Breaking News
Home / ಕೊರೊನಾವೈರಸ್ (page 12)

ಕೊರೊನಾವೈರಸ್

ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಬಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಸಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ …

Read More »

ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ………

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರೋಗಿಗಳ ಜೀವ ಉಳಿಸಲು ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿಷ್ಠ ಮೆರೆಯುತ್ತಿದ್ದಾರೆ. ಇದೀಗ ಏಮ್ಸ್ ವೈದ್ಯರೊಬ್ಬರು ತಮ್ಮ ರಕ್ಷಣೆಗೆ ಹಾಕಿಕೊಂಡಿದ್ದ ಫೇಸ್ ಶೀಲ್ಡ್ ತೆಗೆದು ಕೋವಿಡ್-19 ರೋಗಿಯ ಜೀವ ಉಳಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಝಹೀದ್ ಅಬ್ದುಲ್ ಮಜೀದ್ ತಮ್ಮ ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ …

Read More »

ಲಾಕ್‍ಡೌನ್‍ನಿಂದ ಮದ್ವೆ ಮುಂದೂಡಿಕೆ – ಮನನೊಂದು ಪ್ರೇಮಿಗಳು ಆತ್ಮಹತ್ಯೆ

ಹೈದರಾಬಾದ್: ಕೊರೊನಾ ಲಾಕ್‍ಡೌನ್‍ನಿಂದ ಮದುವೆಯನ್ನು ಮುಂದೂಡಿದ್ದರಿಂದ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೆಂಡೂರ್ ಗಣೇಶ್ (22) ಮತ್ತು ಸೋಯಂ ಸೀತಾಬಾಯಿ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಶುಕ್ರವಾರ ನಾರ್ನೂರ್ ಮಂಡಲದ ಕಣ್ಣಾಪುರ ಗ್ರಾಮದ ಕೃಷಿ ತೋಟದಲ್ಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏನಿದು ಪ್ರಕರಣ? ರೈತ ಗಣೇಶ್ ಮತ್ತು ಅದೇ ಗ್ರಾಮದ ಸೀತಾಬಾಯಿ ಇಬ್ಬರು ಎರಡು ವರ್ಷಗಳಿಂದ ಪರಸ್ಪರ …

Read More »

ತಣ್ಣಗಿದ್ದ ಹೊಂಗಸಂಧ್ರದಲ್ಲಿ ಮತ್ತೆ ಕೊರೊನಾ – ಕ್ವಾರಂಟೈನ್ ಮುಗಿಸಿದ್ದ 5 ಮಂದಿಗೆ ಸೋಂಕು

ಬೆಂಗಳೂರು: ಹೊಂಗಸಂಧ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂಧ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂಧ್ರದಲ್ಲಿ ಭೀತಿ ಎದುರಾಗಿದೆ. ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ …

Read More »

ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವೇ ಇಲ್ಲ: ಸುಪ್ರೀಂಕೋರ್ಟ್,ಆದರೆ ಸಾಮಾಜಿಕ ಅಂತರ ಕಾಪಾಡಿ……….

ನವದೆಹಲಿ: ದೇಶಾದ್ಯಂತದ ಮದ್ಯದಂಗಡಿಗಳಲ್ಲಿ ಜನಸಂದಣಿ ಕಡಿಮೆಗೊಳಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಮಯವನ್ನು ಜಾರಿಗೊಳಿಸಲು ಹೋಮ್ ಡೆಲಿವರಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕೆಲ ರಾಜ್ಯಗಳು ಸುಪ್ರೀಂ ಕೋರ್ಟಿಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಸಲ್ಲಿಸಿದ್ದವು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯ ಪೀಠವು ವಿಡಿಯೋ …

Read More »

ಅನಿವಾಸಿ ಭಾರತೀಯರನ್ನ ಕರೆ ತರಲು ಮುಂದಾದ ಕೇಂದ್ರ- ಹೊರ ರಾಜ್ಯದ ಕನ್ನಡಿಗರನ್ನ ಮರೆತ ರಾಜ್ಯ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು ಇಂದಿನಿಂದ ಆಪರೇಷನ್ ಏರ್ ಲಿಫ್ಟ್ ಮತ್ತು ಸಮುದ್ರ ಸೇತು ಹೆಸರಿನಲ್ಲಿ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ಕರೆತರುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಹೊರ ರಾಜ್ಯಗಳಲ್ಲಿರುವ ಕನ್ನಡಗರನ್ನು ಮರೆತಂತೆ ಭಾಸವಾಗುತ್ತಿದೆ. ಕೊರೊನಾ ಲಾಕ್‍ಡೌನ್‍ನಿಂದ ಅನ್ಯ ರಾಜ್ಯಗಳಲ್ಲಿ ಕನ್ನಡಿಗರು ಸಂಕಷ್ಟದಲ್ಲಿದ್ದು ದೆಹಲಿ, ಪಂಜಾಬ್, ಚಂಡೀಗಢ್, ಹರ್ಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕನ್ನಡಿಗರು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರನ್ನು ವಾಪಸ್ ಕರೆತರುವ ಬಗ್ಗೆ …

