Breaking News

Uncategorized

ಕರ್ನಾಟಕ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ ಕೊಲ್ಹಾಪುರದಲ್ಲಿ ಗಲಾಟೆ ಹಿನ್ನೆಲೆ

ಬೆಳಗಾವಿ:ಕೊಲ್ಹಾಪುರದಲ್ಲಿ ನಡೆದ ಗಲಾಟೆ ಬೆನ್ನಲ್ಲೇ ಕರ್ನಾಟಕ ಹಾಗೂ ಮಾಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ 400 ಬಸ್ ಗಳು ಸಂಚರಿಸುತ್ತಿದ್ದವು. ಇನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್ ಗಳು ಸಂಚರಿಸುತ್ತಿದ್ದವು. ಆದರೆ ಗಲಾಟೆ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿನ್ನೆ ಕೊಲ್ಹಾಪುರದಲ್ಲಿ ಗಲಾಟೆ ನಡೆದಿದ್ದು, ಇದೇ ಕಾರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Read More »

‘ಜೀವದ ಮೇಲೆ’ ನಿಮಗೆ ಪ್ರೀತಿ ಇದ್ದರೇ.. ಇಂಥ ‘ದುಸ್ಸಾಹಸ’ಕ್ಕೆ ಕೈ ಹಾಕಬೇಡಿ.!

ಪಣಜಿ : ಸಂಚರಿಸುವಂತ ರೈಲು ಹತ್ತಲು ಹೋಗಿ ಅನೇಕರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದೂ ಇಂತಹ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂಬುದಾಗಿ ಎಚ್ಚರಿಸಿದ್ರೂ.. ಪ್ರಯಾಣಿಕರು ಮಾತ್ರ ಡೋಂಟ್ ಕೇರ್. ಹೀಗೆ ಚಲಿಸುತ್ತಿದ್ದಂತ ರೈಲು ಹತ್ತಿದ್ದರಿಂದ ಏನ್ ಆಯ್ತು ಅಂತ, ಈ ಸುದ್ದಿ ಓದಿ.. ‘ ಗೋವಾದ ವಾಸ್ಕೋಡಿಗಾಮಾ ರೈಲು ನಿಲ್ದಾಣದಲ್ಲಿ, ರೈಲು ನಿಂತಿದ್ದರೂ, ಹತ್ತದಿದ್ದಂತ ಪ್ರಯಾಣಿಕನೊಬ್ಬ, ಚಲಿಸಲು ಆರಂಭಿಸಿದಂತ ರೈಲು ಹತ್ತೋದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಓಡಿ ಹೋಗಿ ಹತ್ತೋದಕ್ಕೆ ಪ್ರಯತ್ನಿಸಿದಾಗ ನಿಯಂತ್ರಣ …

Read More »

ರಾಜ್ಯದಲ್ಲಿ ಇಂದು 833 ಹೊಸ ಪ್ರಕರಣಗಳು ದಾಖಲು

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌-19 ದೃಢಪಟ್ಟ 833 ಹೊಸ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 9,58,417 ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 12,386ಕ್ಕೆ ತಲುಪಿದೆ. ಶುಕ್ರವಾರ ಗುಣಮುಖರಾದ 545 ಮಂದಿಯೂ ಸೇರಿದಂತೆ ಇದುವರೆಗೆ ಒಟ್ಟು 9,37,898 ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,114 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ …

Read More »

ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮ

ಘಟಪ್ರಭಾ: ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗ ಸಮುದಾಯ ಭವನದಲ್ಲಿ ದಿ.13 ರಂದು ಮುಂಜಾನೆ 12 ಗಂಟೆಗೆ 128 ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮಠದ ಪೀಠಾಧಿಕಾರಿ ಶ್ರೀ ನಿಜಗುಣ ದೇವರು, ಅಧ್ಯಕ್ಷತೆಯನ್ನು ಚಿಕ್ಕಹಂಚಿನಾಳ ಶಿವಾನಂದ ಮಠದ ಶಾಂತಾನಂದ ಸ್ವಾಮಿಗಳು ವಹಿಸುವರು. ಶ್ರೀಗಳ ಕಿರೀಟ ಮಹಾಪೂಜೆ ಜರಗುವುದು. ಅನ್ನ ದಾಸೋಹವನ್ನು ಗುರುಸಿದ್ದ ಕರಬನ್ನಿ ಹಾಗೂ …

Read More »

ಪುಣೆಯಲ್ಲಿ ಮಾರ್ಚ್ 21 ರವರೆಗೆ ಶಾಲೆ ಬಂದ್ : ಮಹಾರಾಷ್ಟ್ರ ಸರ್ಕಾರ

ಪುಣೆ : ಕೊರೋನಾ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಪುಣೆಯಲ್ಲಿ ಮಾರ್ಚ್ 21 ರವರೆಗೆ ಶಾಲೆ ಬಂದ್ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿದೆ . ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೊರೋನಾ ಅಬ್ಬರ ತಡೆಯುವ ನಿಟ್ಟಿನಲ್ಲಿ ಶಾಲೆ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ . ಮುಂದಿನ ಪರಿಸ್ಥಿತಿಯನ್ನ ಅವಲೋಕಿಸಿ ಶಾಲೆಗಳನ್ನ ಪುನರಾಂಭಿಸಬೇಕೆ ಅಥವಾ ಬಂದ್ …

