ಬೆಂಗಳೂರು: ಹೊಂಗಸಂಧ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂಧ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂಧ್ರದಲ್ಲಿ ಭೀತಿ ಎದುರಾಗಿದೆ.
ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ ಮುಗಿದ ನಂತರ ಮತ್ತೆ ಟೆಸ್ಟ್ ಗೆ ಒಳಪಡಿಸಿದ್ದಾರೆ. 2ನೇ ಟೆಸ್ಟ್‌ನಲ್ಲಿ ಬರೋಬ್ಬರಿ 5 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾದ ಐದು ಜನರಲ್ಲಿ ಒಬ್ಬರು ಅಲ್ಲಿನ ಸ್ಥಳೀಯರು, ಮೂವರು ಕೂಲಿ ಕಾರ್ಮಿಕರು ಮತ್ತು ಒಬ್ಬರು ಕನ್ನಡಿಗರಿದ್ದಾರೆ.
ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದುದ್ದರಿಂದ ಇವರು ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ. ಅಲ್ಲಿನ ಶೆಡ್‍ನಲ್ಲಿದ್ದವರು ಎನ್ನಲಾಗುತ್ತಿದೆ. ಈಗ ಈ ಐದು ಜನರ ಬಗ್ಗೆ ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದ್ದು, ಮತ್ತಷ್ಟು ಜನರನ್ನ ಟೆಸ್ಟ್‍ಗೆ ಒಳಪಡಿಸುವ ಸಾಧ್ಯತೆ ಇದೆ. ಕ್ವಾರಂಟೈನ್‍ನಲ್ಲಿದ್ದ ಐದು ಜನರಿಗೆ ಪಾಸಿಟಿವ್ ಬಂದಿರುವುದು ಆರೋಗ್ಯ ಇಲಾಖೆ ಮತ್ತಷ್ಟು ಆತಂಕ ಹೆಚ್ಚಾಗಿದೆ