Breaking News
Home / ಕೊರೊನಾವೈರಸ್ (page 3)

ಕೊರೊನಾವೈರಸ್

ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಶನಿವಾರ ಸದನಕ್ಕೆ ಬಂದಿದ್ದವರಲ್ಲಿ ಆತಂಕ ಸೃಷ್ಟಿಸಿದೆ.

ಬೆಂಗಳೂರು: ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆದ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಶನಿವಾರ ಸದನಕ್ಕೆ ಬಂದಿದ್ದವರಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಶಾಸಕರು ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ದಿನೇಶ್​ ಗುಂಡೂರಾವ್​, ‘ನನಗೆ ಕೋವಿಡ್​ ರೋಗಲಕ್ಷಣ ಇಲ್ಲರಲ್ಲ. ಆದರೆ ಕೋವಿಡ್ ಟೆಸ್ಟ್​ನ ವರದಿ ಪಾಸಿಟಿವ್​ ಬಂದಿದೆ. ನಿಮ್ಮೆಲ್ಲರ ಹಾರೈಕೆಯಿಂದ ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಕೋವಿಡ್​ …

Read More »

ಹಿಮಾಲಯ ಕರಗಲ್ಲ ಅಂತಾ ಅಂದುಕೊಂಡಿದ್ವಿ. ಆದ್ರೆ ಇವತ್ತು ಕರಗಿ ಹೋಯ್ತು. ಎಸ್.ಪಿ.ಬಿ ಅವರು ನಾದಬ್ರಹ್ಮ ಹಂಸಲೇಖ

  ಬೆಂಗಳೂರು : ಎಸ್​ಪಿಬಿ ವಿದ್ಯೆಯಲ್ಲೇ ವಿದ್ಯಾವಂತರು. ನನ್ನ ಲೌಖಿಕ ಜ್ಞಾನದಿಂದ ನಾನು ಬದುಕು ಕಟ್ಟಿಕೊಂಡೆ ಅಂತಾ ತಿಳಿಸುತ್ತಿದ್ರು. ಜಾಣತನದಿಂದ ಜ್ಞಾನವನ್ನು ಖರ್ಚು ಮಾಡಿ ಅಂತಾ ಎಸ್.ಪಿ.ಬಿ ತಿಳಿಸುತ್ತಿದ್ರು. ನನ್ನ ಸಂಗೀತದ ಸಂಗಾತಿ ಎಸ್.ಪಿ.ಬಿ. ನಾನು ಮಾಡಬೇಕಿರೋ ಕೆಲಸವನ್ನು ನೆನಪಿಸಿಕೊಟ್ಟು ಹೋದ್ರು. ಎಸ್.ಪಿ.ಬಿಯನ್ನು ಗುರುತಿಸಿದವರು ಎಸ್.ಜಾನಕಿ ಅಮ್ಮ. ಹೈದರಾಬಾದ್ನಲ್ಲಿ ಯಾವುದೋ ಒಂದು ಕಾಂಪಿಟೇಷನಲ್ಲಿ ಎಸ್.ಪಿ.ಬಿ ಎರಡನೇ ಸ್ಥಾನ ಗಿಟ್ಟಿಸಿದ್ರು. ಅವರನ್ನು ಗುರುತಿಸಿ ತಂದವರು ಎಸ್.ಜಾನಕಿ. ಪಂಚಾಕ್ಷರಿ ಗವಾಯಿ ಸಿನಿಮಾದಲ್ಲಿ ನಮ್ಮಿಬ್ಬರ …

Read More »

ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಕೆಲ ಹೊತ್ತಲ್ಲೇ ಎಂಜಿಎಂ ಆಸ್ಪತ್ರೆಯಿಂದ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ.

