Breaking News
Home / ಜಿಲ್ಲೆ / ಕೊರೊನಾ ಸೋಂಕು ಯಾವುದೇ ಜಾತಿ, ಧರ್ಮ ನೋಡಿ ಬರಲ್ಲ. ಒಂದು ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ : ಸಿ.ಎಂ.ಇಬ್ರಾಹಿಂ

ಕೊರೊನಾ ಸೋಂಕು ಯಾವುದೇ ಜಾತಿ, ಧರ್ಮ ನೋಡಿ ಬರಲ್ಲ. ಒಂದು ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ : ಸಿ.ಎಂ.ಇಬ್ರಾಹಿಂ

Spread the love

ಬೆಂಗಳೂರು: ಕೊರೊನಾ ಸೋಂಕು ಯಾವುದೇ ಜಾತಿ, ಧರ್ಮ ನೋಡಿ ಬರಲ್ಲ. ಒಂದು ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ ಎಂದು ವಿಧಾ‌ನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಮಾಹಾಮಾರಿ ಕೊರೊನಾ ಕಂಟಕವಾಗಿದೆ. ಲಾಕ್​ಡೌನ್ ಆದೇಶವನ್ನು ನಾವೆಲ್ಲರೂ ಅನುಸರಿಸುತ್ತಿದ್ದೇವೆ. ನಾವ್ಯಾರು ಮಸೀದಿ ಕಡೆ ತಲೆ ಹಾಕುತ್ತಿಲ್ಲ. ಮನೆಗಳಲ್ಲೇ ನಮಾಜ್ ಮಾಡ್ತಿದ್ದೇವೆ. ಮುಂಬರುವ ರಂಜಾನ್ ಹಬ್ಬವನ್ನೂ ನಾವು ಮನೆಯಲ್ಲೇ ಮಾಡಿಕೊಳ್ತೇವೆ. ಇದನ್ನ ಸಿಎಂ ಸಭೆಯಲ್ಲೂ ತಿಳಿಸಿದ್ದೇವೆ. ಆದರೆ ಇವತ್ತು ಒಂದೇ ಜಾತಿಯ ಬಗ್ಗೆ ವರದಿಗಳು ಬರ್ತಿವೆ ಅಂತ ಬೇಸರ ವ್ಯಕ್ತಪಡಿಸಿದರು.

ಕೊರೊನಾ ಯಾವ ಜಾತಿ-ಧರ್ಮ ನೋಡಿ ಬರ್ತಿಲ್ಲ. ಇಂಗ್ಲೆಂಡ್ ಪ್ರಧಾನಿಗೂ ಸಾಕಷ್ಟು ನೋವು ನೀಡ್ತಿದೆ. ಅಮೆರಿಕಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿಗೊಳಗಾಗಿದ್ದಾರೆ. ಎಲ್ಲಿಯೂ ಜಾತಿ ಧರ್ಮ ಅಂತ ಬೊಟ್ಟು ಮಾಡಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಒಂದೇ ಸಮುದಾಯದವರತ್ತ ಬೊಟ್ಟು ಮಾಡಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನ ಹರಡಲಾಗ್ತಿದೆ. ಇಂತಹ ಸುದ್ದಿಗಳಿಗೆ ಬ್ರೇಕ್​ ಹಾಕುವಂತೆ ಸರ್ಕಾರಕ್ಕೆ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