Breaking News
Home / ಜಿಲ್ಲೆ / 16 ಹೊಸ ಪ್ರಕರಣ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆ

16 ಹೊಸ ಪ್ರಕರಣ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆ

Spread the love

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 16 ಪ್ರಕರಣಗಳು ಬೆಳಕಿಗೆ ಬಂದಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಇಂದು ಒಂದೇ ದಿನಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ 5 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದಾರೆ. ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಟ್ಟು 16 ಮಂದಿ ಕೊರೊನಾಗೆ ತುತ್ತಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಸೊಂಕಿತರ ಸಂಖ್ಯೆ 28ಕ್ಕೆ ಏರಿದೆ.

ದೆಹಲಿಯಲ್ಲಿ ಭಾಗವಹಿಸಿದ್ದವರ ತಪಾಸಣೆ ಮಾಡಲಾಗಿದ್ದು, 214 ಮಂದಿಯ ವರದಿ ಬಂದಿದೆ. ಇದರಲ್ಲಿ 16 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನುಳಿದ 198 ಪ್ರಕರಣ ನೆಗೆಟಿವ್ ಬಂದಿದೆ. 10 ಮಂದಿ ಇಂಡೋನೇಷ್ಯಾ ಹಾಗೂ 9 ಮಂದಿ ಕರ್ಗೀಸ್ತಾನ್‍ನಿಂದ ಜಮಾತ್ ಧಾರ್ಮಿಕ ಸಂಘಟನೆಯಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಬಂದಿದ್ದರು. ಈ 19 ಮಂದಿಯ ವರದಿ ನೆಗೆಟಿವ್ ಇದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ರೋಗಿ 129 – 21 ವರ್ಷದ ಬೆಂಗಳೂರಿನ ವ್ಯಕ್ತಿಯಾಗಿದ್ದು ರೋಗಿ 58ರ ಮನೆ ಕೆಲಸದವರು.

ರೋಗಿ 130 – 57 ವರ್ಷದ ವ್ಯಕ್ತಿ ಬೆಂಗಳೂರಿನವರಾಗಿದ್ದು, ರೋಗಿ 58ರ ತಂದೆಯಾಗಿದ್ದಾರೆ.

ರೋಗಿ 131 – 43 ವರ್ಷದ ವ್ಯಕ್ತಿ ಬೆಂಗಳೂರಿನ ವ್ಯಕ್ತಿಯಾಗಿದ್ದು, ರೋಗಿ 101ರ ಮಗನಾಗಿದ್ದಾನೆ

ರೋಗಿ 132 – 78 ವರ್ಷದ ಬೆಂಗಳೂರು ನಗರದ ನಿವಾಸಿ ದುಬೈಯಿಂದ ಮಾರ್ಚ್ 17 ರಂದು ಮರಳಿದ್ದರು.

ರೋಗಿ 133 – 60 ವರ್ಷ ಕೇರಳದ ಕೊಚ್ಚಿನ್ ಮೂಲದ ವ್ಯಕ್ತಿ ಜರ್ಮನಿ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ.

ರೋಗಿ 134 – 38 ವರ್ಷದ ಮೈಸೂರಿನ ವ್ಯಕ್ತಿ ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ರೋಗಿ 135 – 19 ವರ್ಷ ಮೈಸೂರಿನ ವ್ಯಕ್ತಿ ದೆಹಲಿಗೆ ತೆರಳಿದ್ದರು.

ರೋಗಿ 136 – 39 ವರ್ಷದ ಮೈಸೂರಿನ ವ್ಯಕ್ತಿ ದೆಹಲಿ ಪ್ರಯಾಣ ಮಾಡಿದ್ದಾರೆ.

ರೋಗಿ 137 – 39 ವರ್ಷದ ಮೈಸೂರಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.

ರೋಗಿ 138 – 54 ವರ್ಷದ ಮೈಸೂರಿನ ವ್ಯಕ್ತಿ ದೆಹಲಿಗೆ ಪ್ರಯಾಣ ಮಾಡಿದ್ದಾರೆ.

ರೋಗಿ 139 – 40 ವರ್ಷದ ಮೈಸೂರಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.

ರೋಗಿ 140 – 34 ವರ್ಷದ ಮೈಸೂರಿನ ವ್ಯಕ್ತಿ ರೋಗಿ 109ರ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಬಂದಿದೆ.

