Breaking News

Uncategorized

ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ 14 ವರ್ಷದ ಬಾಲಕಿಯನ್ನು ಲಕಾಡಿಗೆ ಕರೆದೊಯ್ದು ಅತ್ಯಾಚಾರ

ಮಂಡ್ಯ: ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ 14 ವರ್ಷದ ಬಾಲಕಿಯನ್ನು ಮೈಸೂರು ಜಿಲ್ಲೆ ತಿ.ನರಸೀಪುರದ ತಲಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಬಾಲಕಿ ನಗರದ ಗ್ರಾಮಾಂತರ ಠಾಣೆಗೆ ಬುಧವಾರ ದೂರು ನೀಡಿದ್ದು ಆರೋಪಿ ಹಾಗೂ ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಯುವಕ ಬಾಲಕಿಗೆ ಪ್ರೇಮ ನಿವೇದನೆ ಮಾಡಿ ಮಳವಳ್ಳಿ ಸಮೀಪದ ಜಾತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ತಲಕಾಡು ನೋಡಲು ಕರೆದೊಯ್ದು ಅತ್ಯಾಚಾರ ಎಸಗಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More »

‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್​​ಗೆ ಸತೀಶ್ ಜಾರಕಿಹೊಳಿ ಮಾಸ್ಟರ್​​ ಸ್ಟ್ರೋಕ್

ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂಎಲ್ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಲಾಯ ತಸ್ಮೈ ನಮಃ. ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ. ಲಕ್ಷ್ಮಿ ಹೆಬ್ಬಾಳ್ಕರ್‌, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಮೊನ್ನೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ ಈ ಒಂದು ಮಾತು ಬೆಳಗಾವಿಯಲ್ಲಿ ಹೊಸ ಚರ್ಚೆ ಹುಟ್ಟು …

Read More »

ಜೀವನಪೂರ್ತಿ ಜತೆಯಿರುವ ಕನಸು ಕಂಡವರು ಒಟ್ಟಿಗೇ ಜಲಸಮಾಧಿಯಾದರು.! ಕಣ್ಣೀರು ತರಿಸುವ ಕಥೆಯಿದು

ಭೋಪಾಲ್​: ಇತ್ತೀಚೆಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್​ ಒಂದು ಕಾಲುವೆಗೆ ಬಿದ್ದು 51 ಜನರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೃತರಾದವರ ಜತೆ ಅದೆಷ್ಟೋ ಕನಸುಗಳು, ಅದೆಷ್ಟೋ ಕುಟುಂಬಗಳ ಸಂತಸವೂ ನೀರಿನ ಪಾಲಾಗಿ ಹೋಗಿದೆ. ಅದೇ ಅಪಘಾತದಲ್ಲಿ ಜಲ ಸಮಾಧಿಯಾದ ದಂಪತಿಯ ಕಥೆ ಇದು.. ಸಿಧಿ ಜಿಲ್ಲೆಯ ನಿವಾಸಿ ಅಜಯ್​ಗೆ ಇನ್ನೂ 25 ವರ್ಷ. ಕಳೆದ ವರ್ಷ ಜೂನ್ ​8ರಂದು ಆತ ತಪಸ್ಯಾ (23) ಹೆಸರಿನ ಯುವತಿಯನ್ನು ಮದುವೆಯಾಗಿದ್ದು. …

Read More »

3 ದಿನ ಹೆಂಡ್ತಿ, ಇನ್ಮೂರು ದಿನ ಲವರ್ ನೊಂದಿಗೆ ಇರಲು ವ್ಯಕ್ತಿಗೆ ಸೂಚನೆ..!ಪೊಲೀಸರ ವಿಚಿತ್ರ ಪರಿಹಾರ ಸೂತ್ರ..!

