Breaking News
Home / Uncategorized (page 590)

Uncategorized

ನೆಲಮಂಗಲ ಬಳಿ ಲಾರಿಗೆ ಕಾರು ಡಿಕ್ಕಿ: ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಮೂವರ ದುರ್ಮರಣ

ನೆಲಮಂಗಲ: ನಿಯಂತ್ರಣ ತಪ್ಪಿದ ಕಾರು ಪಕ್ಕದ ರಸ್ತೆಗೆ ನುಗ್ಗಿ ಗ್ಯಾಸ್ ಲ್ಯಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ-ಕುಣಿಗಲ್ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಬೆಂಗಳೂರು ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ್ ನಗರದ ಪುರುಷೋತ್ತಮ್ ,ಚಂದು ಮತ್ತು ನವೀನ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ತುಮಕೂರು ಜಿಲ್ಲೆಯ ತಿಪಟೂರು ನಿವಾಸಿ ಆದಿತ್ಯ ಎಂಬುವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತನ್, ನವೀನ್, ಚಂದು ಮತ್ತು ಆದಿ ಇಟಿಯೋಸ್ ಕಾರಿನಲ್ಲಿ …

Read More »

ನಕಲಿ ಕಾರ್ಮಿಕರ ಕಾರ್ಡ್ ದಂಧೆ ವಿರುದ್ಧ ಕಠಿಣ ಕ್ರಮ: ಸಚಿವ ಶಿವರಾಮ್ ಹೆಬ್ಬಾರ್

ಬೆಳಗಾವಿ: ರಾಜ್ಯದಲ್ಲಿ ನಕಲಿ ಕಾರ್ಮಿಕರ ಕಾರ್ಡು ಮಾಡುವ ಜಾಲ ತಡೆಯಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಿಜವಾದ ಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸಿ ಬೇರೆ ರೀತಿಯಲ್ಲಿ ಕಾರ್ಮಿಕ ಕಾರ್ಡ್ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಕಾರ್ಮಿಕ ಕಾರ್ಡ್ ಗಳ ದುರುಪಯೋಗ ಆಗುವುದರಿಂದ ಅರ್ಹ ಕಾರ್ಮಿಕರಿಗೆ ಮೋಸ …

Read More »

11 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಳಗಾವಿ: ‘ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಶೇ 99ರಷ್ಟು ಬಿಲ್ ಪಾವತಿಸಲಾಗಿದೆ’ ಎಂದುಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 318 ಮಂದಿಗೆ ಕೋವಿಡ್-19 ಸೋಂಕಿ ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 11ಸಾವಿರದ (11,153) ಗಡಿ ದಾಟಿದೆ. ‘ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ತಾಲ್ಲೂಕಿನ ನಾಲ್ವರು ಹಾಗೂ ಬೈಲಹೊಂಗಲ ತಾಲ್ಲೂಕಿನ ಒಬ್ಬರು ಸೇರಿ ಐವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಅವರಲ್ಲಿ ಒಬ್ಬರು 32 ವರ್ಷದವರು. …

Read More »

ಬೆಂಗಳೂರಿನಲ್ಲಿ ಟಗರು ಬೆಟ್ಟಿಂಗ್ ಭರಾಟೆ ಜೋರು- ಹಳ್ಳಿ ಕ್ರೇಜ್ ಸಿಟಿಗೆ ಶಿಫ್ಟ್

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಸಮಯದಲ್ಲೇ ಟಗರು ಆಟ ಜೋರಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದ ಟಗರು ಬೆಟ್ಟಿಂಗ್ ಕ್ರೇಜ್ ಈಗ ನಗರಕ್ಕೆ ಶಿಫ್ಟ್ ಆಗಿದೆ. ಕೆಲಸ ಇಲ್ಲದ ಯುವಕರು ಟಗರು ಆಟದ ಮೂಲ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಜಯನಗರ ಸೇರಿದಂತೆ ನಗರದ ಹಲವು ಕಡೆ ಈಗ ಟಗರು ಕಾಳಗ ಸಖತ್ ಕ್ರೇಜ್ ಸೃಷ್ಟಿಸಿದೆ. ಹೊಡಿ ಮಗಾ ಅನ್ನೋ ಟೀಂ ಇದ್ರಲ್ಲಿ ಸಕ್ರೀಯ ಆಗಿದೆ. ಆದರೆ …