ರೋಗಿ 141 – 47 ವರ್ಷದ ಮಹಿಳೆ ಬಳ್ಳಾರಿಯವರಾಗಿದ್ದು ತನಿಖೆ ನಡೆಯುತ್ತಿದೆ.

ರೋಗಿ 142 – 63 ವರ್ಷದ ಉಡುಪಿಯ ಮಹಿಳೆ ದುಬೈಯಿಂದ ಮಾರ್ಚ್ 22 ರಂದು ಮರಳಿದ್ದರು.

ರೋಗಿ 143 – 43 ವರ್ಷದ ದಕ್ಷಿಣ ಕನ್ನಡದ ವ್ಯಕ್ತಿ ದೆಹಲಿಯಲ್ಲಿ ನಡೆದ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರೋಗಿ 144 – 52 ವರ್ಷದ ದಕ್ಷಿಣ ಕನ್ನಡದ ವ್ಯಕ್ತಿ ದೆಹಲಿಯಲ್ಲಿ ನಡೆದ ಜಮಾತ್ ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಲ್ಲೆಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರದಲ್ಲಿ 55, ಮೈಸೂರಿನಲ್ಲಿ 28, ದಕ್ಷಿಣ ಕನ್ನಡದಲ್ಲಿ 12, ಉತ್ತರ ಕನ್ನಡದಲ್ಲಿ 8, ಚಿಕ್ಕಬಳ್ಳಾಪುರದಲ್ಲಿ 7, ಕಲಬುರಗಿಯಲ್ಲಿ 5, ಬಳ್ಳಾರಿಯಲ್ಲಿ 5, ದಾವಣಗೆರೆಯಲ್ಲಿ 3, ಉಡುಪಿಯಲ್ಲಿ 3, ಧಾರವಾಡದಲ್ಲಿ 1, ಕೊಡಗಿನಲ್ಲಿ 1, ತುಮಕೂರಿನಲ್ಲಿ 1, ಬೀದರ್ ನಲ್ಲಿ 10, ಬಾಗಲಕೋಟೆಯಲ್ಲಿ 1, ಬೆಳಗಾವಿಯಲ್ಲಿ 3, ಬೆಂಗಳೂರು ಗ್ರಾಮೀಣದಲ್ಲಿ 1 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ.

ಬೆಂಗಳೂರು ನಗರದಲ್ಲಿ 55 ಮಂದಿ ಸೋಂಕಿತರಲ್ಲಿ 9 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಇತ್ತ ಕಲಬುಗಿಯಲ್ಲಿ ಐವರಲ್ಲಿ ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ತುಮಕೂರಿನಲ್ಲಿ ಒಬ್ಬರು, ಬಾಗಲಕೋಟೆಯಲ್ಲಿ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

ಆರೋಗ್ಯ ಸಹಾಯವಾಣಿ:
104 ಆರೋಗ್ಯ ಸಹಾಯವಾಣಿ (ಶುಲ್ಕರಹಿತ ಕಾಲ್ ಸೆಂಟರ್) ಕೋವಿಡ್-19 ಕುರಿತ ಕರೆಗಳಿಗಾಗಿ 210 ಆಸನಗಳನ್ನು ಮೀಸಲಿರಿಸಿದೆ. ದಿನಾಂಕ 03.04.2020ರಂದು 15,061ಕರೆಗಳನ್ನು ಸ್ವೀಕರಿಸಲಾಗಿದೆ ಮತ್ತು 20 ಅಗತ್ಯ ಮಾರ್ಗದರ್ಶನದ ನೀಡುವ ಕರೆಗಳನ್ನು ಸೇರಿ ಒಟ್ಟು 13,927ಹೊರ ಕರೆಗಳನ್ನು ಮಾಡಲಾಗಿದೆ.

ಸಾರ್ವಜನಿಕರಲ್ಲಿ ಮನವಿ:
ಕೋವಿಡ್-19 ಪೀಡಿತ ದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳುವುದು ಅಥವಾ 104 ಸಹಾಯವಾಣಿಗೆ ಕರೆ ಮಾಡಿ. ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ, ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬೇಡಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.


Spread the love

About Laxminews 24x7

Check Also

ಸುವರ್ಣಸೌಧದ ಹಾಲ್‌ನಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಮನವಿ

Spread the loveಬೆಳಗಾವಿ: ಸಾವರ್ಕರ್ ಫೋಟೋ ತೆರವಿನ ಕೂಗಿನ‌ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