ರಾಂಚಿ : ಪ್ರೇಯಸಿ – ಹೆಂಡತಿ ವಿಚಾರವಾಗಿ ಉದ್ಭವವಾಗಿದ್ದ ಸಮಸ್ಯೆವೊಂದಕ್ಕೆ ಜಾರ್ಖಂಡ್​ ಪೊಲೀಸರು ವಿಚಿತ್ರವಾದ ಪರಿಹಾರ ನೀಡಿದ್ದು, ಮೂರು ದಿನ ಹೆಂಡತಿ ಹಾಗೂ ಇನ್ಮೂರು ದಿನ ಲವರ್​ನೊಂದಿಗೆ ಕಾಲ ಕಳೆಯುವಂತೆ ಪರಿಹಾರ ನೀಡಿದ್ದಾರೆ. ರಾಂಚಿಯ ಕೊಕಾರ್​​ನ ತಿರ್ಲಿ ರೋಡ್​ನಲ್ಲಿ ರಾಜೇಶ್ ಮೆಹ್ತಾ ವಾಸವಾಗಿದ್ದು, ಮದುವೆಯಾದ ನಂತರವೂ ಈತ ಬೇರೆ ಯುವತಿ ಜತೆ ಸಂಪರ್ಕವಿಟ್ಟುಕೊಂಡಿದ್ದ. ಅಷ್ಟೇ ಏಕೆ ಆಕೆ ಜತೆ ಓಡಿ ಹೋಗಿದ್ದ. ಹೀಗಾಗಿ ಹೆಂಡತಿ ಹಾಗೂ ಮಗು ಅನಾಥವಾಗಿದ್ದವು. ಗಂಡ …

Read More »

ಪಂಜಾಬ್, ಹರ್ಯಾಣದಲ್ಲಿ ರೈತರಿಂದ ರೈಲು ತಡೆದು ಪ್ರತಿಭಟನೆ, ಬಿಗಿ ಬಂದೋಬಸ್ತ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರೈಲು ತಡೆ ಚಳವಳಿಗೆ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಕೆಲಗಂಟೆಗಳ ಕಾಲ ರೈಲು ತಡೆದು ಪ್ರತಿಭಟಿಸಿದರು. 12ಗಂಟೆಯಿಂದ ರೈಲು ತಡೆ ಚಳವಳಿ ಆರಂಭಗೊಂಡಿದ್ದು, 4ಗಂಟೆವರೆಗೆ ಶಾಂತಿಯುತವಾಗಿ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಮುಂಜಾಗ್ರತಾ ಕ್ರಮವಾಗಿ ಹಲವೆಡೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು …

Read More »

ಕೃಷಿ ಕಾಯ್ದೆ ವಿರೋಧಿಸಿ “ರೈಲ್ ರೋಖೋ” ಚಳುವಳಿ, ಪ್ರತಿಭಟನಾಕಾರರು ವಶಕ್ಕೆ

: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರೋ ರೈತರು ಇಂದು ದೇಶಾದ್ಯಂತ ರೈಲ್ ರೋಕೋ ಚಳವಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ವಿಜಯಪುರ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಹಲವಾರು ರೈತರು ರೈಲು ತಡೆಯಲು ಮುಂದಾಗಿದ್ದು, ಅವರನ್ನ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ವಿಜಯಪುರ ರೈತರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೈತರು, ಕಾರ್ಮಿಕ ಸಂಘಟನೆಗಳು ಸೇರಿ ವಿಜಯಪುರದಲ್ಲಿ …

Read More »

ಇಂದು ಯಾರಿಗೆ ಒಲಿಯುತ್ತಾರೆ ಅದೃಷ್ಟ ಲಕ್ಷ್ಮಿ?; ಹರಾಜಿನ ಪ್ರಮುಖ ಆಕರ್ಷಣೆಯೇ ಅರ್ಜುನ್​ ತೆಂಡುಲ್ಕರ್​