Read More »

ಬಾಗಲಕೋಟೆ ಗರ್ಭಿಣಿ ಕುಟುಂಬದವರ 8 ಜನರ ವರದಿ ನೆಗೆಟಿವ್

ಬಾಗಲಕೋಟೆ: ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿಯ ಕುಟುಂಬಸ್ಥರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಧ್ಯಮ ಬುಲೆಟಿನ್ ನಲ್ಲಿ 12 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದ್ರೆ ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರಿಗೆ ಸೋಂಕು ತಗುಲಿಲ್ಲ ಎಂಬುವುದು ವರದಿಯಲ್ಲಿ ಬಂದಿದೆ. ಜಿಲ್ಲಾಡಳಿತ ಇಂದು ಗ್ರಾಮದ 45 ಜನರ ಗಂಟಲು ದ್ರವ ಪರೀಕ್ಷೆ ವರದಿ ನಿರೀಕ್ಷೆಯಲ್ಲಿದೆ. ಸದ್ಯ ಡಾಣಕಶಿರೂರು ಗ್ರಾಮಸ್ಥರಲ್ಲಿ ಯಾರ ವರದಿ ಪಾಸಿಟಿವ್ …

Read More »

ಮೆಗಾ ಏರ್‌ಲಿಫ್ಟ್ – ಬೆಂಗಳೂರಿಗೆ 3 ವಿಮಾನಗಳಲ್ಲಿ ಬರಲಿದ್ದಾರೆ 800 ಮಂದಿ…………

ನವದೆಹಲಿ: ದೇಶದಲ್ಲಿ ಕೊರೋನಾ ವಿಜೃಂಭಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ಕರೆತರಲು ಕರೆತರಲು ಯೋಜನೆ ರೂಪಿಸಿದೆ. ವಿದೇಶಗಳಲ್ಲಿ 1.95 ಕೋಟಿ ಭಾರತೀಯರು ನೆಲೆಸಿದ್ದು, 15 ಲಕ್ಷ ಮಂದಿ ದೇಶಕ್ಕೆ ವಾಪಸ್ ಆಗಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 2.5 ಲಕ್ಷ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮೇ 7ರಿಂದ ಮೇ 13ರವರೆಗೂ …

Read More »

ವರ್ಗಾವಣೆಯಾಗ್ತಿದ್ದಂತೆ ನಾಲ್ವರಿಗೆ ಮುಂಬಡ್ತಿ ನೀಡಿದ ಕರ್ನಾಟಕ ಭವನದ ನಿವಾಸಿ ಆಯುಕ್ತರು

ನವದೆಹಲಿ: ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್ ಮಿತಾಶ್ ತಮ್ಮ ನಿರ್ಗಮನ ವೇಳೆ ನಾಲ್ವರು ಉದ್ಯೋಗಿಗಳಿಗೆ ಮುಂಬಡ್ತಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನಿಲಯ್ ಮಿತಾಶ್ ಅವರು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಗೆ ನೇಮಕವಾದ ಹಿನ್ನೆಲೆ ವಿ. ವಿಧ್ಯಾವತಿಯವರನ್ನು ಕರ್ನಾಟಕ ಭವನದ ನಿವಾಸಿ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿಲಯ್ ಮಿತಾಶ್ ತಮ್ಮ ನಿರ್ಗಮನದ ಮುನ್ನ ಸಹಾಯಕ ಸಮನ್ವಯ ಅಧಿಕಾರಿಗಳಾಗಿದ್ದ ಕುಸುಮಾ …

Read More »

‘ನೀವೇ ನಮ್ಮ ದೇಶದ ಆರ್ಥಿಕತೆ’- ಎಣ್ಣೆಗೆ ಕ್ಯೂ ನಿಂತವ್ರ ಮೇಲೆ ಹೂಮಳೆ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಅಥವಾ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಈ ಲಾಕ್ ಡೌನ್ ಅನ್ನು ಸ್ವಲ್ಪ ಮಟ್ಟಿನಲ್ಲಿ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಆರಂಭಿಸಲಾಗಿದೆ. ಹೀಗಾಗಿ ಜನ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ. ಅಂತೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಕ್ಯೂ ನಿಂತ ಮದ್ಯಪ್ರಿಯರ ಮೇಲೆ ವ್ಯಕ್ತಿಯೊಬ್ಬ ಹೂಮಳೆ ಸುರಿಸಿದ್ದಾರೆ. ಹೌದು. ಮದ್ಯದಂಗಡಿ ನಿನ್ನೆ ಆರಂಭವಾಗಿದ್ದು, ಇಂದು ಕೂಡ ಜನ …

Read More »