Breaking News
Home / new delhi / ಕಳಪೆ ಕಾಮಗಾರಿಯಿಂದ ಕಾಲುವೆ ಸೋರಿ ರೈತರ ಜಮೀನು ಸವಳಾಗಿ ಪರಿವರ್ತನೆ ಆಂಕರ್:

ಕಳಪೆ ಕಾಮಗಾರಿಯಿಂದ ಕಾಲುವೆ ಸೋರಿ ರೈತರ ಜಮೀನು ಸವಳಾಗಿ ಪರಿವರ್ತನೆ ಆಂಕರ್:

Spread the love

ಚಿಕ್ಕೋಡಿ

ಕೊಚ್ಚಿಹೊದ ಕಾಲುವೆಯ ಸಿಮೆಂಟ ಕಾಂಕ್ರೆಟ್, ಮೊಳಕಾಲು ತನಕ ನೀರು ನಿಂತು ಕೆಸರು ಗದ್ದೆಯಂತಾಗಿರುವ ಜಮೀನು, ನೀರಾವರಿ ಇಲಾಖೆಯ ವಿರುದ್ಧ ಘೋಷಣೆ ಹಾಕುತ್ತಿರುವ ರೈತರು ಇವೇಲ್ಲ ದೃಶ್ಯಗಳು ಕಂಡು ಬಂದಿರುವುದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪೂರ ಗ್ರಾಮದಲ್ಲಿ….

ಜವಳಿ ಸಚಿವ ಶ್ರೀಮಂತ ಪಾಟೀಲ ತವರು ಕ್ಷೇತ್ರದ ಐನಾಪೂರ ಗ್ರಾಮದ ರೈತರು ಗೋಳು ಯಾರು ಕೇಳದಂತಾಗಿದೆ. ಐನಾಪೂರ ಗ್ರಾಮದಿಂದ ಮಂಗಸೂಳಿ ಗ್ರಾಮದವರಗೆ ಐನಾಪೂರ ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಸುಮಾರು 200 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಆದರೆ ಕಳಪೆ ಮಟ್ಟದ ಕಾಲುವೆ ಕಾಮಗಾರಿ ಮಾಡಿದ್ದರಿಂದ ಕಾಲುವೆ ನೀರು ಎರಡು ಕಡೆ ಸೋರುತ್ತಿದೆ ಇದರಿಂದ ಕಾಲುವೆಯ ಅಕ್ಕಪಕ್ಕದ ಸುಮಾರು 2-3 ಸಾವಿರ ಎಕ್ಕರ್ ಫಲವತ್ತಾದ ಜಮೀನು ಸುಮಾರು ಏಳೆಂಟು ವರ್ಷಗಳಿಂದ ಸವಳು ಭೂಮಿಯಾಗಿ ಪರಿವರ್ತನೆಯಾಗಿದೆ. ಫಲವತ್ತ ಭೂಮಿಲ್ಲಿ ಮೊಳಕಾಲು ಮಟ ನೀರು ನಿಂತು ಸವಳು ಭೂಮಿಯಾಗಿ ಪರಿವರ್ನೆಯಾಗಿದೆ ಇದರಿಂದ ರೈತರು ಜಮಿನಿನಲ್ಲಿ ಬೆಳೆದ ಬೆಳೆಗಳು ಬರತ್ತಾಯಿಲ್ಲ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿ ಈ ಭಾಗದ ರೈತರದ್ದಾಗಿದೆ. ಇನ್ನೂ ಈ ಬಗ್ಗೆ ಹಲವು ಬಾರಿ ಸಂಬಂದಪಟ್ಟ ನೀರಾವರಿ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಮನವಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇನ್ನಾದರೂ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ದುರಸ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಕಾಲುವೆಬಂದ್ ಮಾಡಿ ಉಗ್ರ ಹೋರಾಟ ಕೈಗೋಳ್ಳುವುದಾಗಿ ರೈತರು ಎಚ್ಚರಿಕೆ.

 


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