Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಸಮಾನತೆಯ ಸಮಾಜ ನಿರ್ಮಾಣ ನಮ್ಮ ಗುರಿಯಾಗಲಿ: ಸತೀಶ್ ಜಾರಕಿಹೊಳಿ

ಸಮಾನತೆಯ ಸಮಾಜ ನಿರ್ಮಾಣ ನಮ್ಮ ಗುರಿಯಾಗಲಿ: ಸತೀಶ್ ಜಾರಕಿಹೊಳಿ

Spread the love

ಗೋಕಾಕ: ಬುದ್ಧ, ಬಸವ, ಅಂಬೇಡ್ಕರ್ ರವರು ಕಂಡಿದ್ದ ಸಮಾನತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ, ಒಗಟ್ಟು ನಮಗೆ ತುಂಬ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಮರಾಠ ಸಮಾಜ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನ್ಯಾಯಕ್ಕೆ ಒಳಗಾಗಿರುವ ಜನರನ್ನು ನ್ಯಾಯ ನೀಡುವ, ಶೋಷಣೆಗೆ ಒಳಗಾಗಿರುವ ಜನರನ್ನು ಮುಕ್ತಗೊಳಿಸಿ ಅವರನ್ನು ಸ್ವತಂತ್ರ ನೀಡುವ, ಸಮಾನತೆಯಿಂದಲೇ ಮಾನವೀಯತೆಯಂದು ಹೋರಾಡಿದ ಅಂಬೇಡ್ಕರ್, ಬುದ್ಧ, ಬಸವ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗಬೇಕಿದೆ.

ಮಾನವ ಬಂಧುತ್ವ ವೇದಿಕೆಯು ನನ್ನ ನೇತ್ರತ್ವದಲ್ಲಿ ಕಳೆದ ಆರೇಳು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ನಂಬಿಕೆ ಮತ್ತು ಮೂಢನಂಬಿಕೆ ಎರಡು ಬೇರೆ ಬೇರೆ ವಿಚಾರಗಳು ನಾವು ನಂಬಿಕೆಯ ವಿರುದ್ಧವಿಲ್ಲ ನಾವು ಮೂಢನಂಬಿಕೆಯ ವಿರುದ್ಧ ಇದ್ದೇವೆ.
ದೇಶದಲ್ಲಿ ಮೂಢನಂಬಿಕೆಯು ಅಸಮಾನತೆ, ಜಾತಿ, ಮೇಲು ಕೀಳು, ಕೋಮು ಗಲಭೆ ಸೇರಿದಂತೆ ಇತರ ಅಪಾರ ಅನಾಚಾರಗಳಿಗೆ ಸಾಕ್ಷಿಯಾಗಿದೆ.

ಸಮಾನತೆ,‌ ಶೋಷಣೆ, ಜಾತಿ ವ್ಯವಸ್ಥೆ ತೋಲಗಬೇಕೆಂದರೆ ಮೂಢನಂಬಿಕೆಯನ್ನು ಬೇರು ಸಮೇತ ಕಿತ್ತೊಗೆಯಬೇಕು ಇದಕ್ಕೆ ನೀವು ನಮ್ಮ ಜೊತೆ ಬೆನ್ನೆಲುಬು ಆಗಿ ನಮಗೆ ಸಹಕಾರ ನೀಡಬೇಕು ಎಂದು ಅವರು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ಮನವಿ ಮಾಡಿದರು.

ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ವಿಚಾರಗಳನ್ನು ದಾರಿ ತಪ್ಪಿಸುವ ಕೆಲಸ‌ ನಡೆಯುತ್ತಿದೆ‌. ಅವರನ್ನು ಟೀಕಿಸುವ ಹಾಗೂ ಅವರನ್ನು ಅಪಮಾನಿಸುವ ಕಾರ್ಯ ನಡೆಯುತ್ತಿದೆ.
ಇವುಗಳನ್ನು ನಾವೆಲ್ಲಾ ಸೇರಿ ತಡೆಯಬೇಕು ಅಂಬೇಡ್ಕರ್ ಅವರ ಕನಸನ್ನು ನೆನಸು ಮಾಡಬೇಕು ಎಂದು ಅವರು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಯುವ ಮಖಂಡ ರಾಹುಲ್ ಜಾರಕಿಹೊಳಿ, ಮಾನವ ಬಂಧುತ್ವ ವೇಧಿಕೆಯ ಜಿಲ್ಲಾ ಅಧ್ಯಕ್ಷ ಜೀವನ್ ಮಾಂಜ್ರೆಕರ್, ಬಿ..ಎಸ್.ನಾಡಕರ್ಣಿ, ಗೋಕಾಕ ನಗರಸಭೆ ಸದಸ್ಯೆ ಹಾಗೂ ಮರಾಠ ಸಮಾಜದ ಮುಖಂಡೆ ಜೋತಿಬಾ ಸುಬಂಜಿ, ಚರಂತ್ವೇಶರ ಮಠದ ಶರಣ ಬಸವ ದೇವರು ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭ ಉದ್ಘಾಟನೆಗೂ ಮೊದಲು ಅನಿಲ್ ಕಾಂಬಳೆ ಹಾಗೂ ಕಲಾ ತಂಡದಿಂದ ಕ್ರಾಂತಿಗೀತೆ ಹಾಡಲಾಯಿತು.

ರಾಮಕೃಷ್ಣ ಪಾನಬುಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