ಚೆನ್ನೈ: ಖ್ಯಾತ ಗಾಯಕ, ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಕೆಲ ಹೊತ್ತಲ್ಲೇ ಎಂಜಿಎಂ ಆಸ್ಪತ್ರೆಯಿಂದ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಗಾಯಕನ ಕೋಟ್ಯಂತರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೆ.5ರಂದು ವೈದ್ಯರ ಸಲಹೆ ಮೇರೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ತೊಂದರೆ ಹಾಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಗುಣಮುಖರಾಗಿದ್ದಾರೆ …

Read More »

ನನಗೆ ಕೊರೊನಾ ವೈರಸ್ ಬಂದಿದೆ ಮುಟ್ಟಿ ನೋಡೋಣ ಎಂದು ಮಹಿಳೆಯೊಬ್ಬರು ಹೆದರಿಸುತ್ತಾ ರಸ್ತೆಯಲ್ಲಿ ಓಡಾಡಿದ್ದಾಳೆ.

ಹಾಸನ : ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು ಕೆ.ಎಸ್.ಆರ್.ಟಿ.ಸಿ ಬಸ್ ಒಂದಕ್ಕೆ ಅಡ್ಡಲಾಗಿ ಮಲಗಿ ರಂಪಾಟ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದಲ್ಲಿ, “”ನನಗೆ ಕೊರೊನಾ ವೈರಸ್ ಬಂದಿದೆ ಮುಟ್ಟಿ ನೋಡೋಣ” ಎಂದು ಮಹಿಳೆಯೊಬ್ಬರು ಹೆದರಿಸುತ್ತಾ ರಸ್ತೆಯಲ್ಲಿ ಓಡಾಡಿದ್ದಾಳೆ. ಮಹಿಳೆ ಅಡ್ಡ ಬಂದ ಪರಿಣಾಮ ಕೆ.ಎಸ್‍.ಆರ್.ಟಿ.ಸಿ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಕೆಳಗೆ ಅಡ್ಡಲಾಗಿ ಮಲಗಿದ ಮಹಿಳೆ ಬಸ್ …

Read More »

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆದರಿಂದ ಲೋಕಲ್‌ ಲಾಕ್‌ಡೌನ್‌ ಮಾಡುವುದಾಗಿ ಘೋಷಿಸಿದ್ದಾರೆ.

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನ ನಿಯಂತ್ರಣಕ್ಕೆ ತರುವುದು ಅತಿಮುಖ್ಯವಾಗಿದೆ. ಹಾಗಾಗಿ ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಂದು ಯೋಜನೆಯನ್ನ ಹಾಕಿಕೊಂಡಿದ್ದು, ಲೋಕಲ್‌ ಲಾಕ್‌ಡೌನ್‌ ಮಾಡುವುದಾಗಿ ಘೋಷಿಸಿದ್ದಾರೆ. ಹೌದು, ಕೊರೊನಾ ಸೋಂಕು ನಿಯಂತ್ರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯಿಂದ ಟ್ವೀಟ್‌ ಮಾಡಿದ್ದು, 1-2 ದಿನಗಳ ಲೋಕಲ್‌ ಲಾಕ್‌ಡೌನ್‌ ಮಾಡಲಾಗುವುದು ಎಂದಿದ್ದಾರೆ. ಈ ಲೋಕಲ್‌ ಲಾಕ್‌ಡೌನ್‌ ಕೊರೊನಾ ನಿಯಂತ್ರಿಸುವಲ್ಲಿ ಇದು ಎಷ್ಟು ಪ್ರಭಾವಶಾಲಿಯಾಗಲಿದೆ …

Read More »

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾದವರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌

ಬೆಂಗಳೂರು : ಸರಕಾರದ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾದವರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಕೋವಿಡ್ ಚಿಕಿತ್ಸೆ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ನಿಯಮ 69ರ ಅಡಿ ಪ್ರಸ್ತಾಪಿಸಿದ ವಿಷಯಗಳಿಗೆ ಮಂಗಳವಾರ ಅವರು ಉತ್ತರ ನೀಡಿದರು. ಚರ್ಚೆ ವೇಳೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು, ಕೊರೋನ ಚಿಕಿತ್ಸೆ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು …

