Breaking News

ಭುಜಕ್ಕೆ ಹಗ್ಗಕಟ್ಟಿಕೊಂಡು ಹೊಲ ಸಮ ಮಾಡ್ತಿದ್ದಾರೆ ಕುಸ್ತಿಪಟು ಸಾಕ್ಷಿ………..

Spread the love

ನವದೆಹಲಿ: ನಾನು ನನ್ನ ಪದಕದ ಬಣ್ಣವನ್ನು ಬದಲಿಸಬೇಕು ಎಂದು ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಹೇಳಿದ್ದಾರೆ.

ಸಾಕ್ಷಿ ಅವರು ಭಾರತದ ಪ್ರತಿಭಾನ್ವಿತ ಕುಸ್ತಿಪುಟು, ಅವರು ದೇಶಕ್ಕಾಗಿ ಮೂರು ಪದಕಗಳನ್ನು ಗೆದ್ದು ತಂದಿದ್ದಾರೆ. ಆದರೆ ಮೂರು ಪದಕದಲ್ಲಿ ಒಂದು ಬಾರಿ ಸಿಲ್ವರ್ ಮತ್ತು ಎರಡು ಬಾರಿ ಕಂಚಿನ ಪದಕ ಗೆದ್ದಿದ್ದೇನೆ ಎಂಬ ನೋವು ಅವರಿಗಿದೆ. ಹೀಗಾಗಿ ಮುಂದೆ ನಡೆಯುವ ಟೋಕಿಯೊ ಒಲಿಪಿಂಕ್ಸ್ ನಲ್ಲಿ ನಾನು ನನ್ನ ಪದಕದ ಬಣ್ಣವನ್ನು ಬದಲಿಸಿ ಚಿನ್ನದ ಪದಕ ಗೆಲ್ಲಬೇಕು ಎಂದು ಸಾಕ್ಷಿ ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಸಾಕ್ಷಿ, 2018ರಲ್ಲಿ ನಾನು ಉತ್ತಮವಾಗಿ ಆಡಿದ್ದೆ. ಪದಕವನ್ನು ಗೆಲ್ಲಲು ನಾನು ಕಠಿಣ ತರಬೇತಿ ಪಡೆದಿದ್ದೆ. ನಾನು ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಲ್ಲಿ ಹತ್ತಿರದಲ್ಲಿದ್ದೆ ಆದರೆ ಕೆಲವು ಸೆಕೆಂಡುಗಳಿಂದ ಸೋತಿದ್ದೇನೆ. ಆದರೆ ಈಗ ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ. ಅಂದು ನನ್ನ ಫುಟ್‍ವರ್ಕ್ ತಪ್ಪಾಗಿತ್ತು. ಈಗ ನಾನು ಫುಟ್‍ವರ್ಕ್ ಮೇಲೆ ಗಮನವರಿಸಿದ್ದೇನೆ. ಮುಂದಿನ ಒಲಿಪಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

ನಾನು ಕೊರೊನಾ ಲಾಕ್‍ಡೌನ್ ನಡುವೆ ಮನೆಯಿಂದ ಹೊರಗೆ ಹೋಗಿಲ್ಲ. ಅಭ್ಯಾಸ ಮಾಡಲು ಜಿಮ್‍ಗೆ ಹೋಗುವುದು ಯಾಕೋ ಸುರಕ್ಷಿತವಲ್ಲ ಎನಿಸಿತು. ಹೀಗಾಗಿ ನಾನು ಮನೆಯಲ್ಲೇ ಸಾಂಪ್ರಾದಾಯಿಕ ವ್ಯಾಯಾಮ ಮಾಡುತ್ತಿದ್ದೇನೆ. ಭುಜಕ್ಕೆ ಹಗ್ಗಕಟ್ಟಿಕೊಂಡು ನಮ್ಮ ಹೊಲವನ್ನು ಸಮ ಮಾಡುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ದೇಹ ಉರಿಗೊಳ್ಳುತ್ತಿದೆ. ಕೊರೊನಾ ಮುಗಿದ ಬಳಿಕ ಜಿಮ್‍ಗೆ ಹೋಗಿ ಮತ್ತಷ್ಟು ಅಭ್ಯಾಸ ಮಾಡುತ್ತೇನೆ ಎಂದು ಸಾಕ್ಷಿ ಮಲಿಕ್ ತಿಳಿಸಿದ್ದಾರೆ.

ಇದೇ ವೇಳೆ ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಮಾತನಾಡಿರುವ ಸಾಕ್ಷಿ, ಒಲಪಿಂಕ್ಸ್ ಎಂಬುದು ಒಬ್ಬ ಕ್ರೀಡಾಪಟುವಿನ ಜೀವನದಲ್ಲಿ ಬಹಳ ಮುಖ್ಯ. ಈಗ ಟೋಕಿಯೊ ಒಲಂಪಿಕ್ಸ್ ಕೊರೊನಾ ಲಾಕ್‍ಡೌನ್‍ನಿಂದ ಮುಂದಕ್ಕೆ ಹೋದ ಕಾರಣ ನಮಗೆ ಅಭ್ಯಾಸ ಮಾಡಲು ಸಾಕಷ್ಟು ಸಮಯ ಲಭಿಸಿದೆ. ಈ ಸಮಯವನ್ನು ಸದುಪಯೋಗ ಮಾಡಿಕೊಂಡು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಕ್ಷಿ ಮಲಿಕ್ ಅವರು, 2016ರಲ್ಲಿ ನಡೆದ ಸಮ್ಮರ್ ಒಲಪಿಂಕ್ಸ್ ನಲ್ಲಿ 58 ಕೆಜಿ ಮಹಿಳಾ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಕುಸ್ತಿ ವಿಭಾಗದಲ್ಲಿ ಒಲಪಿಂಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆಯಾಗಿದ್ದರು. ಇದಕ್ಕೂ ಮುನ್ನ ಅವರು ಗ್ಲ್ಯಾಸ್ಗೋದಲ್ಲಿ ನಡೆದ 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮತ್ತು 2015 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.


Spread the love

About Laxminews 24x7

Check Also

ಭಗವದ್ಗೀತೆ ಜಿಲ್ಲಾಮಟ್ಟದ ಸ್ಫರ್ಧೆಗಳು ಸಂಪನ್ನ…

Spread the loveಬೆಳಗಾವಿ : ಭಗವದ್ಗೀತೆ ಅಭಿಯಾನದ ಜಿಲ್ಲಾ ಮಟ್ಟದ ಸ್ಫರ್ಧೆಗಳು ಮಂಗಳವಾರ ಆನಗೋಳದ ಸಂತಮೀರಾ ಶಾಲೆಯ ಸಭಾಂಗಣದಲ್ಲಿ ನಡೆಯಿತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