Read More »

ಭಿಕ್ಷುಕನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವಾಗ ಕಂತೆ ಕಂತೆ ಹಣ ಪತ್ತೆ

ಬೆಂಗಳೂರು: ಅಂಗವಿಕಲ ಭಿಕ್ಷುಕನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವಾಗ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರತಿದಿನ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಂಗವಿಕಲ ರಂಗಸ್ವಾಮಯ್ಯ ಬಳಿ ಹಣ ಪತ್ತೆಯಾಗಿದೆ. ರಂಗಸ್ವಾಮಯ್ಯ ಭಿಕ್ಷೆ ಬೇಡಿದ ಹಣ ಹಾಗೂ ಅಂಗವಿಕಲ ವೇತನವನ್ನೂ ಬಳಸದೆ ಹಣವನ್ನು ಕೂಡಿಟ್ಟಿದ್ದು, ಸುಮಾರು 60 ಸಾವಿರ ರೂ. ಗಂಟಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಹಲವು ತಿಂಗಳುಗಳಿಂದ ಸಾನ್ನವಿಲ್ಲದೇ …

Read More »

ನಿರ್ವಹಣೆ ಇಲ್ಲದೆ ರೈತರಿಗೆ ಉಪಯೋಗಕ್ಕಿಂತ ಅಪಾಯವನ್ನೇ ತಂದೊಡ್ಡುತ್ತಿದೆ ಈ ಚೆಕ್ ಡ್ಯಾಮ್

ಕಾರವಾರ; ಒಂದು ಚೆಕ್ ಡ್ಯಾಮ್ ನಿರ್ಮಾಣ ಮಾಡೋದು ಆ ಭಾಗದ ರೈತರಿಗೆ ವರದಾನವಾಗಲಿ. ಅಲ್ಲಿನ ಕೃಷಿ ಭೂಮಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗಲಿ ಎನ್ನುವ ನಿಟ್ಟಿನಲ್ಲಿ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗ್ರಾಮೀಣ ಭಾಗದಲ್ಲೊಂದು ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಇದರ ನಿರ್ವಹಣೆ ಸರಿಯಾಗಿ ಆಗದ ಕಾರಣ ಅಲ್ಲಿನ ಕೃಷಿ ಭೂಮಿಗೂ ಇದರ ನೀರು ಪೂರೈಕೆ ಆಗುತ್ತಿಲ್ಲ. ಬದಲಾಗಿ ಈ ಡ್ಯಾಮ್​ನಿಂದ ಅನೇಕ ಸಮಸ್ಯೆಗಳೇ ರೈತರಿಗೆ ಎದುರಾಗುತ್ತಿದೆ. ಇದು …

Read More »

ಸರ್ಕಾರ ಒಪ್ಪಿದ್ರೆ ಸದ್ಯದಲ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗೆ ಅವಕಾಶ ನೀಡಲಾಗುವುದು.

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಭಕ್ತರ ಪ್ರವೇಶ ನಿಷೇಧ ಹಾಗೂ ಕೆಲವೊಂದು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಸೆಪ್ಟೆಂಬರ್ 1 ರಿಂದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ಇನ್ನು ಮುಂದೆ ದೇವಸ್ಥಾನಗಳಲ್ಲಿ ಮಾಮೂಲಿ ಪೂಜೆ ನಡೆಯಲಿದೆ. ಅದು ಕೂಡ ಕೊರೊನಾ ಮಾರ್ಗಸೂಚಿ ಅನ್ವಯವೇ ಎಲ್ಲಾ ಸೇವೆಗಳು ಲಭ್ಯವಾಗಲಿವೆಹೀಗಾಗಿ ಸೆಪ್ಟೆಂಬರ್ 1ರಿಂದಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ …

