Breaking News

ಕೊರೋನಾ ಸೋಂಕು‌ ಹರಡುವುದನ್ನು‌ ತಡೆಯುವ‌ ವಿಚಾರದಲ್ಲಿ‌ ಇನ್ನಷ್ಟು ಎಚ್ಚರಿಕೆ ಅಗತ್ಯ:H.D.D.

Spread the love

ಬೆಂಗಳೂರು, ಏ.6-ಕೊರೋನಾ ಸೋಂಕು‌ ಹರಡುವುದನ್ನು‌ ತಡೆಯುವ‌ ವಿಚಾರದಲ್ಲಿ‌ ಇನ್ನಷ್ಟು ಎಚ್ಚರಿಕೆ ಅಗತ್ಯ ಎಂದು‌ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ‌ ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಮೆಡಿಕಲ್ ಕಿಟ್, ಔಷಧಿ ತರಿಸಿದ್ದಾರೆ.

ಕೊರೊನಾ ಶಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ‌. ಮೂರನೇ ಹಂತ, ನಾಲ್ಕನೇ‌ ಹಂತ ಎನ್ನುತ್ತಿದ್ದಾರೆ. ಕಡಿಮೆಯಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಎಂದರು.ಕೋವಿಡ್ -19 ಸುಮಾರು ಇನ್ನೂರು ದೇಶಗಳಲ್ಲಿ ಇದೆ. ಅತ್ಯಂತ ಕೆಟ್ಟ ವೈರಸ್ 60ಸಾವಿರಕ್ಕೂ ಹೆಚ್ಚು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ನಿಖರ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ

ಕೆಲವು ಕಡೆ ಸಂಬಂಧಿಸಿದ ಕಿಟ್‌, ವೆಂಟಿಲೇಟರ್‌ಗಳ ಕೊರತೆ‌ ಇದೆ. ಬಸ್‌ಗಳಲ್ಲಿ ವಾರ್ಡ್ ಮಾಡಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೇರಳದಲ್ಲಿ ಒಂದೇ ಸಾವು ಬಿಟ್ಟರೆ ಹೆಚ್ಚು ಅನಾಹುತ ಆಗಿಲ್ಲ. ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.

ಅರಬ್ ರಾಷ್ಟ್ರಗಳಿಂದ‌ ಬರುವ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಬೇಕು. ನಾನು ಸಮಸ್ಯೆಗಳನ್ನು ಕಂಡು ಹಿಡಿದು ದೂಷಿಸಲ್ಲ, ಆದರೆ ವಾಸ್ತವ ಹೇಳುತ್ತೇನೆ. ಪ್ರಧಾನಿ ಮಾತಿಗೆ ನಾವೆಲ್ಲ ಗೌರವ ಕೊಟ್ಟಿದ್ದೇವೆ. ಚಪ್ಪಾಳೆ ಹೊಡೆದು, ದೀಪ ಹಚ್ಚಲು ನಾವೆಲ್ಲ ಒಪ್ಪಿಗೆ ಕೊಟ್ಟಿದ್ದೇವೆ. ನಾನು ಲಾಕ್‌ಡೌನ್ ಬಳಿಕ ಇವತ್ತೇ ಕಚೇರಿಗೆ ಬಂದಿದ್ದೇನೆ.

ಪಕ್ಷದ ಕಾರ್ಯಕರ್ತರು ಬರ್ತಾರೆ, ಅದಕ್ಕಾಗಿ ಕಚೇರಿ ಮುಚ್ಚಲಾಗಿತ್ತು. ನಿನ್ನೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಜಗಜೀವನ್ ರಾಮ್ ದಿನಾಚರಣೆ ಮಾಡಿದ್ದರು. ನಾವು ಇವತ್ತು ಕಚೇರಿಯಲ್ಲಿ ಆಚರಿಸುತ್ತಿದ್ದೇವೆ. ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವುದರಿಂದ ಹೆಮ್ಮಾರಿಯನ್ನು‌ ಹೊರಗೆ ಕಳಿಸಲು ಸಾಧ್ಯ ಎಂದು ಟಿವಿಗಳಲ್ಲಿ‌ ಹೇಳುತ್ತಿದ್ದರು.

ಯಾವುದೋ ಹಿನ್ನೆಲೆ, ನಂಬಿಕೆ ಇರಬಹುದು. ಇಡೀ ರಾಷ್ಟ್ರದ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮಾತಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ನನಗೆ ನಿನ್ನೆ ಮಧ್ಯಾಹ್ನ ಪ್ರಧಾನಿ ಮೋದಿ ಫೋನ್ ಮಾಡಿದ್ರು. ನಿಮ್ಮ ಸಹಕಾರ ಬೇಕು ಎಂದು ಮೋದಿ‌ ಕೇಳಿದರು. ನಾನು ಬೆಂಬಲಿಸುತ್ತೇನೆ ಎಂದಿದ್ದೆ, ಬೆಂಬಲಿಸಿದ್ದೇನೆ.

