Breaking News

ರ್‌ಎಕ್ಸ್ ಬೈಕ್ ಅನ್ನು ಕೊಡಿಸಲಿಲ್ಲವೆಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ

Spread the love

ದಾವಣಗೆರೆ: ತಾನು ಕೇಳಿದ ಆರ್‌ಎಕ್ಸ್ ಬೈಕ್ ಅನ್ನು ಕೊಡಿಸಲಿಲ್ಲವೆಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೆಟಿಜೆ ನಗರ ವ್ಯಾಪ್ತಿಯ ಅಂಬಿಕಾ ನಗರದಲ್ಲಿ ನಡೆದಿದೆ.

ಅಂಬಿಕಾ ನಗರದ ಬಿ ಬ್ಲಾಕ್‍ನ ನಿವಾಸಿ ಮಂಜುನಾಥ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ. ಮೃತ ವಿದ್ಯಾರ್ಥಿ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಪೇಗೆ ದೇವೇಂದ್ರಪ್ಪ ಅವರ ಮಗ ಎನ್ನಲಾಗಿದೆ.

ಮಂಜುನಾಥ್‍ಗೆ ಆಗಲೇ ರಾಯಲ್ ಎನ್‍ಫೀಲ್ಡ್ ಬೈಕ್ ಕೊಡಿಸಲಾಗಿತ್ತಾದರೂ ಸಹ ತನಗೆ ಆರ್‌ಎಕ್ಸ್-100 ಬೈಕ್ ಕೊಡಿಸುವಂತೆ ಕೇಳಿದ್ದ. ಮಗನ ಹಠದಿಂದಾಗಿ ತಂದೆಯೂ ಸಹ ಒಂದು ವಾರದಲ್ಲಿ ಬೈಕ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೂ ಮಂಜುನಾಥ್ ಬೇಸರಗೊಂಡು ಸೋಮವಾರ ರಾತ್ರಿ ಊಟ ಸಹ ಮಾಡದೇ ಮೊದಲ ಮಹಡಿಗೆ ಹೋಗಿದ್ದ.

ಮಗ ಮಲಗಲು ಮೊದಲ ಮಹಡಿಗೆ ಹೋಗಿದ್ದಾನೆ ಎಂದು ಪೋಷಕರು ತಿಳಿಸಿದ್ದರು. ಆದರೆ ಮಂಜುನಾತ್ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಗಿಲು ತೆಗೆದಾಗ ಮಂಜುನಾಥ್ ಮೃತಪಟ್ಟಿರುವುದು ಪೋಷಕರಿಗೆ ತಿಳಿದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

About Laxminews 24x7

Check Also

ಪಿ ಲಂಕೇಶ್ ಮೊಮ್ಮಗ, ಚಿತ್ರರಂಗಕ್ಕೆ

Spread the loveSamarjit Lankesh: ಪಿ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