ಪತ್ರಿಕೆಗೆ ತಿಳಿಸಿದ್ದಾರೆ

 

ಅವು ‘ರೆನ್ ಟ್ರೈ’ ಮರಗಳು ಆಗಿದ್ದು ಅವುಗಳಿಗೆ ಯಾವುದೇ ಪರವಾನಗಿ ಅರಣ್ಯ ಇಲಾಖೆ ನೀಡುವುದಿಲ್ಲ ಸಾರ್ವಜಕರು ಮರ ಕಡಿಯಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದರೆ ಮಾತ್ರ ನಾವು ಪರಿಶೀಲನೆ ಮಾಡುತ್ತೇವೆ ಎಂದು ತಾಲ್ಲೂಕ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಹೇಳುತ್ತಿದ್ದಾರೆ

ಆದರೆ ಇನ್ನೊಂದು ಕಡೆ ಉಪವಲಯ ಅರಣ್ಯಧಿಕಾರಿ ತುಮ್ಮರಿಕೊಪ್ಪ ಇವರು ‘ರೆನ್ ಟ್ರೇ’ ಮರ ಕಡಿದು ನಾಟ್ ಹುಬ್ಬಳ್ಳಿಯವರೆಗೆ ಸಾಗಿಸಲು ಪರವಾನಗಿ ನೀಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ “ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಇಟ್ಟುಕೊಂಡು ಪರಿಸರ ನಾಶ ಮಾಡುವದು ಸರಿಯಾದ ಕ್ರಮವಲ್ಲ ಯಾವುದೇ ಮರ ವಾದರೂ ಅದನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಕಟ್ಚಡ ಕಟ್ಟುವ ನೆಪದಲ್ಲಿ ಇದೆ ರೀತಿ ಮರಗಳು ಮಾರಣಹೋಮ ಮಾಡಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವದು ಎಂದು ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದರು.

 

ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮದವರು ಹೋದಾಗ ಮರ ಕಡಿಯುವುದು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ ತಾಲೂಕ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

 

ವರದಿ ಬಸವರಾಜ ಜಮಖಂಡಿ


Spread the love

About Laxminews 24x7

Check Also

ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿ

Spread the loveಬೆಂಗಳೂರು : ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