Read More »

ಇಂದು 7,339 ಮಂದಿಗೆ ಕೊರೊನಾ – 9,925 ಡಿಸ್ಚಾರ್ಜ್

ಬೆಂಗಳೂರು: ಇಂದು ಹೊಸದಾಗಿ 7,339 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, 122 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‍ನಲ್ಲಿ 7,339 ಮಂದಿಗೆ ಸೋಂಕು ಬಂದಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,26,876ಕ್ಕೆ ಏರಿಕೆಯಾಗಿದೆ. ಈ ಪೈಕಿ 95,335 ಸಕ್ರಿಯ ಪ್ರಕರಣಗಳಿದ್ದು, 4,23,377 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಇಂದು 9,925 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 122 ಮಂದಿ ಸಾವನ್ನಪ್ಪುವ …

Read More »

ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ.

ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ಗೆದ್ದು ಬಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಿಷ್ಯದಲ್ಲಿ ಭಾರತ ಬ್ರೆಜಿಲ್ ಹಿಂದಿಕ್ಕಿ ವಿಶ್ವದ ಅಗ್ರ ಸ್ಥಾನವನ್ನು ತಲುಪಿದೆ. ಇಲ್ಲಿಯವರೆಗೆ ಭಾರತದಲ್ಲಿ 38 ಲಕ್ಷ 59 ​​ಸಾವಿರ 399 ರೋಗಿಗಳು ಕೊರೊನಾ ಸೋಲಿಸಿದ್ದಾರೆ. ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಬ್ರೆಜಿಲ್ ನಲ್ಲಿ 37 ಲಕ್ಷ 23 ಸಾವಿರ 206 ಸೋಂಕಿತರು ಗುಣಮುಖರಾಗಿದ್ದಾರೆ. ಬ್ರೆಜಿಲ್ …

Read More »

ಬೆಳಗಾವಿ, ಹುಬ್ಬಳ್ಳಿ ಕಲ್ಯಾಣ ಜ್ಯುವೆಲರ್ಸ್ ಕಳ್ಳತನ:

ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆಯ ಕಲ್ಯಾಣ ಜ್ಯುವೆಲರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ವಿಜಯನಗರದದ ನಿವಾಸಿ ವಿರಕ್ತಾನಂದ ಅಲಿಯಾಸ್ ಸಂತೋಷ್ ಮಹದೇವಪ್ಪ ಕಟಗಿ, ಗದಗದ ಶರತ್ ಶ್ರೀಕಾಂತ್ ಕಾರಂತ ಬಂಧಿತರು. ಪೊಲೀರು ಬಂಧಿತರಿಂದ 8 ಲಕ್ಷ 27 ಸಾವಿರ ಮೌಲ್ಯದ 130.681 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಅಂಗಡಿಯೊಂದರಲ್ಲಿ ಗ್ರಾಹಕರಂತೆ ಚಿನ್ನಾಭರಣ ಖರೀದಿಗೆಂದು …

Read More »

ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

ಧಾರವಾಡ: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ ಪೀರಸಾಬ್ ನದಾಫ (38) ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಕೊಲೆಯಾದವನು. ಕಳೆದ ಮೂರು ವರ್ಷಗಳಿಂದ ಪೀರಸಾಬ್ ನದಾಫ ಪತ್ನಿ ಪರ್ವಿನ್ ಬಾನುಗೆ ಸೋಮಯ್ಯ ಪೂಜಾರ ಜೊತೆ ಅನೈತಿಕ ಸಂಬಂಧ ಇತ್ತು. ಇದೇ ವಿಷಯವಾಗಿ ಪತಿ ಪೀರಸಾಬ್ ಹಾಗೂ ಪತ್ನಿ ಪರ್ವಿನ್ ಬಾನು ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು …

Read More »