Read More »

ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಬಹುದೇ? ಸುಧಾಕರ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಅಂತಹ ಪರಿಸ್ಥಿತಿ ಬಾರದಿರಲಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಆ ಪರಿಸ್ಥಿತಿ ಬಾರದಂತೆ ಸಿಎಂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಹೆಚ್ಚಿನ ಲಸಿಕೆ …

Read More »

ಗೀತಾ ಶಿವರಾಜ್‌ಕುಮಾರ್ ಸಾಧಾರಣ ಮಹಿಳೆಯಲ್ಲ, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು: DK ಶಿವಕುಮಾರ್

ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರ ಜತೆ ಡಿಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರುವುದನ್ನು ಸ್ಪಷ್ಟಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌ ಗೀತಾ ಅವರು ಸಾಧಾರಣ ಮಹಿಳೆ ಅಲ್ಲ, ಅವರಿಗೆ ಸೂಕ್ತ ಗೌರವ ನೀಡಬೇಕು ಎಂದು ಹೇಳಿದ್ದಾರೆ. …

Read More »

ಸಹೋದರನ ಹಾದಿಯನ್ನೇ ಹಿಡಿದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸಗೆ ಸೇರ್ಪಡೆ…

ನಟ, ರಾಜಕಾರಣಿ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಕೈಹಿಡಿದಿದ್ದಾರೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಈ ನಡುವೆ ಸಹೋದರನ ಹಾದಿಯನ್ನೇ ಅಕ್ಕ ಗೀತಾ ಶಿವರಾಜ್ ಕುಮಾರ್ ಸಹ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ನಟ ಶಿವರಾಜ್ ಕುಮಾರ್ ಅವರ ಪತ್ನಿ, ಜೆಡಿಎಸ್ ಸದಸ್ಯೆ ಗೀತಾ ಶಿವರಾಜ್‌ ಕುಮಾರ್ ಅವರು ಸಹ ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸದಾಶಿವನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ …

Read More »

ಕಿವಿ ಕೇಳದೇ-ಮಾತೂ ಬಾರದೇ ಪಾಕ್​ನಲ್ಲಿ ಸಿಲುಕಿದ್ದ ಗೀತಾ; ಕೊನೆಗೂ ತಾಯಿ ಮಡಿಲು ಸೇರಿದ್ರು

2015ರಲ್ಲಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಸಿನಿಮಾದ ಮುನ್ನಿ ಕ್ಯಾರೆಕ್ಟರ್​ಗೆ ಇಡೀ ದೇಶವೇ ಸಲಾಂ ಹೊಡೆದಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಅದಕ್ಕಿಂತ ಹೆಚ್ಚು ಸದ್ದು ಮಾಡಿದ್ದು, ಭಾರತದಿಂದ ಆಕಸ್ಮಿವಾಗಿ ಪಾಕ್ ಸೇರಿ ಅಲ್ಲಿನ ಎನ್​ಜಿಓ ಒಂದರಲ್ಲಿ ರಕ್ಷಣೆ ಪಡೆದಿದ್ದ ಗೀತಾ ಎಂಬ ಹೆಸರಿನ ರಿಯಲ್ ಮುನ್ನಿ. ಈಕೆಗೆ ನಿಜವಾದ ಭಾಯಿಜಾನ್ ಆಗಿದ್ದು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್. ಪಾಕಿಸ್ತಾನದಲ್ಲಿದ್ದ ಕಿವುಡ …

Read More »

ಶಿವರಾತ್ರಿಯ ವಿಶೇಷ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ಭಕ್ತಿ, ಭಾವದಿಂದ ಕೈಮುಗಿದ ಭಕ್ತರು

ಕೊಪ್ಪಳ: ಶಿವರಾತ್ರಿಯ ದಿನವಾದ ಇಂದು ಕೊಪ್ಪಳದ ಹೊರವಲಯದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಅಚ್ಚರಿಯೊಂದು ನಡೆದಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಇಂದು ದೇವಾಲಯಕ್ಕೆ ಸಾಕಷ್ಟು ಭಕ್ತರು ಆಗಮಿಸಿದ್ದರು. ಶಿವನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಾಲಯದ ಹೊರಗಿನಿಂದ ಬಂದ ನಾಗರ ಹಾವೊಂದು ಗರ್ಭಗುಡಿಯ ಒಳಗಡೆ ಪ್ರವೇಶಿಸಿದೆ. ಲಿಂಗದ ಕಡೆಗೆ ತೆರಳಿದ ಹಾವು ಅಲ್ಲಿಂದ ಕಾಣೆಯಾಗಿದೆ. ಹಾವನ್ನು ಕಂಡ ಭಕ್ತರು ಧನ್ಯತಾಭಾವದಿಂದ ಕೈಮುಗಿದಿದ್ದಾರೆ.

Read More »