ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಿಕೆ ಶಿವಕುಮಾರ್ ತರ ಕೆಳಹಂತದ ರಾಜಕಾರಣ ಮಾಡಿ ನನಗೆ ಅಭ್ಯಾಸ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಡಿಕೆಶಿಗೆ ತಿರುಗೇಟು ನೀಡಿದ್ದಾರೆ
ಅಂದಹಾಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಾಧ್ಯಮಗಳಿಗೆ ಈ ಸಂಬಂಧ ಪ್ರತಿಕ್ರಿಯಿಸಿದ ಸುಧಾಕರ್, ಡಿಕೆ ಶಿವಕುಮಾರ್ ಅವರ ಬೇರೆ ಸದ್ಗುಣಗಳು ನನಗೆ ಗೊತ್ತಿತ್ತು. ಈ ರೀತಿಯ ದೊಡ್ಡ ಗುಣ ಸಹ ಇದೇ ಎಂದು ಈಗ ಗೊತ್ತಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಆಸಲಿಗೆ ಕೊರೊನಾ ತುರ್ತು ಸಂದರ್ಭದಲ್ಲಿ ಸಚಿವ ಸುಧಾಕರ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಕುಟುಂಬಸ್ಥರ ಜೊತೆ ಈಜಾಡುತ್ತಿದ್ದ ಫೋಟೋವನ್ನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಟೀಕೆ ಮಾಡಿದ್ದರು. ಕೊರೊನಾ ತುರ್ತು ಸಂದರ್ಭದಲ್ಲಿ ಜವಾಬ್ದಾರಿ ಮರೆತ ಸಚಿವ ಸುಧಾಕರ್ ಎಂಜಾಯ್ ಮಾಡ್ತಿದ್ದಾರೆ ಅಂತ ದೂರಿದ್ದರು. ತದನಂತರ ಸುಧಾಕರ್ ಆ ಫೋಟೋವನ್ನು ಡಿಲೀಟ್ ಮಾಡಿದ್ದರು.
ಈ ಬಗ್ಗೆ ನೆಲಮಂಗಲದಲ್ಲಿ ಮಾತನಾಡಿದ್ದ ಡಿಕೆಶಿ, ಗಾಳಿ ಮತ್ತು ನೀರಿನಿಂದ ಕೊರೊನಾ ಬೇಗ ಹಬ್ಬುತ್ತಿದೆ ಎಂಬುದು ನನಗೆ ಶಾಕಿಂಗ್ ನ್ಯೂಸ್ ಆಗಿದೆ. ಒಬ್ಬ ಮೆಡಿಕಲ್ ಮಿನಿಸ್ಟರ್ ಗೆ ಬೆಂಗಳೂರು ಜವಾಬ್ದಾರಿ ಕೊಟ್ಟಿದ್ದಾರೆ. ಇಂತವರ ನಡತೆ ಬಹಳ ಮುಖ್ಯ. ಇದು ಅವರ ನೈತಿಕವಾದ ವಿಚಾರ. ಹೀಗಾಗಿ ಇಂದೇ ರಾಜೀನಾಮೆಯನ್ನು ಅವರು ತಮ್ಮ ಸ್ವ-ಇಚ್ಚೆಯಿಂದ ಕೊಡಬೇಕಾಗುತ್ತೆ ಎಂದು ಹೇಳಿದ್ದರು.
Laxmi News 24×7