Read More »

ರೈಲ್ವೆ ಬೈಸಿಕಲ್- ಇಂಡಿಯನ್ ರೈಲ್ವೆ ನೂತನ ಆವಿಷ್ಕಾರ

ನವದೆಹಲಿ: ಇಂಡಿಯನ್ ರೈಲ್ವೆ ಹೊಸ ರೈಲ್ವೆ ಬೈಸಿಕಲ್‍ನ್ನು ಆವಿಷ್ಕಾರಿಸಿದ್ದು, ರೈಲ್ವೆ ಟ್ರ್ಯಾಕ್ ಪರಿಶೀಲನೆ ಹಾಗೂ ರಿಪೇರಿ ಮಾಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಸಹಕಾರಿ ಆಗಲಿದೆ. ಈ ಕುರಿತ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಜುಲೈನಲ್ಲಿ ಮಾಹಿತಿ ನೀಡಿ ಟ್ವೀಟ್ ಮಾಡಿದ್ದರು. ನೂತನವಾಗಿ ಅವಿಷ್ಕಾರಿಸಿರುವ ರೈಲ್ವೆ ಸೈಕಲ್ ಗಂಟೆಗೆ ಗರಿಷ್ಠ 15 ಕಿಮೀ ವೇಗದಲ್ಲಿ ತುಳಿಯಬಹುದಾಗಿದೆ. ಈಸ್ಟ್ ಕೋಸ್ಟ್ ರೈಲ್ವೆ ವಿಭಾಗ ಈ ರೈಲ್ವೆ ಸೈಕಲ್‍ಗಳನ್ನು ಅವಿಷ್ಕಾರಿಸಿದೆ. 30 ಕೆಜಿ ತೂಕವಿರುವುದರಿಂದ …

Read More »

ಮಕ್ಕಳಿಗೆ ಆರೋಗ್ಯ ಕಾರ್ಡ್‌; ಈ ವರ್ಷವೇ ಲಭ್ಯ ರಾಜೀವ್‌ ಗಾಂಧಿ ವಿ.ವಿ.ಯೋಜನೆ

ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಪತ್ರ ಸಾಮಾನ್ಯ. ಇನ್ನು ಅದರ ಜತೆ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುವ “ಆರೋಗ್ಯ ಕಾರ್ಡ್‌’ ಕೂಡ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರೋಗ್ಯ ಕಾರ್ಡ್‌ ದೊರೆಯಲಿದೆ. ಕೊರೊನಾದಿಂದ ಶಾಲೆಗಳ ಆರಂಭ ವಿಳಂಬವಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅತಿಯಾದ ಗಮನ ಅಗತ್ಯವಾಗಿರುವುದರಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಸರಕಾರಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸ್ವಾಸ್ಥ್ಯ ನಿಗಾವಣೆಗೆ ಯೋಜನೆ ಸಿದ್ಧಪಡಿಸಿದೆ. ಪ್ರತಿ ವಿದ್ಯಾರ್ಥಿಯ …

Read More »

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ದಾವಣಗೆರೆ: ವಸತಿ ಶಾಲೆಗಳಿಗೆ 6 ನೇ ತರಗತಿಯ ಪ್ರವೇಶಕ್ಕಾಗಿ ಹೊರಡಿಸಲಾಗಿದ್ದ ಆನ್‍ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಸೆ.5 ರವರೆಗೆ ವಿಸ್ತರಿಸಲಾಗಿದೆ. 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಪರಿಶಿಷ್ಟ ಜಾತಿ/ಪಂಗಡ ವರ್ಗದ ಪ್ರತಿಭಾನ್ವಿತ ವಸತಿ ಶಾಲೆ, ಮಾಯಕೊಂಡ ವಸತಿ ಶಾಲೆಗಳಿಗೆ ಪ್ರವೇಶಕ್ಕೆ ಆ.25 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಆದರೆ …

Read More »