ಗದಗ: ಕೊರೊನಾ ವೈರಸ್ ತಡೆಗೆ ಲಾಕ್‍ಡೌನ್ ಮಧ್ಯೆಯೂ ಅಕ್ಷತ್ತದಗಿ ಅಮವಾಸ್ಯೆ ನೆಪದಲ್ಲಿ ಜನರು ಮನೆಬಿಟ್ಟು ಮಾರ್ಕೆಟ್‍ಗೆ ಲಗ್ಗೆ ಇಟ್ಟಿದ್ದಾರೆ.
ಈ ಹಿನ್ನೆಲೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಜನರನ್ನು ಗುಂಪು ಸೇರುವುದನ್ನು ತಡೆಯುವುದೇ ಪೊಲೀಸರಿಗೆ ತಲೆನೋವಾಗಿದೆ. ನಗರದ ಗ್ರೇನ್ ಮಾರ್ಕೆಟ್ ಹಾಗೂ ಲಕ್ಷ್ಮೇಶ್ವರ ಪಟ್ಟಣದ ಮಾರ್ಕೆಟ್‍ನಲ್ಲಿ ಜನಸ್ತೋಮ ನಿರ್ಮಾಣವಾಗಿದೆ. ಜಿಲ್ಲೆನಲ್ಲಿ ಲಾಕ್‍ಡೌನ್ ನಿಯಮ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಕೊರೊನಾ ಮಧ್ಯೆಯೂ ಅಕ್ಷತ್ತದಗಿ ಅಮವಾಸ್ಯೆ ಮಾಡಲು ಜನರು ಹೂವು, ಹಣ್ಣು, ದಿನಸಿ, ಬಟ್ಟೆ ಖರೀದಿಸಲು ನಾ ಮುಂದೆ ತಾ ಮುಂದೆ ಅಂತ ಮುಗಿಬಿದ್ದಿದ್ದಾರೆ.
ಅಷ್ಟೇ ಅಲ್ಲದೇ ಸಾಮಾಜಿಕ ಅಂತರವನ್ನೇ ಮರೆತು ಬಿಟ್ಟಿದ್ದಾರೆ. ಕೆಲವು ಬಟ್ಟೆ ಅಂಗಡಿಗಳ ಮಾಲೀಕರು ರಾಜಾರೋಷವಾಗಿ ಅಂಗಡಿ ಓಪನ್ ಮಾಡಿಕೊಂಡು ವ್ಯಾಪಾರ ಮಾಡ್ತಿದ್ದಾರೆ. ಗದಗ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಧಿಕಾರಿಗಳು ಜನರ ನಿಯಂತ್ರಿಸಲು ಸಾಕಷ್ಟು ಹರಸಾಹಸ ಪಡ್ತಿದ್ದಾರೆ. ಎಷ್ಟೇ ತಿಳುವಳಿಕೆ ಹೇಳಿದರೂ ಜನರು ಮಾತ್ರ ಕೊರೊನಾ ಜಾಗೃತಿಗೆ ಕ್ಯಾರೇ ಅಂತಿಲ್ಲ.