Home / Uncategorized (page 17)

Uncategorized

ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ. ಪ್ರಮೋದ್ ಮುತಾಲಿಕ್

ಹುಣಸೂರು: ಜಿಹಾದಿ ಸಂಸ್ಕೃತಿ ಇರುವ ಕಡೆಗಳಲ್ಲಿ ಹಿಂದೂ ಯುವಕರ ಕೊಲೆ. ಆತ್ಮಹತ್ಯೆಗೆ ಪ್ರಚೋದನೆ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಸರಕಾರ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಎಚ್ಚರಿಸಿದರು. ವಿರಾಜಪೇಟೆಯಿಂದ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ದಾಸನಪುರದ ರವಿ ಪುತ್ರ ಮುತ್ತುರಾಜ್ ಕೊಲೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಕುಟಂಬದವರಿಂದ ಮಾಹಿತಿ ಪಡೆದು ಧೈರ್ಯ ಹೇಳಿದ ನಂತರ ಅವರು ಪ್ರಕರಣ ಕುರಿತು …

Read More »

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ

ಭರಮಸಾಗರ: ಕಾಲಗೆರೆ ಗ್ರಾಮದ ಮದುವೆ ಸಮಾರಂಭದಲ್ಲಿ ಊಟ ಮಾಡಿದ ಸುಮಾರು 30 ಕ್ಕೂ ಹೆಚ್ಚು ಜನರು ಪುಡ್ ಪಾಯಿಸನ್ ನಿಂದ ಅಸ್ವಸ್ಥಗೊಂಡು ದಾವಣಗೆರೆಯ ಸಿಜಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ನಡೆಯಬೇಕಿದ್ದ ಕಾಲಗೆರೆ ಗ್ರಾಮದ ವಧು ಮತ್ತು ಹಿರೇಬೆನ್ನೂರು ಗ್ರಾಮದ ವರನ ಮದುವೆ ಅರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡ ಜನರಲ್ಲಿ ಸುಮಾರು 30 ಜನರು ಊಟದ ಬಳಿಕ ಪುಡ್ ಪಾಯಿಸನ್ ಸಮಸ್ಯೆಯಿಂದ ನರಳಾಟ ನಡೆಸುತ್ತಿರುವದನ್ನು ಕಂಡು ಕೂಡಲೇ ಭರಮಸಾಗರ …

Read More »

ರಾಯಚೂರು | 19 ಪ್ರೌಢಶಾಲೆಯ ಎಲ್ಲರೂ ಉತ್ತೀರ್ಣ

ರಾಯಚೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಯಚೂರು ರಾಜ್ಯದ 30 ಜಿಲ್ಲೆಗಳ ಸಾಲಿನಲ್ಲೂ ಗುರುತಿಸಿಕೊಂಡಿಲ್ಲ. ಜಿಲ್ಲೆಯ ಐದು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿರುವುದು ಕಳಪೆ ಸಾಧನೆಗೆ ಇನ್ನೊಂದು ನಿದರ್ಶನವಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿರುವ ಶಾಲೆಗಳ ಫಲಿತಾಂಶ ತೃಪ್ತಿಕರವಾಗಿಲ್ಲ.ಇಲಾಖೆಯಲ್ಲಿ ಮೆರಿಟ್‌ ಆಧಾರಿತವಾಗಿ ನೇಮಕಗೊಂಡ ಶಿಕ್ಷಕರಿದ್ದರೂ ಕಳಪೆ ಫಲಿತಾಂಶ ಏಕೆ ಬರುತ್ತಿದೆ ಎನ್ನುವ ಚರ್ಚೆಗಳು …

Read More »

ಆಯೋಗಕ್ಕೆ ಪತ್ರ, ನೌಕರರಿಗೆ ಸಿಹಿಸುದ್ದಿ?

ಬೆಂಗಳೂರು, ಮೇ 11: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 26, ಮೇ 7 ಒಟ್ಟು ಎರಡು ಹಂತದಲ್ಲಿ ಮತದಾನ ಮುಗಿದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವುದು ಜೂನ್ 4ರಂದು. ರಾಜ್ಯದಲ್ಲಿ ಮತದಾನ ಮುಗಿದರೂ ಸಹ ಲೋಕಸಭೆ ಮಾದರಿ ಚುನಾವಣಾ ನೀತಿ ಸಂಹಿತೆ ಜೂನ್ 6ರ ತನಕ ಜಾರಿಯಲ್ಲಿರುತ್ತದೆ. ಅಲ್ಲಿಯ ತನಕ ಸರ್ಕಾರ ಯಾವುದೇ ಹೊಸ ಘೋಷಣೆ …

Read More »

ಲೋಕಸಭೆ ಎಲೆಕ್ಷನ್‌ ವೇಳೆ ಮೈತ್ರಿಗೆ ಮುಳುವಾಯ್ತು ಪೆನ್‌ ಡ್ರೈವ್‌ ಕಂಟಕ; ಪರಿಷತ್‌ಗೂ ದೋಸ್ತಿ ನಾ?

