ಚಿಕ್ಕೋಡಿ : ಚಿಕ್ಕೋಡಿ ಉಪವಿಭಾಗದಲ್ಲಿ ಗುರುವಾರ ಮಳೆ ಅಲ್ಪ ಕಡಿಮೆ ಇದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಅರ್ಬಟ್ ಮುಂದುವರೆದಿದೆ. ಆದ್ದರಿಂದ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಮಳೆ ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಲ್ಲೋಳ-ಯಡೂರ ಸೇತುವೆ ಮೇಲೆ ನೀರು ಬಂದು ಗುರುವಾರ ಸಂಪರ್ಕ ಕಡಿತಗೊಂಡಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಯಾವುದೇ ಜಲಾಶಯದಿಂದ ರಾಜ್ಯಕ್ಕೆ ಹರಿಬಿಡಲಾಗುತ್ತಿಲ್ಲ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ ಮೇಲೆ ನೀರು ಬಂದು ಸಂಪರ್ಕ ತುಂಡರಿಸಿಕೊಂಡಿದೆ.
ಸೇತುವೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಆದರು ಕೆಲಸ ದ್ವಿಚಕ್ರವಾಹನ ಸವಾರರು ಮತ್ತು ಕಾರು, ಜೀಪ ಚಾಲಕರು ನದಿ ದಾಟಲು ರಹಸಾಹಸ ಮಾಡುತ್ತಿದ್ದಾರೆ. ಆದರೆ ನದಿ ತೀರದಲ್ಲಿ ಕಂದಾಯ ಇಲಾಖೆಯವರಾಗಲಿ ಅಥವಾ ಪೊಲೀಸ ಇಲಾಖೆಯವರು ಯಾರೂ ಇಲ್ಲ.
ಆದ್ದರಿಂದ ಕೂಡಲೇ ಕೃಷ್ಣಾ ತೀರದಲ್ಲಿ ಅದೂ ಕಲ್ಲೋಳ-ಯಡೂರ ಸೇತುವೆ ಬಳಿ ಕಂದಾಯ ಇಲಾಖೆಯವರು ಮತ್ತು ಪೊಲೀಸ ಇಲಾಖೆಯವರು ದಾವಿಸುವ ಮೂಲಕ ನೀರಿನಲ್ಲಿ ನದಿ ದಾಡಲು ಪ್ರಯತ್ನಿಸುವುಕ್ಕೆ ಕಡಿವಾಣ ಹಾಕುವ ಮೂಲಕ ಆಗುವ ಅನಾಹುತ ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.