ನಿಮ್ಮ ಪಕ್ಷದ ಹುಟ್ಟುಹಬ್ಬದ ಹಿನ್ನೆಲೆ‌ ಕರೆ ನೀಡಿದ್ದಾರೆ. ಹೀಗೆಂದು ಖುದ್ದು ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆ.ಡಿ.ಕುಮಾರಸ್ವಾಮಿ ಕೂಡ ಅದನ್ನೇ ಹೇಳಿದ್ದಾರೆ. ಕುಮಾರಸ್ವಾಮಿ ಹೇಳಿದಂತೆಯೇ ಇವತ್ತು ನಡೆದೇಬಿಟ್ಟಿದೆಯಲ್ಲ. ಪಾಕಿಸ್ತಾನ ಯುದ್ಧ ಸಮಯದಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಇಡೀ ದೇಶಕ್ಕೆ ಕರೆ ನೀಡಿದ್ದರು. ಇದು ಅದಕ್ಕಿಂತಲೂ ಘೋರಯುದ್ಧ ಎಂಬಂತಿದೆ.ಆದರೆ ಈಗ ಮಾತ್ರ ತಮ್ಮ ಕಾರ್ಯಕರ್ತರಿಗೆ ಮಾತ್ರ ಕರೆ ಕೊಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಕ್ಕೂ ನನಗೂ ಸಂಬಂಧವಿಲ್ಲ. ಆದರೆ ಪ್ರಧಾನಿ ಹೇಳಿರುವುದು ಬೇಸರ ಮೂಡಿಸಿದೆ. ದೆಹಲಿ ನಮಾಜಿನಲ್ಲಿ‌ ಅನೇಕರು ಭಾಗವಹಿಸಿದ್ದರು. ಹೀಗಾಗಿ ಕೊರೊನಾ‌ ಹರಡಲು ಕಾರಣವಾಯ್ತು ಎನ್ನುತ್ತಿದ್ದಾರೆ. ದೆಹಲಿಗೆ ನಮಾಜ್ ಕಾರಣ ಎಂದರೆ ಮಹಾರಾಷ್ಟ್ರಕ್ಕೆ‌ ಏನು ಕಾರಣ? ಎಂದು ಪ್ರಶ್ನಿಸಿದರು.

ಅಮೆರಿಕಾದ ಅಧಯಕ್ಷ ಟ್ರಂಪ್ ಕೂಡ ಇನ್ನೆರಡು ವಾರಗಳಲ್ಲಿ ದುಪ್ಪಟ್ಟಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಒಂದು ಸಮುದಾಯವನ್ನು ಗುರಿಯಾಗಿಸುವುದು ಬೇಡ. ನಾವು ಪ್ರಧಾನಿ ಹೇಳಿದ್ದೆಲ್ಲ ಕೇಳಿದ್ದೇವೆ. ಆದರೆ ಇವತ್ತು ಬಿಜೆಪಿ‌ ಅಧ್ಯಕ್ಷರು ಅವರ ಕಾರ್ಯಕರ್ತರಿಗೆ ಒಪ್ಪತ್ತಿನ ಉಪವಾಸದ ಕರೆ ನೀಡಿದ್ದಾರೆ. ಪ್ರಧಾನಿ ಮೋದಿ‌ ಕೂಡ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಹಿಂದೆ ಲಾಲ್‌ಬಹದ್ದೂರ್ ಶಾಸ್ತ್ರಿ ಇಡೀ ದೇಶಕ್ಕೆ ಕರೆ ನೀಡಿದ್ದರು. ನೀವು ಕೂಡ ಇಡೀ ದೇಶಕ್ಕೆ ಕರೆ ನೀಡಬಹುದಿತ್ತು. ಇಲ್ಲಿಯವರೆಗೆ ಪ್ರಧಾನಿ ನಡೆದುಕೊಂಡಿದ್ದಕ್ಕೆ, ಇವತ್ತು ನಡೆದುಕೊಂಡಿದ್ದು ಎರಡು ಮುಖವಾಗಿ ಕಾಣಿಸ್ತಿದೆ. ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಕರೆ ನೀಡಿದ್ದಾರೆ ಎಂದು ಗೌಡರು ತಿಳಿಸಿದರು.


Spread the love

About Laxminews 24x7

Check Also

ವರ್ಗಾವಣೆ ಕೋರಿ ಆಯುಕ್ತರ ಕಚೇರಿಗೆ ಬರಬೇಡಿ : ಬಿ.ದಯಾನಂದ ಖಡಕ್‌ ಎಚ್ಚರಿಕೆ

Spread the love ಬೆಂಗಳೂರು,ಅ.4- ವರ್ಗಾವಣೆ ಕೋರಿ ನೇರವಾಗಿ ಆಯುಕ್ತರ ಕಚೇರಿಗೆ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