Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಜನಪದ ಕಲಾವಿದರು ತಮ್ಮ ಕಲೆಯ ಬಗೆಗೆ ಸ್ವಾಭಿಮಾನಿಗಳಾಗಿದ್ದು,

ಜನಪದ ಕಲಾವಿದರು ತಮ್ಮ ಕಲೆಯ ಬಗೆಗೆ ಸ್ವಾಭಿಮಾನಿಗಳಾಗಿದ್ದು,

Spread the love

ಗೋಕಾಕ: ಜನಪದ ಕಲಾವಿದರು ತಮ್ಮ ಕಲೆಯ ಬಗೆಗೆ ಸ್ವಾಭಿಮಾನಿಗಳಾಗಿದ್ದು, ಆತ್ಮಗೌರವವುಳ್ಳವರಾಗಿರಬೇಕೆಂದು ಜಾನಪದತಜ್ಞ, ಕರ್ನಾಟಕ ಜಾನಪದ ಪರಿಷತ್ತಿನ, ಬೆಳಗಾವಿ ಜಿಲ್ಲಾಧ್ಯಕ್ಷ ಡಾ| ಸಿ.ಕೆ.ನಾವಲಗಿ ಅಭಿಪ್ರಾಯಿಸಿದರು.
ಅವರು ನಗರದ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತೆ, ಬಯಲಾಟ ಹಿರಿಯ ಕಲಾವಿದೆ ಕೆಂಪವ್ವ ಹರಿಜನ ಇವರನ್ನು ಕಜಾಪದ ಪರವಾಗಿ ಸನ್ಮಾನಿಸಿ, ಮಾತನಾಡಿದ ಅವರು, ಕಲಾವಿದರಿಂದಲೇ ಕಲೆಗಳ ಉಳಿವು-ಬೆಳವಣಿಗೆ, ಸರಕಾರ-ಸಾರ್ವಜನಿಕರು ಕಲಾವಿದರನ್ನು ಪೋಷಿಸಬೇಕಾದ ಅಗತ್ಯವಿದೆಯೆಂದು ಮಾತನಾಡಿದರು.
ಕಲಾವಿದರ ಬದುಕು ಕುರಿತು ಪ್ರಾ. ಜಯಾನಂದ ಮಾದರ, ಲಕ್ಷ್ಮಣ ಚೌರಿ, ಮಲ್ಲಿಕಾರ್ಜುನ ಈಟಿ ಅತಿಥಿಗಳಾಗಿ ಮಾತನಾಡಿದರು.
ಕೆಂಪವ್ವ ಹರಿಜನ ರಂಗಗೀತೆ ಹಾಡಿದರು. ಕಲಾವತಿ ಚೌಗಲಾ ಹಾಗೂ ಸಂಗಡಿಗರು ಸಾಂಪ್ರದಾಯಿಕ ಗೀತೆಗಳನ್ನು ಹಾಡಿದರು.
ವಿನೂತ ನಾವಲಗಿ, ವಿದ್ಯಾರಡ್ಡಿ, ಲಕ್ಷ್ಮಣ ಸೊಂಟಕ್ಕಿ, ಕಾಡೇಶಕುಮಾರ, ಶಿವಲಿಂಗಪ್ಪ ಬಾಗೇವಾಡಿ, ರತ್ನವ್ವ ಹರಿಜನ, ಕೆಂಪಣ್ಣ ಅಂಬಿ ಹಾಗು ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಜಾಪದ ಪ್ರಧಾನ ಕಾರ್ಯದರ್ಶಿ, ಕಲಾವಿದ ಈಶ್ವರಚಂದ್ರ ಬೆಟಗೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆನಂದ ಸೋರಗಾವಿ ವಂದಿಸಿದರು.
ಫೋಟೋ 17 ಜಿಕೆಕೆ-1
ಗೋಕಾಕ: ಕೆಂಪವ್ವ ಹರಿಜನರಿಗೆ ಅವರಿಗೆ ರಾಜ್ಯೊತ್ಸವ ಪ್ರಶಸ್ತಿ ಪ್ರಯುಕ್ತ ಸನ್ಮಾನ: ಕಜಾಪದ ಜಿಲ್ಲಾಧ್ಯಕ್ಷ ಡಾ| ಸಿ.ಕೆ.ನಾವಲಗಿ ಅವರಿಂದ: ಈಶ್ವರಚಂದ್ರ ಬೆಟಗೇರಿ, ಮಲ್ಲಿಕಾರ್ಜುನ ಈಟಿ, ವಿನೂತ ನಾವಲಗಿ, ಲಕ್ಷ್ಮಣ ಚೌರಿ ಮತ್ತು ಜಯಾನಂದ ಮಾದರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