ಐಪಿಎಲ್​ ಸೀಸನ್​ -14ರ ಮಿನಿ ಹರಾಜಿಗೆ, ಚೆನ್ನೈನಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ ಹರಾಜಿಗೆ ತಯಾರಿ ನಡೆಸಿರುವ ಫ್ರಾಂಚೈಸಿಗಳು, ಕೆಲ ಸ್ಟಾರ್​​ ಆಟಗಾರರ ಜೊತೆ ಫ್ಯೂಚರ್​ ಸ್ಟಾರ್​​ಗಳಿಗೆ ಮಣೆಹಾಕುವ ಲೆಕ್ಕಚಾರದಲ್ಲಿವೆ. ಇನ್ನು ಕೆಲ ಫ್ರಾಂಚೈಸಿಗಳಂತೂ, ದೇಶಿ ಟೂರ್ನಿಗಳಲ್ಲಿ ಕಮಾಲ್​ ಮಾಡಿರುವ ಪ್ರತಿಭೆಗಳನ್ನ, ಖರೀದಿಸಲು ಪ್ಲಾನ್​ ಮಾಡಿಕೊಂಡಿವೆ. ಅರ್ಜುನ್​ ತೆಂಡುಲ್ಕರ್​​- ಆಲ್​ರೌಂಡರ್​​ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಪ್ರಮುಖ ಆಕರ್ಷಣೆ, ದಿಗ್ಗಜ ಸಚಿನ್​ ತೆಂಡುಲ್ಕರ್​ ಸುಪುತ್ರ ಅರ್ಜುನ್​ ತೆಂಡುಲ್ಕರ್​. ಎಡಗೈ ಪೇಸರ್​ ಮತ್ತು …

Read More »

ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ

ಬೆಳಗಾವಿ: ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ. ಇಲ್ಲಿನ ರಾಣಾಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜಿತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ದರೋಡೆ ನಡೆದಿದೆ. ಮನೆ ಕಿಟಕಿ ಮುರಿದು ಒಳಬಂದ 7 ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ನಾವು ನಿಮಗೆ ಏನೂ ಮಾಡಲ್ಲ ನಮಗೆ ಹಣ, ಒಡವೆ ಕೊಟ್ಟುಬಿಡಿ ಎಂದಿದ್ದಾರೆ. ಅಭಿಜಿತ್ ಪತ್ನಿ ಮಾಂಗಲ್ಯ, …

Read More »

ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ

ಬೆಳಗಾವಿ: ಕೊಲೆ ಕೇಸ್ ನಲ್ಲಿ ಹಿಂಡಲಗಾ ಜೈಲು ಸೇರಿರುವ ರೌಡಿ ಶೀಟರ್ ಒಬ್ಬ ಮಹಿಳೆಯೋರ್ವರಿಗೆ ಫೋನ್ ಮಾಡಿ ಹಣ ನಿಡುವಂತೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ತೌಸಿಫ್ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ ಹಾಕಿ ತನ್ನ ಬೇಲ್ ಗಾಗಿ 3 ಲಕ್ಷ ರೂ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸ್ನೇಹಾ ಹಾಗೂ ತೌಸಿಫ್ …

Read More »

ಡಿಕೆಶಿ ಮಗಳ ಮದುವೆ ಆರತಕ್ಷತೆಯಲ್ಲಿ ​ರಾಹುಲ್​, ಪ್ರಿಯಾಂಕಾ; ಗಮನಸೆಳೆದ ಗೋಕಾಕ್​ ಸಾಹುಕಾರ್​

ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಯಾರು ಮಿತ್ರರಲ್ಲ ಎಂಬುದು ಕೆಲವು ಸಂದರ್ಭದಲ್ಲಿ ಸಾಬೀತಾಗುತ್ತಿರುತ್ತದೆ. ಅದೇ ರೀತಿಯ ಸನ್ನಿವೇಶವೊಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಮದುವೆ ಸಂದರ್ಭದಲ್ಲಿ ನಡೆದಿದೆ. ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಮದುವೆ ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಈ ಆರತಕ್ಷತೆಯಲ್ಲಿ ಡಿಕೆ ಶಿವಕುಮಾರ್ ಅವರ​ ರಾಜಕೀಯ ಸ್ನೇಹಿತರ ಸಮಾಗಮವಾಗಿದೆ. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಕೂಡ ಆಗಮಿಸಿ ಶುಭಕೋರಿದ್ದಾರೆ. ಇದರಲ್ಲಿ ಗಮನಸೆಳೆದವರು ಎಂದರೇ …

Read More »