ಚಿತ್ರದುರ್ಗ: ರಾಜ್ಯದ ವಿವಿಧೆಡೆ ಪೊಲೀಸರಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆಯಲ್ಲಿ ಚಿತ್ರದುರ್ಗ ಪೊಲೀಸರಿಗೆ ಕೊರೊನಾ ಸೊಂಕು ಹರಡದಂತೆ ಎಸ್‍ಪಿ ರಾಧಿಕಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಎಸ್‍ಪಿಯವರ ಕಾಳಜಿಗೆ ಚಿತ್ರದುರ್ಗದ ಪೊಲೀಸರು ಫಿದಾ ಆಗಿದ್ದಾರೆ.
ಹೌದು. ಪೊಲೀಸರ ಆರೋಗ್ಯ ರಕ್ಷಣೆಗಾಗಿ ತೀವ್ರ ಕಾಳಜಿ ವಹಿಸಿರುವ ಲೇಡಿ ಸಿಂಗಂ, ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಸ್ವತಃ ಎಸ್‍ಪಿಯವರೇ ಕೀಟನಾಶಕ ಸಿಂಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಪೊಲೀಸ್ ಠಾಣೆಗಳ ಆವರಣ ಹಾಗೂ ಕ್ವಾಟ್ರಸ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಕೊರೊನಾ ಹರಡದಂತೆ ಜಾಗೃತರಾಗಿರುವಂತೆ ಕರೆ ನೀಡಿದರು. ಹಾಗೆಯೇ ಪೊಲೀಸ್ ಕ್ವಾಟ್ರಸ್ ಮತ್ತು ಠಾಣೆಗಳಿಗೆ ಯಾರೂ ಅಪರಿಚಿತರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿರುವ ಎಸ್‍ಪಿ ರಾಧಿಕಾ ಅವರು ಪೊಲೀಸರ ಮಕ್ಕಳು ಹಾಗೂ ಕುಟುಂಬಸ್ಥರ ಮೇಲೆ ತೀವ್ರ ಕಾಳಜಿ ವಹಿಸಿರುವುದಕ್ಕೆ ಚಿತ್ರದುರ್ಗ ಪೊಲೀಸರು ಫುಲ್ ಫಿದಾ ಆಗಿದ್ದಾರೆ.