ಬೆಂಗಳೂರು, ಮೇ 10: ಹಾಸನ ಸಂಸಂದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳ ಪೆನ್​ಡ್ರೈವ್​ ಪ್ರಕರಣ ಮೈತ್ರಿ ನಾಯಕರು ಮುಜುಗರವನ್ನುಂಟು ಮಾಡಿದೆ. ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದ ಕುರಿತು ಕಾಂಗ್ರೆಸ್‌ ನಾಯಕರು ಬಿಜೆಪಿ ಮತ್ತು ಜೆಡಿಎಸ್​ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದೀಗ ಮೈತ್ರಿ ಕುರಿತು ಅಪಸ್ವರಗಳು ಕೇಳಿ ಬರುತ್ತಿವೆ. ಹೌದು, ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಪ್ರಕರಣದಿಂದ ಕಮಲ-ದಳ ನಾಯಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, …

Read More »

ಪ್ರಜ್ವಲ್ ರೇವಣ್ಣ ನಾಪತ್ತೆ: ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಣೆ

ಬೆಂಗಳೂರು, ಮೇ 10: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಪ್ರಕರಣವು ದೇಶಾದ್ಯಂತ ಸದ್ದು ಮಾಡುತ್ತಿದೆ. ಇದೀಗ ಪ್ರಜ್ವಲ್ ರೇವಣ್ಣ ಅವರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಹೌದು, ಜನತಾ ಪಕ್ಷವು ಪ್ರಜ್ವಲ್ ರೇವಣ್ಣ ನಾಪತ್ತೆ ಕುರಿತು ಕಿಡಿ ಕಾರಿದೆಪಕ್ಷದಿಂದ ನಗದು ಬಹುಮಾನ ಘೋಷಣೆ ಮಾಡಿದೆ. ಮಹಿಳೆಯರ ಮೇಲಿನ ಲೈಂಗಿಕ-ಮಾನಸಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ …

Read More »

ಅನ್ಯ ಜಾತಿ ಎಂದು ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಕಲಬುರಗಿ, ಮೇ.11: ಮದುವೆಗೆ ನಿರಾಕರಿಸಿದ್ದಕ್ಕೆ ಕಲಬುರಗಿಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಯುವತಿ ಪುಷ್ಪಾ(26) ನಿನ್ನೆ ಸಂಜೆ (ಮೇ.10) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. UPSC ಪರೀಕ್ಷೆಗೆ ಸಿದ್ದತೆ ನಡೆಸಿದ್ದ ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಕೆಲ ದಿನಗಳಿಂದ ಪುಷ್ಪಾ ತನ್ನ ಪ್ರಿಯಕರ ಕಿರಣ್​ಗೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡ್ತಿದ್ದರು. …

Read More »

ಎನ್‌ಇಪಿ ರದ್ದತಿಯಿಂದ ಉನ್ನತ ಶಿಕ್ಷಣಕ್ಕೆ ಆಪತ್ತು: ಅರುಣ ಶಹಾಪುರ

ಮಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ) ಭಾಗವಾಗಿದ್ದ ನಾಲ್ಕು ವರ್ಷಗಳ ಪದವಿ ಸ್ಥಗಿತಗೊಳಿಸಿ, 3 ವರ್ಷಗಳ ಪದವಿ ಕೋರ್ಸ್‌ಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ವಿಶ್ವವಿದ್ಯಾಲಯಗಳಿಗೂ ಆಪತ್ತು ತರಲಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಎಚ್ಚರಿಸಿದರು. ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜುಕೇಷನ್‌ ವತಿಯಿಂದ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸದಿದ್ದರೆ ಸಂಶೋಧನೆಗಾಗಿ ಕೇಂದ್ರದಿಂದ …

Read More »

ದ್ವಿಶತಕ ತಲುಪಿದ ಬೀನ್ಸ್ ದರ

ಕಾರವಾರ: ಅತಿಯಾದ ಬಿಸಿಲು, ಹೆಚ್ಚಿದ ಆರ್ದ್ರತೆಯಿಂದ ಕಂಗೆಟ್ಟಿರುವ ಕರಾವಳಿ ಭಾಗದ ಜನತೆಗೆ ತರಕಾರಿ, ಹಣ್ಣಿನ ದರದ ಬಿಸಿಯೂ ತಟ್ಟಿದೆ. ಶತಕದ ಆಸುಪಾಸಿನಲ್ಲಿದ್ದ ಬೀನ್ಸ್ ದರವು ಏಕಾಏಕಿ ದ್ವಿಶತಕ ದಾಟಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಮಾರುಕಟ್ಟೆಗೆ ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ತರಕಾರಿ, ಹಣ್ಣು ಪೂರೈಕೆ ಆಗುತ್ತಿದೆ. ಬಿಸಿಲ ಝಳ ಹೆಚ್ಚಿದ ಬಳಿಕ ಬೇಡಿಕೆಯಲ್ಲಿರುವ ತರಕಾರಿ, ಹಣ್ಣುಗಳ ದರ ವಿಪರೀತ ಏರಿಕೆ ಕಂಡಿದೆ. ಕಳೆದ ಎರಡು ವಾರಗಳಿಂದ …

Read More »

ಅಶುದ್ಧ ಕುಡಿಯುವ ನೀರು ಪೂರೈಕೆ

ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದ ಜನರಿಗೆ ಕುಡಿಯಲು ಯೋಗ್ಯವಲ್ಲದ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯರು ತುತ್ತಾಗಿದ್ದಾರೆ. ಗ್ರಾಮಸ್ಥರಿಗೆ ಪ್ರತಿ ದಿನ ನಲ್ಲಿ ಮೂಲಕ ಪೂರೈಸುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮಸ್ಥರು ಪಕ್ಕದ ನಾಗನೂರ ಅಥವಾ ನವಲಗುಂದ ಪಟ್ಟಣಕ್ಕೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಕೆರೆಯ ನೀರು ಶುದ್ಧವಾಗಿಲ್ಲ. ಇದೇ ನೀರನ್ನು ಗ್ರಾಮ ಪಂಚಾಯಿತಿಯಿಂದ ಗ್ರಾಮದ ಜನರಿಗೆ ನಿತ್ಯ ಸರಬರಾಜು ಮಾಡಲಾಗುತ್ತಿದೆ. ಗಲೀಜು ಆಗಿರುವ …

Read More »